More

    ಆರ್​. ಅಶ್ವಿನ್​ ಎಡವಟ್ಟಿನಿಂದಾಗಿ ಟೀಂ ಇಂಡಿಯಾಗೆ ಪೆನಾಲ್ಟಿ; ತಾಳ್ಮೆ ಕಳೆದುಕೊಂಡ ಹಿಟ್​ಮ್ಯಾನ್

    ರಾಜ್​ಕೋಟ್​: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್​ ಪಂದ್ಯದಲ್ಲಿ ಅತಿಥೇಯರು ಪ್ರವಾಸಿ ತಂಡದ ವಿರುದ್ಧ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದ್ದು, ಆರ್. ಅಶ್ವಿನ್​ ಮಾಡಿದ ಎಡವಟ್ಟಿನಿಂದ ಟೀಂ ಇಂಡಿಯಾಗೆ ಪೆನಾಲ್ಟಿ ವಿಧಿಸಲಾಗಿದ್ದು, ಇಂಗ್ಲೆಂಡ್​ಗೆ ಇದರ ಲಾಭವೆತ್ತಿದೆ.

    ಟೀಂ ಇಂಡಿಯಾದ ಇನ್ನಿಂಗ್ಸ್​ನ 102ನೇ ಓವರ್​ನಲ್ಲಿ ಬ್ಯಾಟಿಂಗ್​ ಮಾಡುವ ವೇಳೆ ಆರ್​. ಅಶ್ವಿನ್​ ಈ ಎಡವಟ್ಟು ಮಾಡಿದ್ದು, ರೆಹಾನ್​ ಅಹ್ಮದ್​ ಎಸೆದ ಈ ಓವರ್​ನಲ್ಲಿ ಅಶ್ವಿನ್ ಒಂದು ರನ್ ಗಳಿಸಿದರು. ಈ ಸಂದರ್ಭ ಅಶ್ವಿನ್ ಪಿಚ್‌ನ ಮಧ್ಯದಲ್ಲಿ ಓಡಿರುವುದು ಕಂಡು ಬಂದಿದ್ದು, ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್​ಗೆ 5 ರನ್‌ಗಳನ್ನು ಬಿಟ್ಟುಕೊಡಬೇಕಾಯಿತು.

    ನಿಯಮಗಳ ಪ್ರಕಾರ, ಪಿಚ್‌ನ ಮಧ್ಯದಲ್ಲಿ ಓಡುವಂತಿಲ್ಲ. ಇದರಿಂದಾಗಿ ಪಿಚ್ ಹಾಳಾಗುತ್ತದೆ. ಮೊದಲ ದಿನ ರವೀಂದ್ರ ಜಡೇಜಾ ಕೂಡ ಇದೇ ರೀತಿಯ ತಪ್ಪು ಮಾಡಿದ್ದರು. ಆಗ ಅಂಪೈರ್ ಜಡೇಜಾಗೆ ಎಚ್ಚರಿಕೆ ನೀಡಿದ್ದರು. ಆ ಬಳಿಕ ಅಶ್ವಿನ್ ಮಾಡಿದ ಅದೇ ತಪ್ಪಿನಿಂದಾಗಿ ಅಂಪೈರ್ 5 ರನ್​​ಗಳ ದಂಡ ವಿಧಿಸಿದ್ದಾರೆ.

    ಇದನ್ನೂ ಓದಿ: ಪೇಂಟ್​ ಕಾರ್ಖಾನೆಯಲ್ಲಿ ಅಗ್ನಿ ಅವಘಡ; 11 ಮಂದಿ ಸಜೀವ ದಹನ, ಹಲವರು ನಾಪತ್ತೆ

    ಮೇರಿಲ್ಬೋನ್ ಕ್ರಿಕೆಟ್ ಕ್ಲಬ್‌ನ ಕಾನೂನು 41 ರ ಅಡಿಯಲ್ಲಿ 2017 ರಿಂದ ಆಟಗಾರರ ನಡವಳಿಕೆಗಾಗಿ ಕಾನೂನು 42 ರ ಪ್ರಕಾರ ದಂಡವನ್ನು ನೀಡಲಾಗುತ್ತದೆ. ಬ್ಯಾಟಿಂಗ್ ತಂಡವು ಈರೀತಿಯ ತಪ್ಪು ಮಾಡಿ ಎಚ್ಚರಿಕೆ ನೀಡಿದ ನಂತರವೂ ಮುಂದುವರೆಸಿದರೆ ಫೀಲ್ಡಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್​ಗಳನ್ನು ನೀಡಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಅಥವಾ ಪಿಚ್‌ಗೆ ಹಾನಿ ಮಾಡುವ ಮಾರ್ಗವೆಂದು ಇದನ್ನು ಪರಿಗಣಿಸಲಾಗುತ್ತದೆ. ಪಿಚ್‌ನಲ್ಲಿ ಓಡುವುದನ್ನು ಲೆವೆಲ್ 1 ಅಪರಾಧ ಎಂದು ಪರಿಗಣಿಸಲಾಗಿದೆ.

    ಇತ್ತ ಅಂಪೈರ್​ ಟೀಂ ಇಂಡಿಯಾಗೆ ಐದು ರನ್​ಗಳ ಪೆನಾಲ್ಟಿ ವಿಧಿಸುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಆರ್​. ಅಶ್ವಿನ್​ ಅಂಪೈರ್​ ಜೊತೆ ವಾಗ್ವಾದ ನಡೆಸಿದ್ದಾರೆ. ಅಶ್ವಿನ್​ ಮಾಡಿದ ಎಡವಟ್ಟಿನಿಂದಾಗಿ ರೋಹಿತ್​ ಶರ್ಮಾ ಒಂದು ಕ್ಷಣ ತಾಳ್ಮೆ ಕಳೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts