ನವದೆಹಲಿ: ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಅವರ ಐದು ಬೇಡಿಕೆಗಳಲ್ಲಿ ಟಿ20 ತಂಡಕ್ಕೆ ನೂತನ ನಾಯಕ, ಉಪನಾಯಕ ಹೆಸರಿಸಿರುವ ಬಿಸಿಸಿಐ, ತರಬೇತಿ ಬಳಗಕ್ಕೂ ಮಾಜಿ ಕ್ರಿಕೆಟಿಗರಾದ ಮುಂಬೈನ ಅಭಿಷೇಕ್ ನಾಯರ್ ಹಾಗೂ ನೆದರ್ಲೆಂಡ್‌ನ ರ‌್ಯಾನ್ ಟೆನ್ ಡೋಶೆಟ್ ಅವರನ್ನು ಸಹಾಯಕ ಕೋಚ್‌ಗಳಾಗಿ ನೇಮಿಸಲು ಒಪ್ಪಿಗೆ ನೀಡಿದೆ ಎನ್ನಲಾಗಿದೆ. ನೂತನ ಬೌಲಿಂಗ್ ಕೋಚ್ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.
ನಾಳೆ ಸುದ್ದಿಗೋಷ್ಠಿ: ಕೊಲಂಬೊಗೆ ಪ್ರಯಾಣಿಸುವ ಮುನ್ನ ಮುಂಬೈನ ಅಂಧೇರಿಯಲ್ಲಿ ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸೋಮವಾರ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಟೀಮ್ ಇಂಡಿಯಾದ ಕೋಚ್ ಆದ ಬಳಿಕ ಗಂಭಿರ್ ಮೊದಲ ಬಾರಿಗೆ ಮಾಧ್ಯಮಗಳ ಎದುರು ಹಾಜರಾಗಲಿದ್ದು, ಟೀಮ್ ಇಂಡಿಯಾ ಆಯ್ಕೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಗಳಿವೆ. ಸುದ್ದಿಗೋಷ್ಠಿ ಜಿಯೋ ಸಿನಿಮಾದಲ್ಲಿ ನೇರ ಪ್ರಸಾರ ಕಾಣಲಿದೆ. ಭಾರತ ತಂಡ ಸೋಮವಾರ ಮಧ್ಯಾಹ್ನ 1 ಗಂಟೆಗೆ ಮುಂಬೈನಿಂದ ಬಾಡಿಗೆ ವಿಮಾನದಲ್ಲಿ ಕೊಲಂಬೊಗೆ ತೆರಳಲಿದೆ.