More

  ಚೀನಾದ ವಿವಾದಾತ್ಮಕ ನಕ್ಷೆಗೆ ಭಾರಿ ವಿರೋಧ; ಭಾರತದ ಬೆಂಬಲಕ್ಕೆ 4 ರಾಷ್ಟ್ರಗಳು!

  ನವದೆಹಲಿ: ಈ ವಾರ ಬಿಡುಗಡೆಯಾದ ಚೀನಾದ ಅಧಿಕೃತ ನಕ್ಷೆಯು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತಾಗಿ ವಿಪಕ್ಷ ನಾಯಕ ರಾಹುಲ್‍ ಗಾಂಧಿ ಕೂಡ ಪ್ರಸ್ತಾಪ ಮಾಡಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದರು. ಇದೀಗ ಶುಭ ಸುದ್ದಿ ಏನೆಂದರೆ, ಚೀನಾ ವಿರುದ್ಧ ದಕ್ಷಿಣ ಏಷ್ಯಾದ ಇನ್ನಿತರ 4 ದೇಶಗಳೂ ದನಿ ಎತ್ತಿವೆ.

  ಇದೀಗ ಚೀನಾದ ನೂತನ ನಕ್ಷೆ, ಸ್ಪ್ರಾಟ್ಲಿ ಮತ್ತು ಪ್ಯಾರಾಸೆಲ್ ದ್ವೀಪಗಳ ಮೇಲಿನ ತನ್ನ ಸಾರ್ವಭೌಮತ್ವ ಮತ್ತು ಅದರ ಸಮುದ್ರದ ಮೇಲಿನ ನ್ಯಾಯವ್ಯಾಪ್ತಿಯನ್ನು ಉಲ್ಲಂಘಿಸುತ್ತದೆ ಎಂದು ವಿಯೆಟ್ನಾಂ ಹೇಳಿದೆ. ಈ ಕುರಿತಾಗಿ ವಿಯೆಟ್ನಾಂನ ಸರ್ಕಾರಿ ಸುದ್ದಿ ವೆಬ್ಸೈಟ್ನಲ್ಲಿ ನೀಡಲಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

  ಇದನ್ನೂ ಓದಿ: ಜಿ20 ಶೃಂಗ ಸಭೆಯಿಂದ ದೂರ ಉಳಿಯಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್

  ನಕ್ಷೆಯಲ್ಲಿನ ನೈನ್ ಡಾಟ್ ರೇಖೆಯ ಆಧಾರದ ಮೇಲೆ ಚೀನಾದ ಸಾರ್ವಭೌಮತ್ವ ಮತ್ತು ಕಡಲ ಹಕ್ಕುಗಳು “ಅಮಾನ್ಯ” ಎಂದು ವಿಯೆಟ್ನಾಂ ವಿದೇಶಾಂಗ ಸಚಿವಾಲಯದ ವಕ್ತಾರ ಫಾಮ್ ಥು ಹಾಂಗ್ ಅವರನ್ನು ಉಲ್ಲೇಖಿಸಿ ತಿಳಿಸಲಾಗಿದೆ. ವಿಯೆಟ್ನಾಂ “ನೈನ್‍ ಡಾಟ್ ರೇಖೆಯ ಆಧಾರದ ಮೇಲೆ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಎಲ್ಲಾ ಹಕ್ಕುಗಳನ್ನು ದೃಢವಾಗಿ ವಿರೋಧಿಸುತ್ತದೆ” ಎಂದು ಹ್ಯಾಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

  ಇತರ ದೇಶಗಳೂ ಚೀನಾದ ಈ ನಕ್ಷೆಯನ್ನು ತಿರಸ್ಕರಿಸಿವೆ. ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಚೀನಾದ ನಿಯಂತ್ರಣದಲ್ಲಿ ತೋರಿಸುವ ನಕ್ಷೆಯ ಒಂದು ಭಾಗವನ್ನು ಭಾರತ ಮಂಗಳವಾರ ಆಕ್ಷೇಪಿಸಿತ್ತು. ಫಿಲಿಪೈನ್ಸ್, ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ವಿಸ್ತಾರವಾದ ಗಡಿಯನ್ನು ಗುರುತಿಸುವುದಿಲ್ಲ ಎಂದು ಹೇಳಿದೆ. ಮಲೇಷ್ಯಾ ಮತ್ತು ತೈವಾನ್ ಸರ್ಕಾರಗಳು, ಚೀನಾ ತಮ್ಮ ಭೂಪ್ರದೇಶವನ್ನು ಕಬಳಿಸಲು ವ್ಯವಸ್ಥಿತವಾಗಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬಲವಾದ ಹೇಳಿಕೆಗಳನ್ನು ನೀಡಿವೆ.

  ಇದನ್ನೂ ಓದಿ: ಚೀನಾದಲ್ಲಿ 393 ಅಡಿ ಎತ್ತರದಲ್ಲಿರುವ ಈ ಅಂಗಡಿಯ ಬಗ್ಗೆ ತಿಳಿದ್ರೆ ಅಚ್ಚರಿ ಖಂಡಿತ: ಇದಕ್ಕಿದೆ ವಿಚಿತ್ರ ಹೆಸರು!

  ಚೀನಾದ ಹೊಸ ನಕ್ಷೆಗೆ ಭಾರತದ ಕರೆಗೆ ಏಷ್ಯಾದ 4 ದೇಶಗಳು ಬೆಂಬಲ

  ನೂತನ ನಕ್ಷೆಯಲ್ಲಿ ದಕ್ಷಿಣ ಚೀನಾ ಸಮುದ್ರದ 80% ಕ್ಕಿಂತ ಹೆಚ್ಚು ಭಾಗವನ್ನು ಚೀನಾ ತನ್ನದೆಂದು ಹೇಳಿಕೊಳ್ಳುತ್ತಿದೆ. ಬೀಜಿಂಗ್ನಲ್ಲಿ ಬುಧವಾರ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ನಕ್ಷೆಯ ಬಗ್ಗೆ ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್, “ಸಂಬಂಧಿತ ಕಡೆಯವರು ವಸ್ತುನಿಷ್ಠವಾಗಿ ಹಾಗೂ ಶಾಂತರಾಗಿದ್ದು ಅತಿಯಾಗಿ ವ್ಯಾಖ್ಯಾನಿಸುವುದನ್ನು ತಪ್ಪಿಸಬಹುದು ಎಂದು ತಮ್ಮ ಸರ್ಕಾರ ಆಶಿಸುತ್ತದೆ” ಎಂದು ಹೇಳಿದರು. ಪ್ರಕಾಶಕರು, ಕಂಪನಿಗಳು ಮತ್ತು ಇತರರು ಉಲ್ಲೇಖಕ್ಕೆ ಅಧಿಕೃತ ಆವೃತ್ತಿಯನ್ನು ಹೊಂದಲು ಚೀನಾ ನಕ್ಷೆಯನ್ನು ಬಿಡುಗಡೆ ಮಾಡಿದೆ. ವಿದೇಶಿ ಸಂಸ್ಥೆಗಳು ಕೆಲವೊಮ್ಮೆ ನಕ್ಷೆಗಳನ್ನು ಹೇಗೆ ಬಳಸುತ್ತವೆ ಎಂಬುದರಿಂದಾಗಿ ಚೀನಾ ಸರ್ಕಾರದೊಂದಿಗೆ ತೊಂದರೆಗೆ ಸಿಲುಕುತ್ತವೆ.

  ದಕ್ಷಿಣ ಚೀನಾ ಸಮುದ್ರದ 80% ಕ್ಕಿಂತ ಹೆಚ್ಚು ಭಾಗವನ್ನು ಚೀನಾ ತನ್ನದೆಂದು ಪ್ರತಿಪಾದಿಸುತ್ತಿದ್ದು ಅದಕ್ಕೆ 1947ರ ನಕ್ಷೆಯನ್ನು ಬಳಸಿ ಸಮರ್ಥಿಸಲು ಪ್ರಯತ್ನಿಸುತ್ತಿದೆ. ಆ ನಕ್ಷೆಯ ಪ್ರಕಾರ ಹೈನಾನ್ ದ್ವೀಪದ ದಕ್ಷಿಣಕ್ಕೆ ಸುಮಾರು 1,100 ಮೈಲಿ (1,800 ಕಿಲೋಮೀಟರ್) ದೂರದಲ್ಲಿ ಅಸ್ಪಷ್ಟ ಡ್ಯಾಶ್‍ಗಳು ಇವೆ. ಆದರೆ ಚೀನಾ ತನ್ನದೆಂದು ಹೇಳಿಕೊಳ್ಳುತ್ತಿರವ ಪ್ರದೇಶದಲ್ಲೇ ವಿಯೆಟ್ನಾಂ, ಫಿಲಿಪೈನ್ಸ್, ಬ್ರೂನಿ, ಮಲೇಷ್ಯಾ ಮತ್ತು ತೈವಾನ್ ದೇಶಗಳ ಕಡಲ ಪ್ರದೇಶಗಳೂ ಸೇರಿದ್ದು, ಗಡಿಗಳು ಎಲ್ಲಿ ಬರುತ್ತವೆ ಎಂಬುದರ ಬಗ್ಗೆ ಈ ನಾಲ್ಕು ದೇಶಗಳು ಭಾರತದೊಂದಿಗೆ ಚೀನಾದ ವಿರೋಧ ಮಾಡಲು ಶುರುಮಾಡಿವೆ. (ಏಜೆನ್ಸೀಸ್)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts