More

    ಚಂದ್ರಯಾನ-3, ಆದಿತ್ಯ ಎಲ್-1 ನಂತರ LIGO; ಏನಿದು ವಿನೂತನ ಯೋಜನೆ?

    ಬೆಂಗಳೂರು: ಭಾರತ ವೈಜ್ಞಾನಿಕ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನು ಇಡಲಾರಂಭಿಸಿದ್ದು, ಇದೀಗ ಚಂದ್ರಯಾನ-3 ಹಾಗೂ ಆದಿತ್ಯ ಎಲ್- 1 ನಂತರ ಮಹತ್ವಾಕಾಂಕ್ಷೆಯ ಯೋಜನೆಗೆ ಮುಂದಾಗಿದೆ. ಈಗಾಗಲೇ ಈ ಯೋಜನೆಗೆ ಸಂಸತ್ತು ಹಸಿರು ನಿಶಾನೆಯನ್ನೂ ನೀಡಿದೆ. ಈ ಯೋಜನೆಯ ಹೆಸರೇ LIGO!

    ಏನಿದು LIGO ಯೋಜನೆ?

    ಲಿಗೋ (LIGO) ಎಂದರೆ ಲೇಸರ್ ಇಂಟರ್ಫೆರೋಮೀಟರ್ ಗ್ರಾವಿಟೇಶನಲ್‍-ವೇವ್ ಒಬ್ಸರ್‍ವೇಟರಿ (ಎಲ್ಐಜಿಒ). ಭಾರತವು ವಿಶ್ವಾದ್ಯಂತದ ನೆಟ್‍ವರ್ಕ್‍ನ ಭಾಗವಾಗಿ ಭಾರತದಲ್ಲಿ ನೆಲೆಗೊಂಡಿರುವ ಯೋಜಿತ ಸುಧಾರಿತ ಗುರುತ್ವ-ತರಂಗ ವೀಕ್ಷಣಾಲಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಪರಿಕಲ್ಪನೆಯ ಪ್ರಸ್ತಾಪವು ಈಗ ಭಾರತ ಮತ್ತು ಅಮೆರಿಕದಲ್ಲಿ ಸಕ್ರಿಯವಾಗಿದ್ದು ಸರ್ಕಾರಗಳ ಪರಿಗಣನೆಯಲ್ಲಿದೆ. ಭಾರತೀಯ ಸಂಶೋಧನಾ ಸಂಸ್ಥೆಗಳ ಒಕ್ಕೂಟ ಮತ್ತು ಅಮೆರಿಕದ ಎಲ್ಐಜಿಒ ಪ್ರಯೋಗಾಲಯ ಮತ್ತು ಅದರ ಅಂತರಾಷ್ಟ್ರೀಯ ಪಾಲುದಾರರ ನಡುವಿನ ಸಹಯೋಗದ ಯೋಜನೆಯಾಗಿ ಲಿಗೊ-ಇಂಡಿಯಾವನ್ನು ರೂಪಿಸಲಾಗಿದೆ.

    ಲಿಗೋ-ಇಂಡಿಯಾ ಫೆಬ್ರವರಿ 2016ರಲ್ಲಿ ಭಾರತ ಸರ್ಕಾರದ ತಾತ್ವಿಕ ಅನುಮೋದನೆಯನ್ನು ಪಡೆಯಿತು. ಅಂದಿನಿಂದ ಯೋಜನೆಯು ಸ್ಥಳವನ್ನು ಆಯ್ಕೆ ಮಾಡುವ ಮತ್ತು ಸ್ವಾಧೀನಪಡಿಸಿಕೊಳ್ಳುವ ಮತ್ತು ವೀಕ್ಷಣಾಲಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ.

