ಇವರ ಬೌಲಿಂಗ್​ ಎದುರಿಸಲು ಭಯಪಡ್ತಾರೆ ವಿರಾಟ್ ಮತ್ತು ರೋಹಿತ್ ಶರ್ಮ! ಆ ಸ್ಟಾರ್ ವೇಗಿ ಯಾರು ಗೊತ್ತಾ?

ವಿಜಯವಾಣಿ (74)
Published on

ನವದೆಹಲಿ: ಜೂ.29 ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದ ಟೀಮ್ ಇಂಡಿಯಾ ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿದ ಭಾರತಕ್ಕೆ ಅಭೂತಪೂರ್ವ ಬೆಂಬಲ ಮತ್ತು ಅಭಿನಂದನಗೆಳ ಮಹಾಪೂರವೇ ಹರಿದುಬಂದಿತು. ಈ ಗೆಲುವಿನ ಬೆನ್ನಲ್ಲೇ ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಕೂಡ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಸರಣಿ ಗೆದ್ದು ಬೀಗಿತು.

ಯಾವುದೇ ಪಂದ್ಯಕ್ಕೆ ಹೋಗುವ ಮುನ್ನ ನೆಟ್ಸ್​​ನಲ್ಲಿ ಅಭ್ಯಾಸ ನಡೆಸುವ ಟೀಮ್ ಇಂಡಿಯಾ ಆಟಗಾರರು, ತಮ್ಮದೇ ತಂಡದ ಸ್ಟಾರ್​ ಬೌಲರ್​ಗಳು ಹಾಕುವ ಎಸೆತಗಳನ್ನು ಎದುರಿಸುವ ಮೂಲಕ ತಮ್ಮ ಬ್ಯಾಟಿಂಗ್ ವೈಖರಿಗೆ ಮತ್ತಷ್ಟು ಒತ್ತು ನೀಡುತ್ತಾರೆ. ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಬ್ಯಾಟಿಂಗ್​ ಅಬ್ಬರಕ್ಕೆ ಮನಸೋಲದವರೇ ಇಲ್ಲ. ಇವರಿಬ್ಬರು ಮೈದಾನಕ್ಕೆ ಬಂದು ಎದುರಾಳಿಗಳ ಬೌಲಿಂಗ್​ಗೆ ರನ್​ಗಳ ಮಳೆ ಹರಿಸುವುದನ್ನು ನೋಡುವುದೇ ಒಂದು ರೋಮಾಂಚಕ. ಇಂತಹ ಸ್ಟಾರ್​ ಬ್ಯಾಟರ್​ಗಳು ತಮ್ಮದೇ ಟೀಮ್​ನ ಒಬ್ಬ ಬೌಲರ್​ ಹಾಕುವ ಬಾಲ್​ ಎದುರಿಸಲು ಕಷ್ಟಪಡುತ್ತಾರೆ ಎಂಬ ಸಂಗತಿ ನಿಮಗೆ ಗೊತ್ತಿದ್ಯಾ?

'ರನ್​ಮಷಿನ್' ಮತ್ತು ರೋಹಿತ್ ಶರ್ಮ ಬ್ಯಾಟಿಂಗ್ ಪವರ್​ ಕಂಟ್ರೋಲ್ ಮಾಡುವ ಸಾಮರ್ಥ್ಯ ಹೊಂದಿರುವ ಆ ಸ್ಟಾರ್ ಬೌಲರ್ ಬೇರಾರು ಅಲ್ಲ ಮೊಹಮ್ಮದ್​ ಶಮಿ. ಟೀಮ್ ಇಂಡಿಯಾ ಪರ ಅದ್ಭುತ ಬೌಲಿಂಗ್ ದಾಳಿ ಮಾಡುವ ಶಮಿ, ಕ್ರೀಸ್​ಗೆ ಬರುವ ತಮ್ಮ ಎದುರಾಳಿ ತಂಡದ ಬ್ಯಾಟ್ಸ್​ಮನ್​ಗಳಲ್ಲಿ ಬೆವರಿಳಿಸುವುದಕ್ಕೆ ನಿಸ್ಸಿಮರು. ನೆಟ್ಸ್​ನಲ್ಲಿ ಅಭ್ಯಾಸ ಮಾಡುವಾಗ ಶಮಿ ಎಸೆಯುವ ಬಾಲ್​ಗೆ ವಿರಾಟ್ ಮತ್ತು ರೋಹಿತ್ ಬ್ಯಾಟ್ ಮಾಡಲು ಕೊಂಚ ಹೆದರುತ್ತಾರಂತೆ. ಇದು ಕೇಳುವುದಕ್ಕೆ ಶಾಕಿಂಗ್ ಅನಿಸಿದರೂ ನಿಜ.

ಈ ಕುರಿತಂತೆ ಸ್ವತಃ ಮೊಹಮ್ಮದ್ ಶಮಿ ಅವರೇ ಹೇಳಿಕೊಂಡಿದ್ದು, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಖ್ಯಾತ ಪತ್ರಕರ್ತ ಶುಭಂಕರ್ ಮಿಶ್ರಾ ಅವರೊಂದಿಗೆ ಹಲವು ಆಸಕ್ತಿದಾಯಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕೆಲವು ತಮಾಷೆಯ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net