ಕ್ಯಾಪ್ಟನ್ ಆಗಿ ಹಾರ್ದಿಕ್​ ಯಶಸ್ಸಿನ ಹಿಂದೆ ಇವರ ಪಾತ್ರ ಹೆಚ್ಚಿತ್ತು! ಶಾಕಿಂಗ್ ಸಂಗತಿ ತೆರದಿಟ್ಟ ಅಜಿತ್ ಅಗರ್ಕರ್​

ನವದೆಹಲಿ: ಮುಂಬರುವ ಶ್ರೀಲಂಕಾ ವಿರುದ್ಧದ ವೈಟ್ ಬಾಲ್​ ಪಂದ್ಯಗಳಿಗೆ ಟೀಮ್ ಇಂಡಿಯಾ ಸನ್ನದ್ಧಗೊಂಡಿದ್ದು, ಹಲವು ಮಹತ್ವದ ಬದಲಾವಣೆಗಳೊಂದಿಗೆ ಬಿಸಿಸಿಐ ಮುಂದೆ ಬಂದಿದೆ. ಏಕದಿನ ಪಂದ್ಯಗಳಿಗೆ ಟಿ20 ವಿಶ್ವಕಪ್ ವಿಜೇತ ಕ್ಯಾಪ್ಟನ್ ರೋಹಿತ್ ಶರ್ಮ ಎಂದಿನಂತೆ ಇಲ್ಲಿಯೂ ನಾಯಕತ್ವ ವಹಿಸಿಕೊಂಡಿದ್ದರೆ, ಟಿ20 ಮ್ಯಾಚ್​ಗಳಿಗೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ. ಎರಡು ಫಾರ್ಮೆಟ್​ನಲ್ಲಿಯೂ ಭಾರತ ತಂಡಕ್ಕೆ ಶುಭಮನ್ ಗಿಲ್ ಉಪನಾಯಕನಾಗಿ ಕಣಕ್ಕಿಳಿಯಲಿರುವುದು ವಿಶೇಷ.

ಇದನ್ನೂ ಓದಿ: ಶಿರೂರಿನಲ್ಲಿ ಗುಡ್ಡ ಕುಸಿತ: ಸ್ಥಳಕ್ಕೆ ಭೇಟಿ ನೀಡಿ, ರಕ್ಷಣಾ ಕಾರ್ಯದ ಪರಿಶೀಲನೆ ನಡೆಸಿದೆ ಸಿಎಂ

ಟಿ20 ವಿಶ್ವಕಪ್​ನಲ್ಲಿ ರೋಹಿತ್ ಶರ್ಮ ಕ್ಯಾಪ್ಟನ್​ ಆಗಿದ್ದ ವೇಳೆ ಉಪನಾಯಕರಾಗಿ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಮೇಲೆ ಭಾರೀ ನಿರೀಕ್ಷೆಗಳು ಮೂಡಿದ್ದವು. ಶ್ರೀಲಂಕಾ ವಿರುದ್ಧದ ಟೂರ್ನಿಯಲ್ಲಿ ಟಿ20 ಪಂದ್ಯಗಳಿಗೆ ಪಾಂಡ್ಯ ಕ್ಯಾಪ್ಟನ್​ಶಿಪ್ ಪಡೆಯಲಿದ್ದಾರೆ ಎಂದೇ ಹೇಳಲಾಗಿತ್ತು. ಆದ್ರೆ, ಬಿಸಿಸಿಐ ಈ ಎಲ್ಲಾ ನಿರೀಕ್ಷೆಗಳನ್ನು ಇದೀಗ ತಲೆಕೆಳಗಾಗಿಸಿದೆ. ನಾಯಕ ಹಾಗೂ ಉಪನಾಯಕನ ಸ್ಥಾನದಿಂದ ಹಾರ್ದಿಕ್​ರನ್ನು ಕೈಬಿಟ್ಟಿರುವ ಬಿಸಿಸಿಐ, ‘ಸ್ಕೈ’ರನ್ನು ನೂತನ ಕ್ಯಾಪ್ಟನ್ ಆಗಿ ಆಯ್ಕೆ ಮಾಡಿರುವುದು ಅನೇಕರಲ್ಲಿ ಸಂತಸ ಮೂಡಿಸಿದ್ದೇ ಆದರೂ ಹಾರ್ದಿಕ್​ ಫ್ಯಾನ್ಸ್​ಗೆ ಮಾತ್ರ ನಿರಾಸೆ ಉಂಟಾಗಿದೆ.

