More

    ಮಗಳಿಗೆ ಓದು ಅಂತಾ ಕಳುಹಿಸಿದ್ರೆ ಹೀಗೆ ಮಾಡ್ತಿದ್ದಾಳೆ! ಬದಲಾಯಿಸಲು ಸಾಧ್ಯವಿಲ್ಲ ಎಂದ ನಟಿ ಊರ್ವಶಿ

    ಬೆಂಗಳೂರು: ಬಹುಭಾಷಾ ನಟಿ ಊರ್ವಶಿ. ನಟಿ ಸಿನಿಮಾ ಜತೆಗೆ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಮತ್ತೆ ಸುದ್ದಿಯಾಗಿದ್ದಾರೆ. ಊರ್ವಶಿ ಮಗಳು ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಡುಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿಯೊಂದು ವೈರಲ್​​ ಆಗಿದೆ.

    ಬಹುಭಾಷಾ ನಟಿ ಊರ್ವಶಿ ಗೊತ್ತು ತಾನೆ? ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್ ಜೊತೆ ನಟಿಸಿದ್ದ ನಟಿ ಊರ್ವಶಿ. ತಾಯಿ, ಹೆಂಡ್ತಿ ಹೀಗೆ ಅನೇಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ, ಹಲವು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಈಗ ಈಕೆ ಮಗಳು ಕೂಡಾ ಚಿತ್ರರಂಗಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರಂತೆ.

    ಅಮ್ಮನ ಪಾತ್ರಗಳಿಗೆ, ಮುಗ್ಧ ಪಾತ್ರಗಳಿಗೆ, ಮುಖಭಾವದಿಂದಲೇ ಜನರನ್ನು ನಗಿಸಬಲ್ಲ ಪಾತ್ರಗಳಿಗೆ ಊರ್ವಶಿ ಹೆಸರುವಾಸಿಯಾಗಿದ್ದರು. ಈ ನಟಿನಿಜವಾದ ಹೆಸರು ಕವಿತಾ ರಂಜಿನಿ. ಕೇರಳದಲ್ಲಿ ಹುಟ್ಟಿ ಬೆಳೆದ ಅವರು ಬಾಲ ಕಲಾವಿದೆಯಾಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ತಮಿಳಿನ ಮುಂಡಾನೈ ಮುಡಿಚ್ಚು ಚಿತ್ರದ ಮೂಲಕ ನಾಯಕಿಯಾದರು. ಕೆಲಕಾಲ ನಾಯಕಿಯಾಗಿ ನಟಿಸಿದ ನಂತರ ಕ್ಯಾರೆಕ್ಟರ್ ಆರ್ಟಿಸ್ಟ್ ಆದರು. ಅವರು ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 700 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಮಾಡಿದ್ದಾರೆ.ಊರ್ವಶಿ ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ.

    ಇತ್ತೀಚೆಗಷ್ಟೇ ಕಾಲಿವುಡ್‌ನ ಸಂದರ್ಶನವೊಂದರಲ್ಲಿ ಅವರು ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮಗಳು ‘ತೇಜಾ ಲಕ್ಷ್ಮಿ’ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಮಗಳು ಈಗ ಸಿನಿಮಾದಲ್ಲಿ ನಟಿಸಲು ಹೊರಟಿದ್ದೇಕೆ ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಊರ್ವಶಿ ಇತ್ತೀಚೆಗಷ್ಟೇ ಮಗಳ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಊರ್ವಶಿ ಮಾತನಾಡಿ, ತೇಜ ಲಕ್ಷ್ಮಿಗೆ ಈಗ 23 ವರ್ಷವಾಗಿದ್ದು, ಸಿನಿಮಾದಲ್ಲಿ ನಟಿಸುವ ಆಸಕ್ತಿ ಇದೆ. ಹಾಗಾಗಿಯೇ ಆಕೆ ಈಗ ಹೊರ ಜಗತ್ತಿಗೆ ಪರಿಚಯವಾಗಿದ್ದಾಳೆ. ‘ಇಷ್ಟು ವರ್ಷಗಳಿಂದ ನನ್ನ ಮಗಳಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿರಲಿಲ್ಲ. ಕಾರಣ ನಟಿ-ನಟರ ಮಕ್ಕಳು ಸಿನಿಮಾದಲ್ಲಿ ನಟಿಸಲು ಬಂದರೆ ತಂದೆ-ತಾಯಿಯ ಪ್ರಭಾವದಿಂದ ಜನ ಬೆಂಬಲಿಸುತ್ತಾರೆ. ಇದು ದೊಡ್ಡ ಸಮಸ್ಯೆಯಾಗಲಿದೆ. ಅದಕ್ಕೇ ಓದು ಮುಗಿಸಿ ಬಾ ಎಂದು ಕಳುಹಿಸಿದ್ದೆ. ಆದರೆ ಈಗ ಓದು ಮುಗಿದ ನಂತರ ನನ್ನ ಬಳಿ ಬಂದು ತನ್ನ ಸ್ನೇಹಿತರ ವಲಯದಲ್ಲಿ ಎಲ್ಲರೂ ನಟಿಸಲು ಹೇಳುತ್ತಿದ್ದಾರೆ ಎಂದಿದ್ದಾರೆ.

    ಈಗ ಸಿನಿಮಾದಲ್ಲಿ ನಟಿಸುವ ಆಸಕ್ತಿಯೂ ಮಗಳಿಗೆ ಇದೆ. ಹಾಗಾಗಿ ನಾನು ಅದಕ್ಕೆ ಒಪ್ಪಿಕೊಂಡೆ. ಈಗ ಕೆಲವು ಕಥೆಗಳನ್ನು ಕೇಳಿ. ಅವಳು ಆರಂಭದಲ್ಲಿ ಚಲನಚಿತ್ರಗಳಿಗೆ ಬರಬಾರದು ಎಂದು ಯೋಚಿಸಿದಳು, ಆದರೆ ಅದೃಷ್ಟವು ಅವಳನ್ನು ಅದರ ಕಡೆಗೆ ತಿರುಗಿಸುತ್ತದೆ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಊರ್ವಶಿ ಆ ಸಂದರ್ಶನದಲ್ಲಿ ಹೇಳಿದ್ದಾರೆ.

    ನಟಿ ಊರ್ವಶಿ ಅವರು ನಟ ಮನೋಜ್ ಜಯನ್ ಅವರನ್ನು ಪ್ರೀತಿಸಿ 2000 ರಲ್ಲಿ ವಿವಾಹವಾದರು. ತೇಜ ಲಕ್ಷ್ಮಿ ಅವರಿಗೆ ಹುಟ್ಟಿದ ಮಗಳು. ನಂತರ ಮನೋಜ್ ಜತೆಗಿನ ಭಿನ್ನಾಭಿಪ್ರಾಯದಿಂದ ಆತನಿಗೆ ವಿಚ್ಚೇದನ ನೀಡಿ 2013ರಲ್ಲಿ ಶಿವಪ್ರಸಾದ್ ಎಂಬಾತನನ್ನು ಮದುವೆಯಾಗಿ ಆತನೊಂದಿಗೆ ವಾಸವಾಗಿದ್ದಾಳೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts