ನವದೆಹಲಿ: ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ನಾಯಕತ್ವದಲ್ಲಿ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024ರ ಟ್ರೋಫಿ ಮುಡಿಗೇರಿಸಿಕೊಂಡಿತು. ಟ್ರೋಫಿ ಗೆಲ್ಲುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿದ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ಹಾಗೂ ಸುರೇಶ್ ರೈನಾ ವಿಭಿನ್ನ ರೀತಿಯಲ್ಲಿ ಕುಣಿದು ಕುಪ್ಪಳಿಸಿದ್ದರು. ಆದ್ರೆ, ಈ ರೀಲ್ಸ್ಗೆ ವ್ಯಾಪಕ ವಿರೋಧ, ಖಂಡನೆ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ್ದ ‘ಬಜ್ಜಿ’, ಇದನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಟೀಕಾಕಾರರ ಬಳಿ ಮನವಿ ಮಾಡಿದ್ದರು. ಎಂದಿನಂತೆ ಇದೀಗ ಮತ್ತೊಮ್ಮೆ ಸುದ್ದಿಯಾಗಿರುವ ಹರ್ಭಜನ್, ಈ ಬಾರಿ ಪಾಕಿಸ್ತಾನಿ ಪತ್ರಕರ್ತನ ವಿರುದ್ಧ ಸಿಡಿದೆದ್ದಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಸೆಮಿಫೈನಲ್ನಲ್ಲಿ ನನ್ನನ್ನು ಯಾಕೆ ಕೈಬಿಟ್ರು ಎಂಬುದು ತಿಳಿದಿಲ್ಲ; ಕೋಚ್-ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿದ ಶಮಿ
ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ, ದಿಗ್ಗಜ ವಿಕೆಟ್ ಕೀಪರ್, ‘ಕ್ಯಾಪ್ಟನ್ ಕೂಲ್’ ಮಹೇಂದ್ರ ಸಿಂಗ್ ಧೋನಿ ಅವರನ್ನು ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಅವರೊಂದಿಗೆ ಪಾಕ್ ಪತ್ರಕರ್ತರೊಬ್ಬರು ಹೋಲಿಕೆ ಮಾಡಿ ಮಾತನಾಡಿದ್ದಾರೆ. ಈ ಪೋಸ್ಟ್ ನೋಡಿದ ಕೂಡಲೇ ಸಿಡಿಮಿಡಿಗೊಂಡ ಹರ್ಭಜನ್, ಇಂತಹ ಹೋಲಿಕೆಗಳನ್ನು ಹೇಗೆ ಮಾಡ್ತೀರಾ ನೀವು? ನಿಮ್ಮ ತಲೆ ಸರಿಗಿದೆಯಾ? ಇದನ್ನು ನೋಡಿದರೆ ಸ್ವತಃ ರಿಜ್ವಾನ್ ಅವರೇ ಒಪ್ಪುವುದಿಲ್ಲ. ಧೋನಿ ಅವರಿಗೆ ಅವರೇ ಸಾಟಿ ಎಂದು ಪತ್ರಕರ್ತನನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
“ಮಹೇಂದ್ರ ಸಿಂಗ್ ಅವರ ವಿಕೆಟ್ ಕೀಪಿಂಗ್ ವೈಖರಿ, ಸಾಧನೆ ಬಗ್ಗೆ ರಿಜ್ವಾನ್ ಅವರಿಗೆ ಚೆನ್ನಾಗಿಯೇ ಗೊತ್ತಿದೆ. ಇದನ್ನು ಅವರಿಗೆ ನೀವು ತೋರಿಸಿ ಪ್ರಶ್ನಿಸಿದ್ರೆ ರಿಜ್ವಾನಿರಿಂದಲೇ ಸ್ಪಷ್ಟ ಉತ್ತರ ದೊರಕುತ್ತದೆ. ಈ ವಿಷಯದಲ್ಲಿ ಧೋನಿಯನ್ನು ಹಿಂದಿಕ್ಕುವುದು ಅಥವಾ ಹೋಲಿಕೆ ಮಾಡುವ ಮಾತೇ ಇಲ್ಲ. ಇಡೀ ಜಗತ್ತಿನಲ್ಲಿ ಮಾಹಿಯೇ ನಂಬರ್ ಒನ್. ಅವರನ್ನು ಮೀರಿಸುವವರು ಯಾರು ಇಲ್ಲ” ಎಂದು ಹರ್ಭಜನ್ ಸಿಂಗ್ ಪಾಕಿಸ್ತಾನಿ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ‘ಬಜ್ಜಿ’ ಹೇಳಿಕೆಯನ್ನು ಅನೇಕರು ಸಮರ್ಥಿಸಿಕೊಂಡಿದ್ದು, ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಇವರ ಬೌಲಿಂಗ್ ಎದುರಿಸಲು ಭಯಪಡ್ತಾರೆ ವಿರಾಟ್ ಮತ್ತು ರೋಹಿತ್ ಶರ್ಮ! ಆ ಸ್ಟಾರ್ ವೇಗಿ ಯಾರು ಗೊತ್ತಾ?