More

    ಈಗ ‘ಎಕ್ಸ್’​ನಲ್ಲೇ ಕೆಲಸವೂ ಸಿಗಲಿದೆ: ಲಿಂಕ್ಡ್​ಇನ್​ಗೆ ಪೈಪೋಟಿ?

    ನವದೆಹಲಿ: ಮೈಕ್ರೋಬ್ಲಾಗಿಂಗ್​ ಸೋಷಿಯಲ್ ಮೀಡಿಯಾ ಆ್ಯಪ್ ಆಗಿದ್ದ ಟ್ವಿಟರ್​ ಉದ್ಯಮಿ ಎಲಾನ್ ಮಸ್ಕ್ ಒಡೆತನಕ್ಕೆ ಬಂದ ಮೇಲೆ ಅದರ ಹೆಸರು ‘ಎಕ್ಸ್’ ಎಂದು ಬದಲಾಗಿದೆ. ಮಾತ್ರವಲ್ಲ, ‘ಎಕ್ಸ್’​ನಲ್ಲಿ ಹೊಸ ಹೊಸ ಫೀಚರ್ ಬಿಡುತ್ತಿರುವ ಎಲಾನ್ ಮಸ್ಕ್ ಇದೀಗ ತಮ್ಮ ಆ್ಯಪ್ ಬಳಕೆದಾರರಿಗೆ ಉದ್ಯೋಗ ಒದಗಿಸಲಿಕ್ಕೂ ಮುಂದಾಗಿದ್ದಾರೆ.

    ಎಕ್ಸ್​​ನ ಪ್ರೀಮಿಯಂ ವರ್ಷನ್​ನಲ್ಲಿ ವೈಯಕ್ತಿಕ ಹಾಗೂ ಸಾಂಸ್ಥಿಕ ಎಂದು ಎರಡು ಕೆಟಗರಿ ಮಾಡಿರುವ ಮಸ್ಕ್​, ವೈಯಕ್ತಿಕ ಖಾತೆಗೆ ಬ್ಲೂ ಟಿಕ್, ಸಾಂಸ್ಥಿಕ ಖಾತೆಗೆ ಗೋಲ್ಡ್ ಟಿಕ್ ಕೊಡುತ್ತಿದ್ದಾರೆ. ಅಲ್ಲದೆ ತನ್ನ ಪ್ರೀಮಿಯಂ ಬಳಕೆದಾರರಿಗೆ ಮಾನಿಟೈಸೇಷನ್​ ಸೌಲಭ್ಯ ಕೂಡ ನೀಡುತ್ತಿದ್ದು, ಎಕ್ಸ್ ಪ್ರೀಮಿಯಂ ಖಾತೆ ಹೊಂದಿರುವವರು ಆದಾಯ ಕೂಡ ಪಡೆಯಬಹುದಾಗಿದೆ.

    ಇದನ್ನೂ ಓದಿ: ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

    ಈಗ ಎಕ್ಸ್​ನ ಸಾಂಸ್ಥಿಕ ಖಾತೆಗಳಿಗೆ ಎಕ್ಸ್ ಹೈರಿಂಗ್ ಎಂಬ ಬೀಟಾ ಆವೃತ್ತಿ ನೀಡುತ್ತಿದ್ದು, ಇದರಲ್ಲಿ ಆಯಾ ಕಂಪನಿಗಳವರು ತಮ್ಮಲ್ಲಿನ ಖಾಲಿ ಹುದ್ದೆಗಳ ಮಾಹಿತಿಯನ್ನು ಪ್ರೊಫೈಲ್​ನಲ್ಲೇ ನೀಡಬಹುದಾಗಿದೆ. ಮಾತ್ರವಲ್ಲ ಎಕ್ಸ್ ಬಳಕೆದಾರರು ಇಲ್ಲೇ ನೇರವಾಗಿ ಉದ್ಯೋಗಕ್ಕೆ ಕೋರಿಕೆ ಸಲ್ಲಿಸಬಹುದಾಗಿದೆ. ಈ ಮೂಲಕ ಎಕ್ಸ್ ಮುಂದೆ ಲಿಂಕ್ಡ್​ಇನ್​ಗೆ ಪ್ರತಿಸ್ಪರ್ಧಿಯಾಗಿ ಬೆಳೆದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ.

    ಪ್ಲ್ಯಾಸ್ಟಿಕ್​ ಕಪ್​ನಷ್ಟೇ ಪೇಪರ್ ಕಪ್​ ಕೂಡ ಪರಿಸರಕ್ಕೆ ಹಾನಿಕರ; ಅಧ್ಯಯನದಲ್ಲಿ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts