More

    VIDEO| ನಿಮ್ಮ ಬೈಕ್​ಗೆ ಈ ಸಣ್ಣ ಬದಲಾವಣೆ ಮಾಡಿದ್ರೆ ಲೀಟರ್​​ಗೆ 90 ಕಿ.ಮೀ ಮೈಲೇಜ್ ಪಕ್ಕಾ!

    ಬೆಂಗಳೂರು: ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಕಾರಣ ಅನೇಕ ಯುವಕರು ರಾತ್ರೋರಾತ್ರಿ ಫೇಮಸ್ ಆಗಲು ಹಾತೊರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬೈಕ್ ಮೈಲೇಜ್ ಹೆಚ್ಚಿಸಲು ವ್ಯಕ್ತಿಯೊಬ್ಬರು ಮಾಡಿದ ತಂತ್ರಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಯಾವುದೇ ದ್ವಿಚಕ್ರ ವಾಹನಗಳು, ಪ್ರತಿ ಲೀಟರ್ ಪೆಟ್ರೋಲ್ ಗೆ 45 ಕಿ.ಮೀ ನಿಂದ 60 ಕಿ.ಮೀ. ಇನ್ನು ನಾಲ್ಕು ಚಕ್ರದ ವಾಹನಗಳು ಪ್ರತಿ ಲೀಟರ್ ಡೀಸೆಲ್ ಗೆ 15ರಿಂದ 20 ಕಿ.ಮೀ. ಆದರೆ ಬೈಕ್ ಪ್ರತಿ ಲೀಟರ್ ಗೆ 90 ಕಿ.ಮೀ ಮೈಲೇಜ್ ನೀಡುವುದನ್ನು ನೀವು ನೋಡಿದ್ದೀರಾ.? ಕೇಳಲು ಸ್ವಲ್ಪ ಆಶ್ಚರ್ಯ ಎನಿಸುತ್ತದೆ. ಹೌದು.. ಆದರೆ ಈ ಅಸಾಧ್ಯವನ್ನು ಸಾಧ್ಯವಾಗಿಸಿದ್ದೇನೆ ಎಂದು ವ್ಯಕ್ತಿಯೊಬ್ಬರು ಹೇಳುತ್ತಾರೆ.

    ತನ್ನ ಬೈಕ್ ಪ್ಲಗ್ ಗೆ ಚಿಕ್ಕ ಸಾಧನ (ಸೆಮಿ ಕಂಡಕ್ಟರ್ ) ಜೋಡಿಸಿ ಅದಕ್ಕೆ ಜೋಡಿಸಿದ ವೈರ್ ಪ್ರತಿ ಲೀಟರ್ ಗೆ 25-30 ಕಿ.ಮೀ ನೀಡುವ ಬೈಕ್ ನ ಮೈಲೇಜ್ ಅನ್ನು ಸರಾಸರಿ 90 ಕಿ.ಮೀ.ಗೆ ಹೆಚ್ಚಿಸಿಕೊಂಡಿದ್ದೇನೆ. ಈ ಸಾಧನ (ಸೆಮಿಕಂಡಕ್ಟರ್) ಬೈಕಿನ ಮೈಲೇಜ್ ಹೆಚ್ಚಿಸುವುದಲ್ಲದೆ ಬೈಕ್ ನಿಂದ ಕಡಿಮೆ ಹೊಗೆ ಬರುವಂತೆ ಮಾಡುತ್ತದೆ ಎಂದು ಹೇಳಿದ್ದಾನೆ.

    ಈ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ‘bapu_zamidar_short’ ಖಾತೆಯಿಂದ ಹಂಚಿಕೊಂಡಾಗ, ನೆಟಿಜನ್‌ಗಳು ತಮ್ಮ ಕಾಮೆಂಟ್‌ಗಳ ಸುರಿಮಳೆ ಗೈದಿದ್ದಾರೆ. ‘ಈ ತಂತ್ರ ಸಂಪೂರ್ಣ ನಕಲಿ…’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಈ ಸತ್ಯಾಸತ್ಯತೆ ಏನು ಎಂದುಬುದು ಮಾತ್ರ ತಿಳಿದಯ ಬಂದಿಲ್ಲ.

    ಸಿನಿಮಾ ಸೆಟ್​ನಲ್ಲೇ ನಟಿಗೆ ಗರ್ಭಪಾತ!; ಪತ್ನಿ ಕಪಾಳಕ್ಕೆ ಹೊಡೆದಿದ್ರಾ ಈ ಸ್ಟಾರ್​ ನಟ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts