ನಟ ಸುದೀಪ್​ ಕಾಂಗ್ರೆಸ್ ಪರ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡ್ತಾರೆ: ಡಿ.ಕೆ. ಶಿವಕುಮಾರ್​ ಹೇಳಿಕೆ

DKS Sudeep
Published on

ಬೆಂಗಳೂರು: ನಟ ಸುದೀಪ್​ ಕಾಂಗ್ರೆಸ್ ಪರ ಕೂಡ ಕೆಲ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಬಿಜೆಪಿ ಪರ ಸುದೀಪ್ ಪ್ರಚಾರ ಮಾಡುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಸುದೀಪ್​ ಅವರು ಬಿಜೆಪಿ ಪಕ್ಷಕ್ಕೆ ಸೇರಿಲ್ಲ. ಸುದೀಪ್ ಹಾಗೂ ನನ್ನ ನಡುವೆ ಏನೇನು ಮಾತುಕತೆ ಆಯ್ತು ಅಂತಾ ನಾನಿಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ದರ್ಶನ್ ಮತ್ತು ಸುದೀಪ್ ಇಬ್ಬರು ನನ್ನ ಸ್ನೇಹಿತರು. ಶಿವಕುಮಾರ್ ನನ್ನ ಒಳ್ಳೆಯ ಸ್ನೇಹಿತರು ಅಂತ ಸುದೀಪ್ ಕೂಡ ಹೇಳಿದ್ದಾರೆ. ನೀವು ಅದನ್ನೂ ಕೇಳಬೇಕಲ್ವ ಎಂದ ಡಿಕೆಶಿ ಸುದ್ದಿಗಾರರನ್ನೇ ಪ್ರಶ್ನೆ ಮಾಡಿದರು.

ಶಿವರಾಜ್ ಕುಮಾರ್ ಪ್ರಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ತಮ್ಮ ಧರ್ಮಪತ್ನಿ ಅವರನ್ನು ಕಾಂಗ್ರೆಸ್ಸಿಗೆ ಕಳುಹಿಸಿದ್ದಾರೆ. ಗೀತಾ ಹಾಗೂ ಶಿವರಾಜ್​ಕುಮಾರ್ ಒಂದೇ ದೇಹ. ಮುಂದೆ ಗೀತಾ ಬಂದಿದ್ದಾರೆ, ಅವರ ಹಿಂದೆ ಶಿವರಾಜ್ ಕುಮಾರ್ ಕೂಡ ಇರ್ತಾರೆ ಎಂದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net