More

    ಕಪ್ಪು ಬಟ್ಟೆ ಕಟ್ಟುವ ಮೂಲಕ ಪ್ರತಿಭಟನೆ

    ಹೂವಿನಹಡಗಲಿ: ಬೇಡಿಕೆ ಈಡೇರಿಕೆಗಾಗಿ ಅಖಿಲ ಕರ್ನಾಟಕ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.

    ಇದನ್ನೂ ಓದಿ: ಮನೆಗಳ ದಿಢೀರ್ ತೆರವು ಕಾರ್ಯಾಚರಣೆ  -ರಾಮಕೃಷ್ಣ ಹೆಗಡೆ ನಗರದಲ್ಲಿ ಜೆಸಿಬಿ ಸದ್ದು – ಹಕ್ಕುಪತ್ರ ಸಿಗದ ಕೆಲವರ ಪ್ರತಿಭಟನೆ 

    ಬುಧವಾರ ಹೂವಿನಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು ಅನಿರ್ದಿಷ್ಟಾವಧಿವರೆಗೆ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿ ನಾಲ್ಕುದಿನಗಳಾದರೂ ಸಂಬಂಧ ಪಟ್ಟವರು ಇತ್ತ ಕಡೆ ಬರದೆ ಇರುವುದರಿಂದ ಈ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

    ಬೇಡಿಕೆ ಈಡೆರಿಸುವವರಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಸಂಘದ ರಾಜ್ಯಾಧ್ಯಕ್ಷ ಜಿ.ಬಿ.ಮನುಕುಮಾರ, ಉಪನ್ಯಾಸಕರಾದ ಬಿ.ಕೊಟ್ರಬಸಪ್ಪ, ನಾಜಿಯಾ, ಉಮಾಪತಿ, ಅನುರಾಧ, ಶಂಕ್ರಮ್ಮ, ವಾಣಿಶ್ರೀ, ಪ್ರಿಯಾಂಕ, ಬಾನು, ರವಿನಾಯ್ಕ, ಛತ್ರಿನಾಯ್ಕ, ದೇವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts