ಗುಟ್ಟಾಗಿ ದೇವಸ್ಥಾನದಲ್ಲಿ ಮದುವೆಯಾದ ಖ್ಯಾತ ನಟ, ನಟಿ; ಇಬ್ಬರಿಗೂ ಇದು 2ನೇ ಮದುವೆ

siddharth
Published on

ಬೆಂಗಳೂರು: ನಟಿ ಅದಿತಿ ರಾವ್ ಮತ್ತು ಸಿದ್ಧಾರ್ಥ್ ಬಹಳ ಸಮಯದಿಂದ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದರು. ಇಂದು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರದಲ್ಲಿರುವ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಜೋಡಿಯ ವಿವಾಹವಾಗಿದೆ ಎಂದು ವರದಿಯಾಗಿದೆ. ಇದು ಇಬ್ಬರಿಗೂ 2ನೇ ಮದುವೆ ಎನ್ನುವು ವಿಶೇಷವಾಗಿದೆ.

ಸಿದ್ಧಾರ್ಥ್ ಮತ್ತು ಅದಿತಿ ಇಂದು ಬೆಳಗ್ಗೆ ವನಪರ್ತಿಯ ಶ್ರೀರಂಗಪುರಂ ದೇವಸ್ಥಾನದಲ್ಲಿ ಯಾರಿಗೂ ತಿಳಿಯದಂತೆ ರಹಸ್ಯವಾಗಿ ವಿವಾಹವಾದರು. ಇದೀಗ ಈ ಸುದ್ದಿ ವೈರಲ್ ಆಗಿದೆ. ಆದರೆ ಈ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಹೊರಬಂದಿಲ್ಲ.  ಎರಡೂ ಕುಟುಂಬದ ಹಿರಿಯರು, ಹತ್ತಿರದ ಬಂಧುಗಳು, ಸ್ನೇಹಿತರ ಸಮ್ಮುಖದಲ್ಲಿ ಇವರ ಮದುವೆ ನಡೆದಿದೆಯಂತೆ. ತಮಿಳುನಾಡಿನ ಪುರೋಹಿತರು ಮದುವೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಿದ್ದಾರೆ ಎನ್ನಲಾಗಿದೆ.

ಇಬ್ಬರಿಗೂ ಈ ಹಿಂದೆಯೇ ಮದುವೆಯಾಗಿತ್ತು. ಆದರೆ, ಇಬ್ಬರೂ ವಿಚ್ಛೇದನ ಪಡೆಯದೇ ಬೇರ್ಪಟ್ಟರು. ಸಿದ್ಧಾರ್ಥ್ 2007 ರಲ್ಲಿ ವಿಚ್ಛೇದನವಿಲ್ಲದ ಮದುವೆಯನ್ನು ಕೊನೆಗೊಳಿಸಿದರು. ಇದೀಗ ಅದಿತಿ ಜೊತೆಗಿನ ಅವರ ಪ್ರೀತಿ ಮದುವೆಯ ಹಂತಕ್ಕೆ ತಲುಪಿರುವುದು ಗೊತ್ತಾಗಿದೆ. 2012 ರಲ್ಲಿ ವಿಚ್ಛೇದನದೊಂದಿಗೆ ಅದಿತಿ ತನ್ನ ಮೊದಲ ಮದುವೆಯನ್ನು ಕೊನೆಗೊಳಿಸಿದರು.

ಈ ಮೊದಲು ಅದಿತಿ ರಾವ್​ ಹೈದರಿ ಅವರು ನಟ ಸತ್ಯದೀಪ್​ ಮಿಶ್ರಾ ಜತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ಧಾರ್ಥ್​ ಕೂಡ ಮೇಘನಾ ನಾರಾಯಣ್​ ಜತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್​ ಪಡೆದರು.

ಅದಿತಿ ರಾವ್ ಮತ್ತು ಸಿದ್ಧಾರ್ಥ್ ‘ಮಹಾಸಮುದ್ರಂ’ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದು, ಆಗ ಪ್ರೀತಿಯಲ್ಲಿ ಬಿದ್ದಿದ್ದರು. ಅಂದಿನಿಂದ ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದರು, ಡಿನ್ನರ್, ಲಂಚ್ ಮತ್ತು ಪಾರ್ಟಿಗಳಿಗೆ ಹೋಗುತ್ತಿದ್ದಾರೆ. ಆದರೆ ಪ್ರೀತಿ ಮತ್ತು ಮದುವೆಯ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿರಲಿಲ್ಲ. ಇದೀಗ ಇವರ ಪ್ರೀತಿಗೆ ಮದುವೆ ಎನ್ನುವ ಮುದ್ರೆ ಒತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net