    ಭಾರತದ ಮಣ್ಣಿಸಲ್ಲಿ ಗುರುತ್ವಾಕರ್ಷಣ ತರಂಗ ಪತ್ತೆ ಯಂತ್ರ

    ಲಿಗೋ-ಇಂಡಿಯಾ ಯೋಜನೆಯನ್ನು ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆ (ಡಿಎಇ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ (ಎನ್ಎಸ್ಎಫ್) ಮತ್ತು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಶೋಧನಾ- ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆಯೊಂದಿಗೆ ನಿರ್ಮಿಸಲಿದೆ. ಈ ಯೋಜನೆಯನ್ನು ನಾಲ್ಕು ಸಂಸ್ಥೆಗಳು ಮುನ್ನಡೆಸುತ್ತಿವೆ:

    LIGO ಏನು ಮಾಡುತ್ತೆ? ಹೇಗಿರಲಿದೆ?

    ಬಾಹ್ಯಾಕಾಶವನ್ನು ಗಮನಿಸಲು ಬೆಳಕನ್ನೇ ಇಂದಿಗೂ ಅವಲಂಬಿಸಲಾಗುತ್ತದೆ. ಆದರೆ ಬೆಳಕಿಗೂ ವೇಗದ ಮಿತಿ ಇದೆ. ಅದಕ್ಕೂ ಹೆಚ್ಚಿನ ವೇಗದಲ್ಲಿ ಬೆಳಕು ಸಂಚರಿಸಲಾರದು. ಆದರೆ ಗುರುತ್ವಾಕರ್ಷಣ ತಂರಂಗಗಳು ಹಾಗಲ್ಲ. ಅವು ಬೆಳಕಿಗಿಂತಲೂ ವೇಗವಾಗಿ ಸಂಚರಿಸುತ್ತವೆ. ಅವುಗಳ ಮೂಲಕ ಬಾಹ್ಯಾಕಾಶದ ಯಾವ ಭಾಗದಲ್ಲಿ ಏನಾಗುತ್ತಿದೆ ಎನ್ನುವುದನ್ನು ತಿಳಿಯಬಹುದಾಗಿದೆ. ಅದಕ್ಕಾಗಿ ತಂತ್ರಜ್ಞಾನದ ಅಭಿವೃದ್ಧಿಯ ಭಾಗವಾಗಿ ಲಿಗೋ ಕಾರ್ಯನಿರ್ವಹಿಸಲಿದೆ.

    ಲಿಗೋ ಯೋಜನೆಯಲ್ಲಿ ನಾಲ್ಕು ಕಿಮೀ ಉದ್ದದ ಎರಡು ಲಂಬ ಕೋನದ ಟನಲ್‍ಗಳನ್ನು ನಿರ್ಮಿಸಲಾಗುತ್ತದೆ. ಅವುಗಳ ಮೂಲಕ ಬೆಳಕನ್ನು ಹಾಯಿಸಿ ಗುರುತ್ವಾಕರ್ಷಣ ತರಂಗಗಳನ್ನು ಪತ್ತೆಹಚ್ಚುವುದು ಗುರಿಯಾಗಿರಲಿದೆ. ಇದನ್ನು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

    ಭಾರತಕ್ಕೆ LIGO ತರುವ ಲಾಭವೇನು?

    ಲಿಗೋ ಯೋಜನೆಯ ಮೂಲಕ ಭಾರತ ಅನೇಕ ಲಾಭಗಳನ್ನು ಪಡೆಯಲು ಉದ್ದೇಶಿಸಿದೆ. ಈ ಯೋಜನೆಯ ಮೂಲಕ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪ್ರಯೋಗಗಳ ಮೂಲಕ ಭಾರತ ಜಗತ್ತಿನಾದ್ಯಂತ ತನ್ನದೇ ಆದ ಛಾಪು ಮೂಡಿಸಬಹುದಾಗಿದೆ. ಈ ಯೋಜನೆಯ ಮೂಲಕ ಅನೇಕ ರೀತಿಯ ನೂತನ ತಂತ್ರಜ್ಞಾನಗಳನ್ನು ಭಾರತ ಸುಲಭವಾಗಿ ತನ್ನದಾಗಿಸಿಕೊಳ್ಳಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts