More

    ಇನ್ಮುಂದೆ ಪ್ರತಿ ಸೋಮವಾರ ಸುಕ್ಕುಗಟ್ಟಿದ ಬಟ್ಟೆಯನ್ನೇ ಧರಿಸಿ; ಉದ್ಯೋಗಿಗಳು ಬಟ್ಟೆ ಇಸ್ತ್ರಿ​ ಮಾಡುವಂತೆ ಇಲ್ಲ ಎಂದ ಕಂಪನಿ

    ನವದೆಹಲಿ: ಸಾಮಾನ್ಯವಾಗಿ ಉದ್ಯೋಗಿಗಳು ನೀಟಾಗಿ ಇಸ್ತ್ರಿ ಮಾಡಿದ ಬಟ್ಟೆ, ಪಾಲಿಶ್ ಮಾಡಿದ ಬೂಟು, ಟೈ ಧರಿಸಿ ಕಚೇರಿಗಳಿಗೆ ಹೋಗುವಾಗ ಸಮಚಿತ್ತದಿಂದ ಹೋಗುತ್ತಾರೆ. ಭಾನುವಾರ ರಜಾ ದಿನವಾದ್ದರಿಂದ ವಾರದ ಬಟ್ಟೆಗಳನ್ನೆಲ್ಲ ಒಗೆದು ನೀಟಾಗಿ ಇಸ್ತ್ರಿ ಮಾಡಿ ಮುಂದಿನ ವಾರಕ್ಕೆ ತೊಡಬೇಕಾದ ಬಟ್ಟೆಗಳನ್ನು ತಯಾರು ಮಾಡುತ್ತಾರೆ.

    ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಇಸ್ತ್ರಿ ಬಟ್ಟೆಗಳನ್ನು ಧರಿಸಬೇಡಿ ಎಂದು ಹೇಳುತ್ತದೆ. ಸುಕ್ಕುಗಟ್ಟಿದ ಬಟ್ಟೆಗಳನ್ನು ಧರಿಸಿ ಬರುವಂತೆ ಆದೇಶಿಸಿದೆ. ಈ  ಆದೇಶದ ಹಿಂದೆ  ಒಂದು ನಿಖರವಾದ ಕಾರಣವಿದೆ. ತಿಳಿದರೆ ಖಂಡಿತಾವಾಗಿಯೂ ನೀವೂ ಆಶ್ಚರ್ಯವಾಗುತ್ತೀರ.

    ಸಂಶೋಧನಾ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಈ ನಿಯಮವನ್ನು ಅಂಗೀಕರಿಸಿದೆ. ಇದರೊಂದಿಗೆ ಸಿಎಸ್‌ಐಆರ್‌ನ ಹೊಸ ನಿಯಮದ ಬಗ್ಗೆ ಎಲ್ಲರೂ ಗುಸುಗುಸು ಮಾತನಾಡುತ್ತಿದ್ದಾರೆ.

    ಇನ್ಮುಂದೆ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ತನ್ನ ಸಿಬ್ಬಂದಿಯನ್ನು ಪ್ರತಿ ಸೋಮವಾರ ಸುಕ್ಕುಗಟ್ಟಿದ ಉಡುಪುಗಳನ್ನು ಧರಿಸಿ ಕಚೇರಿಗೆ ಬರುವಂತೆ ಹೇಳಿದೆ. ಈ ಉದ್ದೇಶಕ್ಕಾಗಿ ವಿಶೇಷ ‘ವಾಹ್ ಸೋಮವಾರಗಳು’ ಅಭಿಯಾನವನ್ನು ಪ್ರಾರಂಭಿಸಲಾಗಿದೆ. WAH ಎಂದರೆ ಸುಕ್ಕುಗಳು ಅಚ್ಚೆ ಹೈ (ಸುಕ್ಕುಗಳು ಒಳ್ಳೆಯದು). ಮಾಲಿನ್ಯದಿಂದ ವೇಗವಾಗಿ ಹದಗೆಡುತ್ತಿರುವ ಹವಾಮಾನ ಬದಲಾವಣೆಯ ವಿರುದ್ಧ ಕೆಲಸ ಮಾಡಲು ಪ್ರತಿ ಸೋಮವಾರದಂದು ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಇದರ ಹಿಂದೆ ಪರಿಸರ ಕಾಳಜಿ ಇದೆ.

    ಈ ಕುರಿತು ಮಾತನಾಡಿದ ಸಿಎಸ್ ಐಆರ್ ನ ಮೊದಲ ಮಹಿಳಾ ಮಹಾನಿರ್ದೇಶಕಿ ಡಾ.ಎನ್ ಕಲೈಸೆಲ್ವಿ,, ‘ಇಂಧನ ಸಾಕ್ಷರತೆಯ ಭಾಗವಾಗಿ ವಾಹ್ ಸೋಮವಾರಗಳನ್ನು ತಂದಿದ್ದೇವೆ. ಸಿಎಸ್‌ಐಆರ್ ಸೋಮವಾರದಂದು ಇಸ್ತ್ರಿ ಮಾಡದ ಬಟ್ಟೆಗಳನ್ನು ಧರಿಸಿ ಸಹಕರಿಸಲು ನಿರ್ಧರಿಸಿದೆ. ಒಂದು ಜೊತೆ ಬಟ್ಟೆಯನ್ನು ಇಸ್ತ್ರಿ ಮಾಡುವುದರಿಂದ 200 ಗ್ರಾಂ ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತದೆ. ಸುಕ್ಕು-ಮುಕ್ತ ಬಟ್ಟೆಗಳನ್ನು ಧರಿಸುವುದರಿಂದ ಅದನ್ನು ತಡೆಯಬಹುದು ಎಂದು ಅವರು ಬಹಿರಂಗಪಡಿಸಿದರು.

    ಮೇ 1ರಿಂದ 15ರವರೆಗೆ ‘ಸ್ವಚ್ಛತಾ ಪಕ್ವಾಡ’ ಕಾರ್ಯಕ್ರಮ ಆಯೋಜಿಸಲಾಗಿದೆ. ಹವಾಮಾನ ಬದಲಾವಣೆ ಬಗ್ಗೆ ಅರಿವು ಮೂಡಿಸುವ ಗುರಿಯನ್ನು ಇವರು ಹೊಂದಿದೆ. ಇದರ ಭಾಗವಾಗಿ, CSIR ಇಂಧನವನ್ನು ಉಳಿಸಲು ದೇಶದ ಎಲ್ಲಾ ಲ್ಯಾಬ್‌ಗಳಲ್ಲಿ ಇಂಧನ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕೆಲವು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು ಜಾರಿಗೊಳಿಸುತ್ತಿದೆ. ತನ್ನ ಕಚೇರಿಗಳಲ್ಲಿ ವಿದ್ಯುತ್ ಶುಲ್ಕವನ್ನು ಶೇಕಡಾ 10 ಕ್ಕೆ ಇಳಿಸುವುದು ಮೊದಲ ಗುರಿಯಾಗಿದೆ.  

    ಪತ್ನಿ ಗರ್ಭಿಣಿ, ಇತ್ತ ಮದ್ವೆ ಫೋಟೋ ಡಿಲೀಟ್; ಮಗು ಹುಟ್ಟೋ ಸಮಯದಲ್ಲಿ ರಣವೀರ್, ದೀಪಿಕಾ ಹೀಗ್ಯಾಕೆ ಮಾಡ್ತಿದ್ದಾರೆ?

    VIDEO | ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಿದ ರಮ್ಯಾ ಕೃಷ್ಣನ್​​; ನಟಿಯ ಈ ರೆಸಿಪಿಗೆ ಲೈಕ್‌ಗಳ ಸುರಿಮಳೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts