More

    ಬಜೆಟ್​ ಮಂಡನೆಗೆ ಸಿಎಂ ಸಿದ್ದರಾಮಯ್ಯ ತೆಗೆದುಕೊಂಡ ಒಟ್ಟು ಸಮಯ ಎಷ್ಟು ಗೊತ್ತಾ?

    ಬೆಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 16ರಂದು 2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್​ ಮಂಡಿಸಿದ್ದು, ತಮ್ಮ ಬಜೆಟ್​ ಭಾಷಣದ ವೇಳೆ ಹಲವು ಸಾಲುಗಳನ್ನು ಉಲ್ಲೇಖಿಸಿರುವುದು ಎಲ್ಲರ ಗಮನ ಸೆಳೆದಿದೆ. ಆದರೆ, ಈ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್​ ಮಂಡನೆ ಮಾಡಲು ತೆಗೆದುಕೊಂಡ ಸಮಯ ಎಷ್ಟು ಹಾಗೂ ಗಾತ್ರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

    ಸಿಎಂ ಸಿದ್ದರಾಮಮಯ್ಯ ಈ ಬಾರಿ 3,71,383 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದು, ಇದು ಕಳೆದ ಬಾರಿಗಿಂತ 44 ಸಾವಿರ ಕೋಟಿ ರೂ. ಅಧಿಕ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಜುಲೈ 07ರಂದು 3.27 ಲಕ್ಷ ಕೋಟಿ ರೂ. ಬಜೆಟ್​ ಅನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದರು.

    ಒಟ್ಟು 3 ಘಂಟೆ 14 ನಿಮಿಷಗಳ ಬಜೆಟ್​ ಭಾಷಣ ಮಾಡಿದ ಸಿಎಂ ಮಂಡನೆ ನಂತರ ತಮ್ಮ ಸ್ಥಾನದಲ್ಲಿ ಕುಳಿತುಕೊಂಡು ನೀರು ಕುಡಿಯುತ್ತಾ ವಿಶ್ರಾಂತಿ ಪಡೆಯುತ್ತಿದ್ದ ಸಿದ್ದರಾಮಯ್ಯ ಅವರ ಬಳಿ ಸಚಿವರು, ಕಾಂಗ್ರೆಸ್​ ಶಾಸಕರು, ಕೆಆರ್​ಪಿಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಆಗಮಿಸಿ ಅಭಿನಂದಿಸಿದ್ದಾರೆ.

    State Budget

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts