More

    ವಿದ್ಯಾರ್ಥಿನಿ ನೇಹಾ ಹತ್ಯೆ ಕೇಸ್ ಸಿಬಿಐಗೆ ವಹಿಸಿ

    ಹಗರಿಬೊಮ್ಮನಹಳ್ಳಿ: ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಮತ್ತು ಹಿಂದು ಮಹಾಗಣಪತಿ ಸಮಿತಿ ಪದಾಧಿಕಾರಿಗಳು ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಮನವಿ ಸಲ್ಲಿಸಿದರು.

    ಎಬಿವಿಪಿ ಜಿಲ್ಲಾ ಸಂಚಾಲಕ ಭರತ್ ಹಂಪಾಪಟ್ಟಣ ಮಾತನಾಡಿ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಶಾಲಾ-ಕಾಲೇಜು ಜ್ಞಾನ ದೇಗುಲಗಳು. ಇಂತಹ ಪವಿತ್ರ ಸ್ಥಳದಲ್ಲಿ ಹಾಡಹಗಲೇ ನೇಹಾ ಕೊಲೆ ಆಗಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಪ್ರೀತಿಯನ್ನು ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿದ ಫಯಾಜ್ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆಮಾಡಿದ್ದಾನೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

    ಹಿಂದು ಮಹಾಗಣಪತಿ ಸಮಿತಿ ತಾಲೂಕು ಸಂಚಾಲಕ ವಕೀಲ ಎ.ಚಂದ್ರಶೇಖರ್ ಮಾತನಾಡಿ, ಯಾವುದೇ ಭಯವಿಲ್ಲದೆ ಫಯಾಜ್ ಕೊಲೆ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದು ತಿಳಿಯುತ್ತದೆ. ಹಂತಕನಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ನೇಹಾ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದರು.

    ಎಬಿವಿಪಿ ನಗರ ಅಧ್ಯಕ್ಷ ನಾಗಭೂಷಣ್, ಪ್ರಮುಖರಾದ ಅನುಶ್ರೀ ನಂದಿಪುರ, ಬ್ಯಾಟಿ ಸಂದೀಪ್, ಹನುಮಂತ, ಆಕಾಶ್, ಸಂತೋಷ್, ಅರುಂಧತಿ, ಅಮೃತ, ಶಿವಾನಿ, ಪ್ರೀತಿ, ಕಾವೇರಿ, ಹಿಂದು ಮಹಾಗಣಪತಿ ಸಮಿತಿ ಸದಸ್ಯರಾದ ಸಂತೋಷ್ ಪೂಜಾರ, ಚಿಂತ್ರಪಳ್ಳಿ ನಾಗರಾಜ್, ಟಿ.ಎಚ್.ಎಂ.ನಾಗರಾಜ, ಬಸವರಾಜ ಇದ್ದರು. ನೇಹಾ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಮತ್ತು ಹಿಂದು ಮಹಾಗಣಪತಿ ಸಮಿತಿ ಪದಾಧಿಕಾರಿಗಳು ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಮನವಿ ಸಲ್ಲಿಸಿದರು.

    ಎಬಿವಿಪಿ ಜಿಲ್ಲಾ ಸಂಚಾಲಕ ಭರತ್ ಹಂಪಾಪಟ್ಟಣ ಮಾತನಾಡಿ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಫಯಾಜ್ ಎಂಬಾತ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಶಾಲಾ-ಕಾಲೇಜು ಜ್ಞಾನ ದೇಗುಲಗಳು. ಇಂತಹ ಪವಿತ್ರ ಸ್ಥಳದಲ್ಲಿ ಹಾಡಹಗಲೇ ನೇಹಾ ಕೊಲೆ ಆಗಿರುವುದು ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದಂತಾಗಿದೆ. ಪ್ರೀತಿಯನ್ನು ನಿರಾಕರಿಸಿದಕ್ಕಾಗಿ ಆಕೆಯ ಕಾಲೇಜಿಗೆ ಆಕ್ರಮವಾಗಿ ಪ್ರವೇಶಿಸಿದ ಫಯಾಜ್ ಚಾಕುವಿನಿಂದ 9 ಬಾರಿ ಇರಿದು ಬರ್ಬರವಾಗಿ ಹತ್ಯೆಮಾಡಿದ್ದಾನೆ. ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

    ಹಿಂದು ಮಹಾಗಣಪತಿ ಸಮಿತಿ ತಾಲೂಕು ಸಂಚಾಲಕ ವಕೀಲ ಎ.ಚಂದ್ರಶೇಖರ್ ಮಾತನಾಡಿ, ಯಾವುದೇ ಭಯವಿಲ್ಲದೆ ಫಯಾಜ್ ಕೊಲೆ ಮಾಡಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದು ತಿಳಿಯುತ್ತದೆ. ಹಂತಕನಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ನೇಹಾ ಕುಟುಂಬದವರಿಗೆ ನ್ಯಾಯ ಒದಗಿಸಬೇಕು ಎಂದರು. ಎಬಿವಿಪಿ ನಗರ ಅಧ್ಯಕ್ಷ ನಾಗಭೂಷಣ್, ಪ್ರಮುಖರಾದ ಅನುಶ್ರೀ ನಂದಿಪುರ, ಬ್ಯಾಟಿ ಸಂದೀಪ್, ಹನುಮಂತ, ಆಕಾಶ್, ಸಂತೋಷ್, ಅರುಂಧತಿ, ಅಮೃತ, ಶಿವಾನಿ, ಪ್ರೀತಿ, ಕಾವೇರಿ, ಹಿಂದು ಮಹಾಗಣಪತಿ ಸಮಿತಿ ಸದಸ್ಯರಾದ ಸಂತೋಷ್ ಪೂಜಾರ, ಚಿಂತ್ರಪಳ್ಳಿ ನಾಗರಾಜ್, ಟಿ.ಎಚ್.ಎಂ.ನಾಗರಾಜ, ಬಸವರಾಜ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts