ಬ್ಲ್ಯಾಕ್​​ಮೇಲ್ ಮಾಡ್ತಿದ್ದಾರೆ, ನಾನು ಈಗಾಗಲೇ ಮಾನಸಿಕವಾಗಿ ತುಂಬಾ ನೊಂದಿದ್ದೇನೆ; ಬೇಸರದಿಂದ ಪೋಸ್ಟ್ ಮಾಡಿದ ನಟಿ..

blank

ನವದೆಹಲಿ: ಇತ್ತೀಚೆಗೆ ಸೈಬರ್ ಅಪರಾಧಗಳು ಸಾಕಷ್ಟು ಹೆಚ್ಚಿವೆ. ಸೆಲೆಬ್ರಿಟಿಗಳೂ ಒಂದಲ್ಲ ಒಂದು ರೂಪದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಟಿಯೊಬ್ಬರು ತಮ್ಮ ಫೋನ್ ಹ್ಯಾಕ್ ಆಗಿದೆ ಎಂದು ಪೋಸ್ಟ್ ಮಾಡಿದ್ದರು.

ಹಲವು ತೆಲುಗು ಚಿತ್ರಗಳಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿದ್ದ ದೇವಿಯಾನಿ ಶರ್ಮಾ ಇತ್ತೀಚೆಗಷ್ಟೇ ಶೈತಾನ್ ಮತ್ತು ಸೇವ್ ದಿ ಟೈಗರ್ಸ್ ಸರಣಿಯ ಮೂಲಕ ಜನಪ್ರಿಯತೆ ಗಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಫೋಟೋಶೂಟ್‌ಗಳ ಮೂಲಕ ನಿಯಮಿತವಾಗಿ ಮನರಂಜಿಸುತ್ತಿದ್ದಾರೆ.

ದೇವಿಯಾನಿ ಶರ್ಮಾ ತನ್ನ ಇನ್​​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ತನ್ನ ಫೋನ್ ಹ್ಯಾಕ್ ಆಗಿದೆ ಎಂದು ಪೋಸ್ಟ್ ಮಾಡಿದ್ದಾಳೆ. ದೇವಿಯಾನಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ.. ಕೆಲವು ದಿನಗಳ ಹಿಂದೆ ನನ್ನ ಫೋನ್ ಹ್ಯಾಕ್ ಆಗಿತ್ತು. ಅವರು ನನ್ನ ವೈಯಕ್ತಿಕ ಮಾಹಿತಿಯೊಂದಿಗೆ ನನ್ನನ್ನು ಬ್ಲ್ಯಾಕ್​​ಮೇಲ್ ಮಾಡಿ ನನ್ನನ್ನು ಹೆದರಿಸಲು ಪ್ರಯತ್ನಿಸಿದರು. ಯಾವ ಉದ್ದೇಶಕ್ಕಾಗಿ ಎಂದು ನನಗೆ ತಿಳಿದಿಲ್ಲ ಆದರೆ ನಾನು ಅದನ್ನು ಈಗ ಬಹಿರಂಗಪಡಿಸುತ್ತಿದ್ದೇನೆ ಎಂದಿದ್ದಾರೆ.

ಬ್ಲ್ಯಾಕ್​​ಮೇಲ್ ಮಾಡ್ತಿದ್ದಾರೆ, ನಾನು ಈಗಾಗಲೇ ಮಾನಸಿಕವಾಗಿ ತುಂಬಾ ನೊಂದಿದ್ದೇನೆ; ಬೇಸರದಿಂದ ಪೋಸ್ಟ್ ಮಾಡಿದ ನಟಿ..

ಈಗ ಮತ್ತೆ ನನ್ನ ಫೋನ್‌ನಲ್ಲಿ ಕೆಲವು ಬದಲಾವಣೆಗಳನ್ನು ನೋಡುತ್ತಿದ್ದೇನೆ. ನನ್ನ ವಾಟ್ಸಾಪ್ ಹ್ಯಾಕ್ ಆಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ನಂಬರ್‌ನಿಂದ ಯಾರಾದರೂ ಯಾವುದೇ ಸಂದೇಶವನ್ನು ಸ್ವೀಕರಿಸಿದರೆ, ಅದು ನನ್ನದಲ್ಲ. ನಾನು ಈಗಾಗಲೇ ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಮುಂಬೈ ಸೈಬರ್ ಪೊಲೀಸರಿಗೆ ಮೂರು ಬಾರಿ ದೂರು ನೀಡಿದ್ದೇನೆ. ನಾನು ವ್ಯವಸ್ಥೆಗಳನ್ನು ನಂಬುತ್ತೇನೆ. ನಾನು ಪ್ರಕರಣವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ. ಹಾಗಾಗಿ ನನ್ನ ನಂಬರ್‌ನಿಂದ ನಿಮಗೆ ಯಾವುದೇ ಸಂದೇಶ ಬಂದರೂ ಅದು ನಾನಲ್ಲ ಎಂದು ತಿಳಿಯಿರಿ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ನನ್ನನ್ನು ಮಾನಹಾನಿ ಮಾಡಲು ಮತ್ತು ಕೆಟ್ಟದಾಗಿ ಪ್ರಚಾರ ಮಾಡಲು ಇದನ್ನು ಮಾಡಲಾಗಿದೆ ಎಂದು ತೋರುತ್ತದೆ. ಎಂದಿನಂತೆ ಕಲಾವಿದರ ಬದುಕು ತುಂಬಾ ಕಷ್ಟ. ಈ ರೀತಿಯ ಕೆಲಸಗಳಿಂದ ಇನ್ನಷ್ಟು ಕಷ್ಟವಾಗುತ್ತದೆ ಎಂದು ವೇದನೆಯಿಂದ ಪೋಸ್ಟ್ ಮಾಡಿದ್ದಾರೆ. ಇದರಿಂದಾಗಿ ದೇವಿಯಾನಿ ಪೋಸ್ಟ್ ವೈರಲ್ ಆಗಿದೆ.

ಡಿ ಬಾಸ್​ ಅಭಿನಯದ “ಕರಿಯ” ನಟಿ ನೆನಪಿದೆಯಾ? 20 ವರ್ಷಗಳ ನಂತ್ರ ಮತ್ತೆ ಕಾಣಿಸಿಕೊಂಡ್ರು..

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ದಿನಾಂಕ ಫಿಕ್ಸ್; ಚೆನ್ನೈನಲ್ಲೇ ನಡೆಯಲಿದೆ ವಿವಾಹ

ಪತ್ನಿ ಗರ್ಭಿಣಿ, ಇತ್ತ ಮದ್ವೆ ಫೋಟೋ ಡಿಲೀಟ್; ಮಗು ಹುಟ್ಟೋ ಸಮಯದಲ್ಲಿ ರಣವೀರ್, ದೀಪಿಕಾ ಹೀಗ್ಯಾಕೆ ಮಾಡ್ತಿದ್ದಾರೆ?

ಇನ್ಮುಂದೆ ಪ್ರತಿ ಸೋಮವಾರ ಸುಕ್ಕುಗಟ್ಟಿದ ಬಟ್ಟೆಯನ್ನೇ ಧರಿಸಿ; ಉದ್ಯೋಗಿಗಳು ಬಟ್ಟೆ ಇಸ್ತ್ರಿ​ ಮಾಡುವಂತೆ ಇಲ್ಲ ಎಂದ ಕಂಪನಿ

Share This Article

ಈ ಅಭ್ಯಾಸಗಳಿಂದ ನೀವು ಶ್ವಾಸಕೋಶ ಕ್ಯಾನ್ಸರ್​ಗೆ​ ತುತ್ತಾಗಬಹುದು ಎಚ್ಚರ! ತಡೆಗಟ್ಟದ್ದಿದ್ರೆ ಸಾವು ಕಟ್ಟಿಟ್ಟಬುತ್ತಿ | Lung Cancer

Lung Cancer: ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗುತ್ತಿದೆ. ವಯಸ್ಸಿನ…

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…