More

    ನಡ್ಡಾ ನಿಮಗೆ ಮಹಿಳೆಯರ ಮೇಲೆ ಗೌರವ ಇದ್ರೆ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಿ: ಏರು ಧ್ವನಿಯಲ್ಲಿ ಡಿಕೆಶಿ ಪ್ರತಿಕ್ರಿಯೆ!

    ಬೆಂಗಳೂರು: ಇತ್ತೀಚೆಗೆ ಬಸನಗೌಡ ಪಾಟೀಲ ಯತ್ನಾಳ್, ಸೋನಿಯಾ ಗಾಂಧಿಯನ್ನು ವಿಷಕನ್ಯೆ ಎಂದು ಕರೆದಿದ್ದರು. ಈ ಬಗ್ಗೆ ಕಾಂಗ್ರೆಸ್​ನಿಂದ ಖಂಡನೆಯೂ ಶುರುವಾಗಿತ್ತು.

    ಇದೀಗ ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದು ಏರು ಧ್ವನಿಯಲ್ಲೇ ಯತ್ನಾಳ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು “ಸೋನಿಯಾ ಗಾಂಧಿಯವರಿಗೆ ಪ್ರಧಾನಿ ಆಗುವ ಅವಕಾಶ ಇತ್ತು. ಅಬ್ದುಲ್ ಕಲಾಂ ಅವರು ಪ್ರಮಾಣ ವಚನ ತೆಗೆದುಕೊಳ್ಳಲು ಆಹ್ವಾನ ನೀಡಿದ್ದರು. ಸೋನಿಯಾ ಗಾಂಧಿ ಈ ಭೂಮಿಯಲ್ಲಿ ಹುಟ್ಟಿಲ್ಲ. ಅವರು ದೊಡ್ಡ ಕುಟುಂಬದ ಸೊಸೆ.

    ಇದನ್ನೂ ಓದಿ: ‘ವಿಷಕನ್ಯೆ ಇವಳು…ಭೂಗತಲೋಕದ ಸುಪಾರಿ ಕಿಲ್ಲರ್​…’: ಸಚಿವರ ಆರೋಪ

    ಅವರ ಗಂಡ, ಅತ್ತೆ ಈ ದೇಶಕ್ಕೆ ಪ್ರಾಣ ತ್ಯಾಗ ಮಾಡಿದ್ದಾರೆ. ಪ್ರಧಾನಿ ಹುದ್ದೆ ಬಿಟ್ಟು ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಮಾಡಿದ್ರು. ಬಳಿಕ ಕಾಂಗ್ರೆಸ್ ಕಟ್ಟುವ ಜವಾಬ್ದಾರಿ ತೆಗೆದುಕೊಂಡ್ರು. ನಾನು ಜೈಲಿಗೆ ಹೋದಾಗ ಶಕ್ತಿ ಕೊಟ್ರು. ಆ ತಾಯಿಗೆ ಮಾಜಿ ಸಚಿವ ವಿಷಕನ್ಯೆ ಅಂತ ಕರೆದಿದ್ದಾನೆ

    ಮಿಸ್ಟರ್ ಯತ್ನಾಳ ಯಾರು ಏನ್ ಮಾಡ್ತಾರೆ ಗೊತ್ತಿಲ್ಲ. ನನ್ನ ತಾಯಿಯ ಬಗ್ಗೆ ಮಾತನಾಡಿದ್ದೀಯಾ. ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೆ ಸಹಿಸಲ್ಲ. ಯತ್ನಾಳ ಕ್ಷಮೆ ನನಗೆ ಬೇಡ. ಪ್ರಧಾನಿ ಮತ್ತು ಸಿಎಂ ಕ್ಷಮೆ ಬೇಕು. ಮಹಿಳೆಗೆ ಅವಮಾನ ಮಾಡಿದ್ದಾರೆ. ನಡ್ಡಾ ನಿಮಗೆ ಮಹಿಳೆಯರ ಮೇಲೆ ಗೌರವ ಇದ್ರೆ. ಯತ್ನಾಳ ಮೇಲೆ ಕ್ರಮ ತೆಗೆದುಕೊಳ್ಳಿ” ಎಂದು ಏರು ಧ್ವನಿಯಲ್ಲಿ ಯತ್ನಾಳ ಮೇಲೆ ವಾಗ್ದಾಳಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts