ನವದೆಹಲಿ: ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಮನೆಯಲ್ಲಿ ಭಾರೀ ಅವಘಡವೊಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ಸಿಂಗ್ ವಾಸಿಸುವ ಮನೆಯಲ್ಲಿ ಕಳ್ಳತನವಾಗಿದ್ದು, ಅಪಾರ ಪ್ರಮಾಣದ ನಗ ಹಾಗೂ ಚಿನ್ನಾಭರಣವನ್ನು ದೋಚಲಾಗಿದೆ ಎಂದು ವರದಿಯಾಗಿದೆ.
ಹರಿಯಾಣದ ಪಂಚಕುಲದಲ್ಲಿರುವ ನಿವಾಸದಲ್ಲಿ ಆರು ತಿಂಗಳ ಹಿಂದೆ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಂಡಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಜೀನ್ಸ್ ಖರೀದಿಸಿದ ಕೆಲವೇ ದಿನಗಳಲ್ಲಿ ಮಾಸಿದ ಬಣ್ಣ; ಕಂಪನಿಗೆ ಬಿತ್ತು ಭಾರೀ ಮೊತ್ತದ ದಂಡ!
ತಿಳಿದು ಬಂದಿರುವ ಮಾಹಿತಿ ಪ್ರಕಾರ ಯುವರಾಜ್ ಸಿಂಗ್ ಅವರ ತಾಯಿ ಶಬ್ನಮ್ ವಾಸಿಸುವ ಮನೆ ನೋಡಿಕೊಳ್ಳಲು ಇಬ್ಬರು ಸೇವಕರನ್ನು ನೇಮಿಸಲಾಗಿದ್ದು, ಇವರೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಲಲಿತಾ ದೇವಿ ಮತ್ತು ಶೈಲೇಂದ್ರ ದಾಸ್ ಎಂಬ ಹೆಸರಿನ ಈ ಇಬ್ಬರು ವ್ಯಕ್ತಿಗಳ ವಿರುದ್ಧ FIR ದಾಖಲಿಸಿರುವ ಪೊಲೀಸರು ಇವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಶಬ್ನಮ್ ಸಿಂಗ್ ಗುರ್ಗಾಂವ್ಗೆ ತೆರಳಿದಾಗ ಘಟನೆ ನಡೆದಿದ್ದು, ಮೆನಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಇವರಿಬ್ಬರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಗುರ್ಗಾಂವ್ನಿಂದ ಶಬ್ನಮ್ ವಾಪಸ್ಸಾದ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಗಳಿಬ್ಬರು ದೀಪಾವಳಿ ಹಬ್ಬಕ್ಕೆಂದು ಊರಿಗೆ ತೆರಳಿದವರು ಈವರೆಗೆ ವಾಪಸ್ ಆಗಿಲ್ಲ.ಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.