ಇನ್ನು ಭಾರತ ತಂಡಕ್ಕೆ ಯಾರನ್ನು ಆಡಿಸಬೇಕು? ಯಾರನ್ನು ಕೈಬಿಡಬೇಕು ಎಂಬುದನ್ನು ಆಯ್ಕೆ ಮಾಡುವ ಸಮಿತಿ ಹಲವು ಲೆಕ್ಕಾಚಾರಗಳನ್ನು ಮಾಡಿಕೊಂಡಿದೆ. 2026ರ ಟಿ20 ವಿಶ್ವಕಪ್​ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಾಯಕತ್ವ ಬದಲಾವಣೆಯನ್ನು ಮುನ್ನಲೆಗೆ ತಂದಿರುವುದು ಇಲ್ಲಿ ಗಮನಾರ್ಹ. ವರದಿಗಳ ಪ್ರಕಾರ, ಮುಖ್ಯ ಆಯ್ಕೆಗಾರರಾದ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗ ಅಜಿತ್ ಅಗರ್ಕರ್​ ಮತ್ತು ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಹಾರ್ದಿಕ್​ಗಿಂತ ಸೂರ್ಯರನ್ನು ಹೆಚ್ಚು ನಂಬಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಇದನ್ನೂ ಓದಿ: ಬಾಗೂರು ನವಿಲೆ ದಂಡೆ ಮೇಲೆ ಸೂಗಡು ಠಿಕಾಣಿ; ತುಮಕೂರು ನಾಲೆಗೆ ನೀರು ಹರಿಸಲು ಪಟ್ಟು

ಆದಾಗ್ಯೂ, ಹಾರ್ದಿಕ್ ಉತ್ತಮ ನಾಯಕ ಎಂಬುದನ್ನು ಅಜಿತ್ ಅಗರ್ಕರ್​ ಸಂಪೂರ್ಣವಾಗಿ ಒಪ್ಪಿಲ್ಲ. ಎರಡು ವರ್ಷಗಳ ಕಾಲ ಗುಜರಾತ್ ಟೈಟನ್ಸ್​ನಲ್ಲಿದ್ದ ಪಾಂಡ್ಯ ಕೋಚ್ ಆಗಿದ್ದ ಆಶೀಶ್ ನೆಹ್ರಾರ ಸಹಾಯದಿಂದ ಕ್ಯಾಪ್ಟನ್ ಆಗಿ ಯಶಸ್ವಿಯಾಗಿದ್ದಾರೆ. ಅವರ ಯಶಸ್ಸಿನ ಹಿಂದೆ ಇರುವುದು ಆಶಿಶ್​ ಎಂದು ಅಭಿಪ್ರಾಯಿಸಿದ್ದಾರೆ. ಈ ಕಾರಣದಿಂದ ಹಾರ್ದಿಕ್​ಗೆ ಫುಲ್​ ಮಾರ್ಕ್ಸ್​ ಕೊಡುವಲ್ಲಿ ಅಜಿತ್ ಒಂದು ಹೆಜ್ಜೆ ಹಿಂದೆ ಸರಿದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ಎಲ್ಲಿದೆ ನಿಮ್ಮ ತಲೆ? ಇಂತಹ ಹೋಲಿಕೆ ಹೇಗೆ ಮಾಡ್ತೀರಾ… ಪಾಕಿಸ್ತಾನಿ ಪತ್ರಕರ್ತನಿಗೆ ಚಳಿಬಿಡಿಸಿದ ‘ಬಜ್ಜಿ’

Share This Article

ಹದ್ದಿನ ಕಣ್ಣಿನಂಥ ದೃಷ್ಟಿ ನಿಮ್ಮದಾಗಬೇಕಾ? ಇವು ನಿಮ್ಮ ಆಹಾರದಲ್ಲಿ ಇವೆಯೇ? ಚೆಕ್​ ಮಾಡಿಕೊಳ್ಳಿ

ಬೆಂಗಳೂರು: ಮಾನವನ ಅಂಗಾಂಗಗಳಲ್ಲಿ ಎಲ್ಲವೂ ಮುಖ್ಯವೇ ಆದರೂ ಕಣ್ಣುಗಳು ಪ್ರಮುಖ ಸ್ಥಾನ ಪಡೆದುಕೊಂಡಿವೆ. ಹೀಗಾಗಿಯೇ ಕಣ್ಣುಗಳು…

ಇವುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿದ್ರೆ ಸಾಕು! ಚೆನ್ನಾಗಿ ನಿದ್ದೆ ಜತೆ, ಶ್ರೀಮಂತರಾಗೋದು ಪಕ್ಕಾ!

ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಹಣ ಅಥವಾ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಈಗ ಹೇಳಿರುವ ಸರಳ ಪರಿಹಾರಗಳನ್ನು…

ಮನೆಯಲ್ಲಿ ಗುಲಾಬಿ ಗಿಡ ಬೆಳೆಸುತ್ತಿದ್ದೀರಾ? ಈ ವಾಸ್ತು ನಿಯಮಗಳು ಕಡ್ಡಾಯ!

ಬೆಂಗಳೂರು: ಸಾಮಾನ್ಯವಾಗಿ ನಮ್ಮ ಹಿತ್ತಲಿನಲ್ಲಿ ಹಲವು ಬಗೆಯ ಗಿಡಗಳನ್ನು ಬೆಳೆಸುತ್ತೇವೆ. ಗುಲಾಬಿ ಗಿಡಗಳನ್ನು ಇಷ್ಟಪಡದವರೇ ಇಲ್ಲ.…