More

    ವಾರಕ್ಕೆರಡು ಸಲವಾದರೂ ಬಟಾಣಿ ತಿನ್ನೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ…

    ಬೆಂಗಳೂರು: ಆರೋಗ್ಯದ ನಿಧಿ ಎಂದೇ ಜನಪ್ರಿಯ ‘ಬಟಾಣಿ ಕಾಳು’. ಈ ಹಿಂದೆ ಪೌಷ್ಟಿಕ ತಜ್ಞ ಲೊವ್ನೀತ್ ಬಾತ್ರಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬಟಾಣಿಗಳ ಪ್ರಯೋಜನಗಳ ಬಗ್ಗೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, ಒಂದು ವೇಳೆ ಬಟಾಣಿ ಕಾಳುಗಳ ಸೇವನೆ ಮಾಡದಿದ್ದರೆ ನೀವು ಯಾವೆಲ್ಲಾ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಎಂಬುದನ್ನೂ ವಿವರಿಸಿದ್ದರು. ಹಾಗಾದರೆ ಬನ್ನಿ ಬಟಾಣಿಯ ಕೆಲವು ವಿಶೇಷ ಆರೋಗ್ಯ ಪ್ರಯೋಜನಗಳನ್ನು ನೋಡೋಣ…    

    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು

    ಅನೇಕ ತರಕಾರಿಗಳಿಗೆ ಹೋಲಿಸಿದರೆ ಬಟಾಣಿಗಳು ಕಡಿಮೆ ಗ್ಲೈಸೆಮಿಕ್ ಸೂಚಿ ಹೊಂದಿವೆ. ಇದರಿಂದ ರಕ್ತದಲ್ಲಿ ಸಕ್ಕರೆ ಹೆಚ್ಚುವ ಭಯವಿಲ್ಲ. ಬಟಾಣಿಯಲ್ಲಿ ನಾರಿನಂಶ ಹೇರಳವಾಗಿದೆ. ಪ್ರೋಟೀನ್ ಕೊರತೆ ನೀಗಿಸುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಇದು ಸುಲಭವಾಗಿ ಸಿಗುವ ಧಾನ್ಯಗಳಲ್ಲಿ ಒಂದಾಗಿದೆ.

    ತ್ವಚೆಯ ಆರೋಗ್ಯಕ್ಕೆ

    ಬಟಾಣಿಯಲ್ಲಿ ಕೆಲವು ಪೋಷಕಾಂಶಗಳು ಇವೆ. ಇದು ತ್ವಚೆಯನ್ನು ಆರೋಗ್ಯಕರವಾಗಿರುಸುತ್ತದೆ. ಬಟಾಣಿ ಕಾಳು ಬಿ6, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಈ ಎಲ್ಲಾ ಪೋಷಕಾಂಶಗಳು ಉರಿಯೂತ ಕಡಿಮೆ ಮಾಡುತ್ತದೆ. ಇದು ಸ್ವತಂತ್ರ ರಾಡಿಕಲ್ಸ್ ನಿಂದ ಚರ್ಮಕ್ಕೆ ಹಾನಿ ಆಗದಂತೆ ತಡೆಯುತ್ತದೆ.

    ಪ್ರೋಟೀನ್‌ನ ಅತ್ಯುತ್ತಮ ಮೂಲ

    ಬಟಾಣಿ ಕಾಳು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಬಟಾಣಿ ಕಾಳುಗಳಲ್ಲಿ ನಾರಿನ ಪ್ರಮಾಣವೂ ಉತ್ತಮವಾಗಿದೆ. ಪ್ರಾಣಿ ಮೂಲದ ಪ್ರೊಟೀನ್ ತೆಗೆದುಕೊಳ್ಳದವರು ಬಟಾಣಿ ಕಾಳು ತಿನ್ನುವುದರಿಂದ ಸಾಕಷ್ಟು ಪ್ರೊಟೀನ್ ಸಿಗುತ್ತದೆ.

    ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು

    ಬಟಾಣಿ ತಿನ್ನುವುದರಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರುತ್ತದೆ. ಬಟಾಣಿಯಲ್ಲಿ ನಿಯಾಸಿನ್ ಎಂಬ ಅಂಶ ಹೇರಳ ಆಗಿದೆ. ಈ ಅಂಶವು ಟ್ರೈಗ್ಲಿಸರೈಡ್‌ಗಳ ರಚನೆ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುವ ಮೂಲಕ ಉತ್ತಮ ಕೊಲೆಸ್ಟ್ರಾಲನ್ನು ಹೆಚ್ಚಿಸಲು ಬಟಾಣಿ ಕಾಳು ಸಹಕಾರಿ.

    ಜೀರ್ಣಕ್ರಿಯೆಗೆ ಉತ್ತಮ

    ಬಟಾಣಿ ಕಾಳು ಜೀರ್ಣಕ್ರಿಯೆಗೆ ಉತ್ತಮವೆಂದು ಪರಿಗಣಿಸಲಾಗಿದೆ. ಬಟಾಣಿಯಲ್ಲಿರುವ ನಾರಿನ ಗುಣಲಕ್ಷಣಗಳು ಜೀರ್ಣಾಂಗ ವ್ಯವಸ್ಥೆ ಸುಧಾರಿಸಲು ಸಹಾಯ ಮಾಡುತ್ತದೆ. ಅವುಗಳನ್ನು ಕರುಳು ಮತ್ತು ಹೊಟ್ಟೆಗೆ ಉತ್ತಮವೆಂದು ಪರಿಗಣಿಸಲಾಗುತ್ತದೆ. ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆ ಕಡಿಮೆ ಮಾಡಲು ಬಟಾಣಿ ಸೇವನೆ ಪ್ರಯೋಜನಕಾರಿ.

    ತೂಕ ನಷ್ಟಕ್ಕೆ ಪ್ರಯೋಜನಕಾರಿ

    ಫೈಬರ್ ಗುಣಲಕ್ಷಣಗಳು ಹಸಿರು ಬಟಾಣಿಗಳಲ್ಲಿ ಹೆಚ್ಚು ಕಂಡು ಬರುತ್ತವೆ. ಬಟಾಣಿ ತೂಕ ನಷ್ಟಕ್ಕೂ ಪ್ರಯೋಜನಕಾರಿ. ಬಟಾಣಿ ಕಾಳುಗಳಲ್ಲಿ ಕ್ಯಾಲೊರಿ ಪ್ರಮಾಣ ತುಂಬಾ ಕಡಿಮೆಯಿದೆ. ಬಟಾಣಿ ಕಾಳು ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿದ ಅನುಭವವಾಗುತ್ತದೆ. ಇದರಿಂದ ನಾವು ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು ಮತ್ತು ತೂಕ ನಿಯಂತ್ರಿಸಬಹುದು.  

    ಇರುವೆಗಳ ಸೈನ್ಯವು ಅಡುಗೆಮನೆ ಪ್ರವೇಶಿಸಿದರೆ ಕೆಲವೇ ನಿಮಿಷಗಳಲ್ಲಿ ಓಡಿಸಲು ಈ ಟ್ರಿಕ್ಸ್ ಅನುಸರಿಸಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts