ಮುಂಬೈ: ಏಷ್ಯಾದ ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಒಡೆತನದ ಆಂಟಿಲಿಯಾ ವಿಶ್ವದ ಅತಿ ದುಬಾರಿ ಮನೆಗಳಲ್ಲಿ ಒಂದು ಹೇಳಲಾಗಿದೆ. ಈ ಮನೆಯನ್ನು ಸುಮಾರು 15 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಭಾರತದಲ್ಲೇ ಅತಿ ದುಬಾರಿ ನಿವಾಸಗಳಲ್ಲೊಂದು ಎಂದು ತಿಳಿದು ಬಂದಿದೆ.
ಆರ್ಕಿಟೆಕ್ಚರಲ್ ಸಂಸ್ಥೆ ಪರ್ಕಿನ್ಸ್ & ವಿಲ್ ವಿನ್ಯಾಸಗೊಳಿಸಿದ ಮತ್ತು ಆಸ್ಟ್ರೇಲಿಯಾದ ಲೈಟನ್ ಏಷ್ಯಾದಿಂದ ನಿರ್ಮಿಸಲ್ಪಟ್ಟಿರುವ ಆಂಟಿಲಿಯಾ ಮುಂಬೈ ನಗರದ ಹೃದಯಭಾಗದ ಅಲ್ಟಾಮೌಂಟ್ ರಸ್ತೆಯಲ್ಲಿದ್ದು, 27 ಅಂತಸ್ತನ್ನು ಹೊಂದಿದೆ. ಸುಮಾರು 4,00,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆಯನ್ನು ಕಟ್ಟಲಾಗಿದ್ದು, ಥಿಯೇಟರ್, ಸ್ಪಾ, ಈಜುಕೊಳ, ಆರೋಗ್ಯ ಕೇಂದ್ರ, ಹೈಸ್ಪೀಡ್ ಲಿಫ್ಟ್, ಸ್ನೋ ರೂಮ್, 160ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್, ಮೂರು ಹೆಲಿಪ್ಯಾಡ್ಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಒಟ್ಟು ಸಮಯ ಎಷ್ಟು ಗೊತ್ತಾ?
ಈ ಭವ್ಯ ಅರಮನೆಯ ಸಂಪೂರ್ಣ ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ವಿನ್ಯಾಸಗಾರ್ತಿ ಬಾಲಿವುಡ್ನ ಸ್ಟಾರ್ ನಟನ ಪತ್ನಿ ಎಂಬುದು ರಿವೀಲ್ ಆಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅಂಬಾನಿಯ ಬಹುಕೋಟಿ ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ. ಗೌರಿ ಖಾನ್ ನಿರ್ಮಾಪಕರಾಗಿ ಮಾತ್ರವಲ್ಲದೇ ಇಂಟೀರಿಯರ್ ಡಿಸೈನರ್ ಆಗಿ ಕೂಡ ಖ್ಯಾತಿ ಗಳಿಸಿದ್ದಾರೆ. ಗೌರಿ ಖಾನ್ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರೆಡ್ ಚಿಲ್ಲೀಸ್ ಇಂಟಿರಿಯರ್ ಡಿಸೈನ್ನ ಸಹ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಗೌರಿ ಖಾನ್ ಡಿಸೈನ್ಸ್‌ನ ಸಂಸ್ಥಾಪಕರಾಗಿ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ನ ಸಹ-ಸಂಸ್ಥಾಪಕರಾಗಿ, ಗೌರಿ ಖಾನ್ ಅವರ ಸೃಜನಶೀಲ ಸಾಮರ್ಥ್ಯವು ಒಳಾಂಗಣ ವಿನ್ಯಾಸವನ್ನು ಮೀರಿ ವಿಸ್ತರಿಸಿದೆ. ರಣಬೀರ್ ಕಪೂರ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಅವರಂತಹ ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳನ್ನು ಗೌರಿ ಖಾನ್ ವಿನ್ಯಾಸಗೊಳಿಸಿದ್ದಾರೆ. ಗೌರಿ ಖಾನ್ ಅವರ ಒಟ್ಟು ಆಸ್ತಿ ಮೌಲ್ಯ 1,600 ಕೋಟಿ ರೂ. ಎಂದು ತಿಳಿದು ಬಂದಿದ್ದು, ಇಂಟೀರಿಯರ್ ಆರ್ಕಿಟೆಕ್ಚರ್ ಜಗತ್ತಿನಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ.