ಕೊಡಗು: ಅಪಘಾತ ಪರಿಹಾರ ನೀಡದ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ, ಬಸ್ಸನ್ನೇ ಜಪ್ತಿ ಮಾಡಲು ನ್ಯಾಯಾಲಯ ದೇಶ ನೀಡಿರುವ ಅಪರೂಪದ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಪ್ರಕಾರಣವೇನು?
ಕೊಡಗು ಜಿಲ್ಲೆಯ ವಿರಾಜಪೇಟೆ ನ್ಯಾಯಾಲಯ ಸರ್ಕಾರಿ ಬಸ್ಸನ್ನು ಜಪ್ತಿ ಮಾಡಿದ್ದು ಸುಮಾರು 13 ವರ್ಷಗಳ ನಂತರ ಸಂತ್ರಸ್ತರಿಗೆ ನ್ಯಾಯ ನೀಡಿದೆ. 2010ರಲ್ಲಿ ಹುಣಸೂರಿನಲ್ಲಿ ನಡೆದಿದ್ದ ಕಾರು -ಬಸ್ ಅಪಘಾತ ಪ್ರಕರಣದಲ್ಲಿ ಫಾತೀಮಾ ಅಪ್ಸರ್ ಎನ್ನುವವರು ಕೆಎಸ್‌ಆರ್‌ಟಿಸಿ ಮೇಲೆ ಅಪಘಾತ ವಿಮೆ ಪರಿಹಾರಕ್ಕೆ ದಾವೆ ಹೂಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಪರಿಹಾರ ನೀಡಲು 2020ರಲ್ಲಿ KSRTCಗೆ ಆದೇಶ ನೀಡಿತ್ತು. ಆದರೆ ಪರಿಹಾರ ನೀಡುವ ಬದಲಿಗೆ ತೀರ್ಪನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ KSRTC ಪ್ರಶ್ನಿಸಿತ್ತು. ಅಲ್ಲೂ ವಿಚಾರಣೆ ನಡೆದಾಗ, ರಾಜ್ಯ ಉಚ್ಛ ನ್ಯಾಯಾಲಯವು ಜಿಲ್ಲಾ ನ್ಯಾಯಾಲಯದ ತೀರ್ಪನ್ನೇ ಎತ್ತಿ ಹಿಡಿದಿದೆ.
ಅಪಘಾತ ವಿಮೆ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದರೂ KSRTC ಪರಿಹಾರ ನೀಡದೆ ಕೋರ್ಟ್ ಆದೇಶ ಉಲ್ಲಂಘನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ವಿರಾಜಪೇಟೆ ಪಟ್ಟಣಕ್ಕೆ ಬಂದಿದ್ದ ಬಸ್ಅನ್ನು ವಿರಾಜಪೇಟೆ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.