More

  ಯಶಸ್ವೀ ಉಡಾವಣೆ ನಂತರ ಪಿಎಸ್‍ಎಲ್‍ವಿ ರಾಕೆಟ್‍ನಿಂದ ಬೇರ್ಪಟ್ಟ ಆದಿತ್ಯ ಎಲ್‍-1; ಹೀಗಿದೆ ಇಸ್ರೋ ಮುಖ್ಯಸ್ಥರ ಪ್ರತಿಕ್ರಿಯೆ…

  ನವದೆಹಲಿ: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಬೆಳಿಗ್ಗೆ 11.50ಕ್ಕೆ ಸೂರ್ಯನ ಅಧ್ಯಯನಕ್ಕಾಗಿ ಹೊರಟ ಒಂದು ಗಂಟೆಯ ನಂತರ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಅಥವಾ PSLV ರಾಕೆಟ್‍ನಲ್ಲಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಬೇರ್ಪಡಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ. ಆದಿತ್ಯ-ಎಲ್ 1 ಈಗ 125 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಯಾನ ಮಾಡಲಿದ್ದು ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಮುಂದುವರಿಸಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಶನಿವಾರ ತಿಳಿಸಿದೆ.

  ಬಾಹ್ಯಾಕಾಶ ನೌಕೆಯನ್ನು ನಿಖರವಾದ ಕಕ್ಷೆಯಲ್ಲಿ” ಸೇರಿಸಲಾಗಿದೆ ಎಂದು ಎಸ್ ಸೋಮನಾಥ್ ಹೇಳಿದರು. “ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು 235 ರಿಂದ 19,500 ಕಿ.ಮೀ ವ್ಯಾಸದ ಅಂಡಾಕಾರದ ಕಕ್ಷೆಗೆ ಸೇರಿಸಲಾಗಿದೆ, ಇದನ್ನು PSLV ರಾಕೆಟ್ ಮೂಲಕ ಬಹಳ ನಿಖರವಾಗಿ ಸಾಧಿಸಲಾಗಿದೆ” ಎಂದು ಅವರು ಹೇಳಿದರು.

  ಇದನ್ನೂ ಓದಿ: ಇಸ್ರೋ ಸೂರ್ಯ ಶಿಕಾರಿ! ಆದಿತ್ಯ-ಎಲ್ 1 ಮಿಷನ್​ನ ಒಟ್ಟು ವೆಚ್ಚ, ಪ್ರಯಾಣದ ದಿನ, ಕ್ರಮಿಸುವ ದೂರವೆಷ್ಟು?

  “ಆದಿತ್ಯ ಎಲ್-1 ಮಿಷನ್ ಮಾಡಲು ಇಂತಹ ವಿಭಿನ್ನ ವಿಧಾನಕ್ಕಾಗಿ ನಾನು PSLV ರಾಕೆಟ್‍ಅನ್ನು ಅಭಿನಂದಿಸುತ್ತೇನೆ. ಇಂದಿನಿಂದ, ಮಿಷನ್ ಎಲ್-1 ಸೂರ್ಯನ ಕಡೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಇದು ಸುಮಾರು 125 ದಿನಗಳ ಸುದೀರ್ಘ ಪ್ರಯಾಣವಾಗಿರಲಿದೆ. ಆದಿತ್ಯ ಬಾಹ್ಯಾಕಾಶ ನೌಕೆಗೆ ಶುಭ ಹಾರೈಸೋಣ” ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

  ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಯೋಜನಾ ನಿರ್ದೇಶಕ ನಿಗರ್ ಶಾಜಿ ಮತ್ತು ಮಿಷನ್ ನಿರ್ದೇಶಕ ಬಿಜು ಅವರೊಂದಿಗೆ ಮಿಷನ್ ಕಂಟ್ರೋಲ್ ಸೆಂಟರ್ನಿಂದ ಮಾತನಾಡಿದ ಅವರು, “ಇಂದಿನಿಂದ ಆದಿತ್ಯ ಎಲ್-1 125 ದಿನಗಳ ಕಾಲ ಸೂರ್ಯನ ಕಡೆಗೆ ದೀರ್ಘ ಪ್ರಯಾಣವನ್ನು ಕೈಗೊಳ್ಳಲಿದೆ” ಎಂದು ಹೇಳಿದರು. ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಇಂದಿನ ಸಾಧನೆಯನ್ನು ಅದ್ಭುತ ಎಂದು ಬಣ್ಣಿಸಿದ್ದು ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.

  ಇದನ್ನೂ ಓದಿ: ಆದಿತ್ಯ-ಎಲ್1 ಯಶಸ್ಸಿಗೆ ಕುಕ್ಕೆಯಲ್ಲಿ ಪ್ರಾರ್ಥನೆ: ಇಸ್ರೋ ನಿರ್ದೇಶಕಿ ಸಂಧ್ಯಾ ವಿ. ಶರ್ಮಾರಿಂದ ಮಹಾಪೂಜೆ ಸೇವೆ

  ಸೂರ್ಯ ದೈತ್ಯ ಅನಿಲದ ಗೋಳವಾಗಿದ್ದು ಆದಿತ್ಯ ಎಲ್-1 ಅದರ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡುತ್ತದೆ. ಆದಿತ್ಯ ಎಲ್-1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಅದನ್ನು ಹತ್ತಿರಕ್ಕೆ ಸಮೀಪಿಸುವುದಿಲ್ಲ ಎಂದು ಇಸ್ರೋ ಹೇಳಿದೆ.

  ಸೂರ್ಯನಿಗೆ ಹತ್ತಿರವೆಂದು ಪರಿಗಣಿಸಲಾದ ಲ್ಯಾಗ್ರಾಂಜಿಯನ್ ಪಾಯಿಂಟ್ ಎಲ್-1 ರ ಸುತ್ತಲಿನ ಹ್ಯಾಲೋ ಕಕ್ಷೆಯನ್ನು ತಲುಪಲು ಇದು 125 ದಿನಗಳ ಕಾಲ ಪ್ರಯಾಣಿಸುವ ನಿರೀಕ್ಷೆಯಿದೆ. ಸುಮಾರು 1480.7 ಕೆಜಿ ತೂಕದ ಆದಿತ್ಯ ಎಲ್ 1, ಸೂರ್ಯನನ್ನು ಅಧ್ಯಯನ ಮಾಡುವ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯವಾಗಲಿದೆ.

  ಇದನ್ನೂ ಓದಿ: ಆದಿತ್ಯ ಎಲ್​-1 ಮಿಷನ್​: ಇಸ್ರೋದಿಂದ ತಿರುಪತಿಯಲ್ಲಿ ಮತ್ತೆ ಪೂಜೆ

  ಆದಿತ್ಯ-ಎಲ್ 1 ಮಿಷನ್ನ ಉದ್ದೇಶಗಳು ಕರೋನಲ್ ತಾಪನ, ಸೌರ ಮಾರುತಗಳ ವೇಗವರ್ಧನೆ, ಕರೋನಲ್ ಮಾಸ್ ಎಜೆಕ್ಷನ್ಸ್ (ಸಿಎಂಇ), ಸೌರ ವಾತಾವರಣದ ಡೈನಾಮಿಕ್ಸ್ ಮತ್ತು ತಾಪಮಾನ ಅನಿಸೊಟ್ರೋಪಿಯ ಅಧ್ಯಯನವನ್ನು ಒಳಗೊಂಡಿದೆ.

  ಶನಿವಾರದ ಉಡಾವಣೆಯ ನಂತರ ಆದಿತ್ಯ-ಎಲ್ 1 ಭೂಮಿಯ ಕಕ್ಷೆಯಲ್ಲಿ 16 ದಿನಗಳ ಕಾಲ ಉಳಿಯುತ್ತದೆ, ಈ ಸಮಯದಲ್ಲಿ ಅದು ಸೂರ್ಯನ ಕಡೆಗೆ ಪ್ರಯಾಣಿಸಲು ಅಗತ್ಯವಾದ ವೇಗವನ್ನು ಪಡೆಯಲು ಐದು ಮನ್ಯೂವರ್ಗಳಿಗೆ ಒಳಗಾಗುತ್ತದೆ ಎಂಬ ಮಾಹಿತಿ ಲಭಿಸಿದೆ. (ಏಜೆನ್ಸೀಸ್)

  ಇದನ್ನೂ ಓದಿ: ಇಸ್ರೋ ನೌಕರನ ಮೇಲೆ ಸವಾರ ಪುಂಡಾಟ; ಠಾಣೆಗೆ ಕರೆತಂದು ಎಚ್ಚರಿಕೆ ಕೊಟ್ಟ ಪೊಲೀಸ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts