ಹುಲಿ ಉಗುರು ಪ್ರಕರಣ; ಎಚ್ಚರಿಸಬೇಕಿತ್ತು, ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ: ನಟ ಜಗ್ಗೇಶ್​

jaggesh Tiger Claw

ಬೆಂಗಳೂರು: ಕಳೆದ ವರ್ಷ ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ ಹುಲಿ ಉಗುರು ಪ್ರಕರಣ ಬಿಗ್​ಬಾಸ್​ ಮನೆಯಿಂದ ಶುರುವಾಗಿ ಖ್ಯಾತನಾಮ ಸೆಲೆಬ್ರಿಟಿಗಳ ಮನೆ ಮೇಲೆಲ್ಲಾ ದಾಳಿ ಮಾಡಲಾಗಿತ್ತು. ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​ ಸೇರಿದಂತೆ ಹಲವರ ಮನೆ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಹುಲಿ ಉಗುರಿನ ಪೆಂಡೆಂಟ್ ಅನ್ನು ವಶಕ್ಕೆ ಪಡೆದಿದ್ದರು.

ಘಟನೆ ನಡೆದು ತುಂಬಾ ದಿನಗಳಾದ ಬಳಿಕ ಈ ಬಗ್ಗೆ ಈಗ ಮಾತನಾಡಿರುವ ನಟ ಜಗ್ಗೇಶ್​ ಪ್ರಕರಣದಿಂದ ತಮ್ಮಗಾದ ನೋವನ್ನು ಹೊರಹಾಕಿದ್ದಾರೆ. ನನ್ನ ತಪ್ಪು ಕಂಡಾಗ ಎಚ್ಚರಿಸಬೇಕಿತ್ತು, ಅದರ ಬದಲಿಗೆ ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ.

ಯಾರಿಗೂ ಜಾಗೃತಿ ಇರಲಿಲ್ಲ

ಇತ್ತೀಚಿಗೆ ನಡೆದ ರಂಗನಾಯಕ ಚಿತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್​, ನಮ್ಮ ಅಮ್ಮ ಒಂದು ಹುಲಿ ಉಗುರಿನ ಪೆಂಡೆಂಟ್ ಕೊಟ್ಟಿದ್ದರು, ನನ್ನ 40 ವರ್ಷದ ಸಿನಿಮಾ ಜರ್ನಿಯ ಸಂದರ್ಶನದಲ್ಲಿ ನಮ್ಮ ತಾಯಿ ಕೊಟ್ಟಿದ್ದ ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಹೆಮ್ಮೆಯಿಂದ ಹೇಳಿದ್ದೆ. ಅವನ್ಯಾರೋ ಕಿತ್ತೋದ್ ನನ್ಮಗ ರಿಯಲ್ ಆಗಿರೋದನ್ನು ಹಾಕ್ಕೊಂಡು ತಗಲಾಕ್ಕೊಂಡ್ ಬಿಟ್ಟ. ಅದಾಗಿದ್ದೆ ತಡ ಎಲ್ಲ ಚಾನೆಲ್, ಯೂಟ್ಯೂಬ್ ಚಾನೆಲ್​ನವರು ನಮ್ಮ ಮನೆ ಮುಂದೆ ಬಂದು ನಿಂತರು.

ನಾನು ಮಾತೃಪ್ರೇಮಿ, ಹಾಗಾಗಿ ನಮ್ಮಮ್ಮ ಕೊಟ್ಟ ಉಡುಗೊರೆ ಬಗ್ಗೆ ಪ್ರೀತಿಯಿಂದ ಹೇಳಿಕೊಂಡೆ. ಆದರೆ ಅದನ್ನೆಲ್ಲ ಧರಿಸಬಾರದು ಎಂಬ ಕಾನೂನು ಇದೆಯಂತೆ. ಅದರ ಬಗ್ಗೆ ಯಾರಿಗೂ ಜಾಗೃತಿ ಇರಲಿಲ್ಲ. ಧರಿಸುವುದು ಸಹಜ ಎಂಬಂತೆ ನಾನೂ ಧರಿಸಿದ್ದೆ. ಆತ ಸಿಕ್ಕಿ ಹಾಕಿಕೊಂಡಮೇಲೆ, ನನ್ನ ಹಳೆಯ ವಿಡಿಯೋ ವೈರಲ್ ಮಾಡಿದರು. ಪಾಪ ಜನರಿಗೇನು ಗೊತ್ತು, ಬಡವರಿಗೆ ಒಂದು ನ್ಯಾಯ, ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನ ಎಂದು ಪ್ರಶ್ನೆ ಮಾಡಿದರು. ಯಾವುದೋ ಕೆಲವು ವ್ಯೀವ್ಸ್​ಗಳಿಗಾಗಿ ಎಂಥೆಂಥವರೋ ಏನೇನೋ ಮಾತನಾಡಿದರು ಎಂದು ಬೇಸರ ಹೊರಹಾಕಿದ್ದಾರೆ.

jaggesh

ಇದನ್ನು ಓದಿ: ಅಂಬಾನಿ ಒಡೆತನದ ಆಂಟಿಲಿಯಾದ ಒಳಾಂಗಣ ವಿನ್ಯಾಸಗಾರ್ತಿ ಯಾರು ಗೊತ್ತಾ; ಖ್ಯಾತ ನಟನ ಪತ್ನಿ ಈಕೆ

ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ

ನಂತರ, ಕೆಲವು ಅಧಿಕಾರಿಗಳು ಮನೆಗೆ ಬಂದರು, ಅವರ ಕರ್ತವ್ಯ ಅವರು ಮಾಡಿದರು. ಅಂದು ನಾನು ಮನೆಯಲ್ಲಿರಲಿಲ್ಲ, ಆ ಪೆಂಡೆಂಟ್ ಅನ್ನು ಕೊಟ್ಟುಬಿಡುವಂತೆ ನಾನು ಪತ್ನಿಗೆ ಹೇಳಿದ್ದೆ, ಹಾಗೆಯೇ ಅಧಿಕಾರಿಗಳಿಗೆ ಅದನ್ನು ಕೊಡಲಾಯ್ತು, ಅದನ್ನು ಡಸ್ಟ್​ಬಿನ್​ನಲ್ಲಿ ಎಸೆದರು. ನನ್ನ ತಾಯಿ ಪ್ರೀತಿಯಿಂದ ಕೊಟ್ಟಿದ್ದರು, ಅದು ನನ್ನಿಂದ ದೂರವಾಯ್ತು. ವಸ್ತು ಹೋದರೆ ಏನಂತೆ ನನ್ನ ತಾಯಿ ನನ್ನ ಹೃದಯದಲ್ಲಿ ಇದ್ದಾರೆ. ಈ ದೇಹವನ್ನೇ ಅವರು ನೀಡಿದ್ದಾರೆ.

ಆ ಪ್ರಕರಣದ ಬಗ್ಗೆ ಚರ್ಚೆ ಹೆಚ್ಚಾದಾಗ ಅನಿವಾರ್ಯವಾಗಿ ನ್ಯಾಯಾಲಯಕ್ಕೆ ಹೋಗಿ ಸ್ಟೇ ತರಬೇಕಾಯ್ತು. ಅದಾದ ಬಳಿಕ ನನ್ನ ಆತ್ಮೀಯ ಗೆಳೆಯರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಕರೆ ಮಾಡಿ ಇಂಥಹಾ ಕಾನೂನಿನಂದ ಸಮಸ್ಯೆ ಆಗುತ್ತಿದೆ ನಿಮ್ಮ ನೆರವು ಬೇಕು ಎಂದು ಕೇಳಿಕೊಂಡೆ. ಕೂಡಲೇ ಅವರು ಹೇಳಬೇಕಾದವರಿಗೆ ಹೇಳಿ ಆ ಘಟನೆ ಬಗ್ಗೆ ಜಾಗೃತಿ ಮೂಡಿಸಿ, ಆ ಪ್ರಕರಣದ ಜೋರು ಕಡಿಮೆ ಆಗುವಂತೆ ಮಾಡಿದರು. ಆದರೆ ನನಗೆ ಬೇಸರವಾಗಿದ್ದೆಂದರೆ, ನಾನು ನಾಲ್ಕು ದಶಕದಿಂದಲೂ ಚಿತ್ರರಂಗದಲ್ಲಿದ್ದೇನೆ, ಮಾಧ್ಯಮದವರೊಟ್ಟಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದೀನಿ, ನನ್ನ ತಪ್ಪು ಕಂಡಾಗ ಎಚ್ಚರಿಸಬೇಕಿತ್ತು, ಅದರ ಬದಲಿಗೆ ವೈರಲ್ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ನಟ ಜಗ್ಗೇಶ್​ ಬೇಸರ ಹೊರಹಾಕಿದ್ದಾರೆ.

Share This Article

ಮಿತಿ ಮೀರಿ ಮೊಬೈಲ್ ಬಳಸುವುದರಿಂದ ವೃದ್ಧಾಪ್ಯದ ಲಕ್ಷಣ ಚಿಕ್ಕವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತವೆ! ತಜ್ಞರು ಏನು ಹೇಳುತ್ತಾರೆ ಗೊತ್ತಾ?… smartphone

ನವದೆಹಲಿ:  ( smartphone ) ಇತ್ತೀಚಿನ ದಿನಗಳಲ್ಲಿ ಚಿಕ್ಕವರು, ಹಿರಿಯರು ಎಂಬ ಭೇದವಿಲ್ಲದೆ ಎಲ್ಲರೂ ಮೊಬೈಲ್…

ಮೊಬೈಲ್​ ಹಿಡಿದುಕೊಳ್ಳುವ ಸ್ಟೈಲ್​ ನೋಡಿಯೇ ನಿಮ್ಮ ವ್ಯಕ್ತಿತ್ವ ಎಂಥದ್ದು ಅಂತ ಹೇಳಬಹುದು! ಇಲ್ಲಿದೆ ಅಚ್ಚರಿ ಸಂಗತಿ… Personality Facts

Personality Facts : ಸೈಕಾಲಜಿ ಪ್ರಕಾರ ಒಬ್ಬರ ಕ್ರಿಯೆಗಳ ಆಧಾರದ ಮೇಲೆ ಅವರ ವ್ಯಕ್ತಿತ್ವವನ್ನು ನಿರ್ಣಯಿಸಬಹುದು.…

ಬಿಸಿ..ಬಿಸಿ ಚಹಾ ಕುಡಿಯುವ ಅಭ್ಯಾಸವಿದ್ಯಾ? ಹಾಗಿದ್ರೆ ಇಂದೇ ಬಿಟ್ಟು ಬಿಡಿ.. ಹಲ್ಲುಗಳಿಗೆ ಎಷ್ಟು ಹಾನಿಕಾರಕ ಗೊತ್ತಾ? Health Tips

Health Tips: ಬಿಸಿ..ಬಿಸಿ ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ...ಊಟ ಇಲ್ಲದಿದ್ದರೂ, ತಡವಾದರೂ ಒಂದು…