ಈ ವಿಷಯದ ಬಗ್ಗೆ ಈಗ ನಾನು ತುಟಿಬಿಚ್ಚಲ್ಲ! ಮುಂದೆ ನೀವೇ ನೋಡ್ತೀರಾ… ನಟಿ ಅಂಜಲಿ

ವಿಜಯವಾಣಿ (85)
Published on

ಆಂಧ್ರಪ್ರದೇಶ: ತಮಿಳು, ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಾಟ್ ಬೆಡಗಿ ನಟಿ ಅಂಜಲಿ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ನಟನೆಯ 'ರಣವಿಕ್ರಮ'ದಲ್ಲಿ ನಾಯಕಿಯಾಗಿ ನಟಿಸಿದ್ದ ಅಂಜಲಿ, ಪ್ರಸ್ತುತ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಅವರ ಪುತ್ರ ಮೆಗಾಪವರ್​ಸ್ಟಾರ್​ ರಾಮ್​ಚರಣ್​ ಅಭಿನಯದ 'ಗೇಮ್ ಚೇಂಚರ್'​ನಲ್ಲಿ ಅಭಿನಯಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಎಸ್​. ಶಂಕರ್ ನಿರ್ದೇಶನದ 'ಗೇಮ್ ಚೇಂಜರ್' ಕೂಡ ಒಂದಾಗಿದೆ. ರಾಮ್ ಚರಣ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಶಂಕರ್ ಜೊತೆ ಕೈಜೋಡಿಸಿದ್ದು, ಇವರಿಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ಬೆಳ್ಳಿಪರದೆಯ ಮೇಲೆ ಕಣ್ತುಂಬಿಕೊಳ್ಳಲು ಸದ್ಯ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದ್ದು, ಸೌತ್​ ಸಿನಿಮಾದ ಹಾಟ್​ ಬ್ಯೂಟಿ ಎಂದೇ ಕರೆಯಲ್ಪಡುವ ನಟಿ ಅಂಜಲಿ ಕೂಡ ಪ್ರಮುಖ ಹಾಗೂ ವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಅಂಜಲಿ, ಸದ್ಯದ ಮಟ್ಟಿಗೆ ನಾನು ಈ ವಿಷಯದ ಬಗ್ಗೆ ಹೆಚ್ಚೇನು ಹೇಳಲು ಸಾಧ್ಯವಿಲ್ಲ. ಈಗ ನಾನು ತುಟ್ಟಿಬಿಚ್ಚಲ್ಲ. ಅದೊಂದು ಸರ್ಪ್ರೈಸ್​ ಮುಂದಿನ ದಿನಗಳಲ್ಲಿ ನೀವೇ ನೋಡ್ತೀರಾ ಎಂದು ಹೇಳುವ ಮೂಲಕ ತಮ್ಮ ಪಾತ್ರದ ಬಗ್ಗೆಯಿದ್ದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಚಿತ್ರದಲ್ಲಿ ರಾಮ್ ಚರಣ್, ಅಂಜಲಿ, ಕಿಯಾರಾ ಅಡ್ವಾಣಿ, ಸಮುದ್ರಕಣಿ, ಜಯ್​ರಾಮ್, ಎಸ್​.ಜೆ.ಸೂರ್ಯ, ನಸ್ಸರ್​, ಸುನಿಲ್, ಮೆಕಾ ಶ್ರೀಕಾಂತ್​, ನವೀನ್ ಚಂದ್ರ ಸೇರಿದಂತೆ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net