More

    ಚಳಿಗಾಲದಲ್ಲಿ ಇಂತಹ ದಿರಿಸನ್ನು ಧರಿಸುವ ಮೊದಲು ಈ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ…

    ಬೆಂಗಳೂರು: ಚಳಿಗಾಲದಲ್ಲಿ ಅನೇಕ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಅನೇಕ ಬಾರಿ ವಿಪರೀತ ಚಳಿಯಿಂದಾಗಿ ನಾವು ಸೋಮಾರಿತನದಿಂದ ಒಳ ಉಡುಪು ತೊಳೆದುಕೊಳ್ಳಲು ಮರೆಯುತ್ತೇವೆ ಅಥವಾ ಅದನ್ನು ಹಲವು ವಾರಗಳವರೆಗೆ ಧರಿಸುತ್ತೇವೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಚಳಿಗಾಲದಲ್ಲಿ ಒಳ ಉಡುಪಿನ ಬಗ್ಗೆ ಅಸಡ್ಡೆ ಮಾಡಬಾರದು.

    ಚಳಿಗಾಲದಲ್ಲಿ, ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಬೆಚ್ಚಗಿನ ಥರ್ಮಲ್ ವೇರ್ ಬಳಸುತ್ತಾರೆ. ಇದು ತೀವ್ರವಾದ ಚಳಿಯಿಂದಲೂ ರಕ್ಷಿಸುತ್ತದೆ. ಹಾಗೆ ಧರಿಸುವಾಗ ಯಾವಾಗಲೂ ಸ್ವಚ್ಛಗಿನ ಉಡುಪು ಧರಿಸಬೇಕು. ಜತೆಗೆ ನೀವು ಅದನ್ನು ತೊಳೆಯಲು ಬಯಸಿದಾಗ ಯಾವುದೇ ಡಿಟರ್ಜೆಂಟ್ ಅನ್ನು ಬಳಸಬೇಡಿ, ಬದಲಿಗೆ wool liquid ಬಳಸಿ. ಬಟ್ಟೆಗಳನ್ನು ಹೆಚ್ಚು ಉಜ್ಜಬಾರದು. ಏಕೆಂದರೆ ಅವುಗಳ ಬಣ್ಣವು ಮಸುಕಾಗಲು ಪ್ರಾರಂಭಿಸುತ್ತದೆ.

    ಡಿಟರ್ಜೆಂಟ್ ಬಳಸಬೇಡಿ
    ನೀವು ಯಾವುದೇ ಬಟ್ಟೆಯನ್ನು ತೊಳೆಯಬೇಕಾದರೆ, ಅವುಗಳನ್ನು ತೊಳೆಯುವ ಮೊದಲು ಬಟ್ಟೆಗಳನ್ನು ಬಕೆಟ್‌ನಲ್ಲಿ ದೀರ್ಘಕಾಲ ಇಡಬೇಡಿ. ಜತೆಗೆ ಉತ್ತಮ ಲಿಕ್ವಿಡ್ ಬಳಸುವುದು ಮರೆಯಬೇಡಿ. ಏಕೆಂದರೆ ಬಟ್ಟೆಗೆ ಡಿಟರ್ಜೆಂಟ್ ಬಳಸುವುದರಿಂದ ಚರ್ಮದ ಸಮಸ್ಯೆ ಉಂಟಾಗುತ್ತದೆ.
    ಚಳಿಗಾಲದಲ್ಲಿ ನಾವು ಧರಿಸುವ ಥರ್ಮಲ್ ವೇರ್ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಸರಿಯಾದ ದಿರಿಸು ಧರಿಸದಿದ್ದಾಗ ದೇಹದ ಮೇಲಿನ ಶಾಖದಿಂದಾಗಿ ಮೊಡವೆಗಳು ಅಥವಾ ದದ್ದುಗಳು ಉಂಟಾಗಬಹುದು.

    ಸರಿಯಾದ ಆಯ್ಕೆ 
    ಥರ್ಮಲ್ ವೇರ್ ಆಯ್ಕೆಮಾಡುವಾಗ, ಅದು ಬಿಗಿಯಾಗಿ ಅಥವಾ ಸಡಿಲವಾಗಿದೆಯೇ ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ನೀವು ಬಿಗಿಯಾದ ಒಳಭಾಗವನ್ನು ಧರಿಸಿದರೆ, ಉಸಿರಾಟದ ತೊಂದರೆ ಉಂಟಾಗಬಹುದು.  

    ನೀವು ಸಹ ಹೆಚ್ಚು ಉಪ್ಪು ತಿನ್ನುತ್ತಿದ್ದರೆ ಜಾಗರೂಕರಾಗಿರಿ… ಭಯಾನಕ ಪರಿಣಾಮಗಳನ್ನು ಬಹಿರಂಗಪಡಿಸಿದ ಅಧ್ಯಯನ

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts