More

    ಜೀನ್ಸ್​ ಖರೀದಿಸಿದ ಕೆಲವೇ ದಿನಗಳಲ್ಲಿ ಮಾಸಿದ ಬಣ್ಣ; ಕಂಪನಿಗೆ ಬಿತ್ತು ಭಾರೀ ಮೊತ್ತದ ದಂಡ!

    ಬೆಂಗಳೂರು:  ಜೀನ್ಸ್ ಪ್ಯಾಂಟ್ ಖರೀದಿಸಿದ 3 ತಿಂಗಳಲ್ಲಿ 5 ಬಾರಿ ವಾಷಿಂಗ್ ಬಳಿಕ ತನ್ನ ನಿಜವಾದ ಬಣ್ಣವನ್ನು ಕಳೆದುಕೊಂಡಿದೆ ಎಂದು ಗ್ರಾಹಕರೊಬ್ಬರು ಕೋರ್ಟ್ ಮೊರೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹರಿಹರನ್ ಬಾಬು ಎಂಬುವವರು ಕೋರ್ಟ್​ ಮೆಟ್ಟಿಲೇರಿದ್ದು, ಅದರಲ್ಲಿ ಜಯ ಕಂಡಿದ್ದಾರೆ.

    ಪ್ರಕರಣದ ಹಿನ್ನಲೆ

    ಬೆಂಗಳೂರಿನಲ್ಲಿ ನೆಲೆಸಿರುವ ಹರಿಹರನ್ ಬಾಬು ಎಕೆ ಎಂಬವರು ಏಪ್ರಿಲ್ 16, 2023 ರಂದು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ (ABFRL) ನಿಂದ 4,499 ರೂ.ಗಳನ್ನು ಕೊಟ್ಟು ಜೀನ್ಸ್​ ಪ್ಯಾಂಟ್​ ಒಂದನ್ನು ಖರೀದಿಸಿದ್ದರು. ಪ್ಯಾಂಟ್ ಖರೀದಿಸಿದ 3 ತಿಂಗಳಲ್ಲಿ 5 ಬಾರಿ ವಾಷಿಂಗ್ ಬಳಿಕ ತನ್ನ ನಿಜವಾದ ಬಣ್ಣವನ್ನು ಕಳೆದುಕೊಂಡಿದೆ.

    ಇದನ್ನು ಗಮನಿಸಿದ ಹರಿಹರನ್​ ಶೋರೂಮ್​ಗೆ ತೆರಳಿ ನಡೆದ ಬಗ್ಗೆ ವಿವರಿಸಿ ಮೊತ್ತವನ್ನು ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕುಪಿತಗೊಂಡ ಹರಿಹರನ್​ ಗ್ರಾಹಕರ ನ್ಯಾಯಾಲಯದಲ್ಲಿ ಆದಿತ್ಯ ಬಿರ್ಲಾ ಫ್ಯಾಷನ್ ಕಂಪನಿ ವಿರುದ್ಧ ಕೇಸ್ ದಾಖಲಿಸಿ ಹಣವನ್ನು ಮರುಪಾವತಿ ಮಾಡಬೇಕೆಂದು ಪ್ರಕರಣ ದಾಖಲಿಸಿದ್ದರು.

    ಇದನ್ನೂ ಓದಿ: ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ: ಬಸವರಾಜ ಬೊಮ್ಮಾಯಿ‌

    ಕಳೆದ ವರ್ಷ(2023) ಅಕ್ಟೋಬರ್‌ನಲ್ಲಿ ಆರಂಭವಾದ ಈ ಕಾನೂನು ಪ್ರಕ್ರಿಯೆಗಳು ಈ ವರ್ಷದ(2024) ಫೆಬ್ರವರಿಯಲ್ಲಿ ಮುಕ್ತಾಯಗೊಂಡಿದೆ. ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ ಗ್ರಾಹಕರಿಗೆ ತೊಳೆಯುವ ಸೂಚನೆಗಳನ್ನು ನಮೂದಿಸಿರಲ್ಲಿಲ್ಲ ಎಂದು ಗ್ರಾಹಕರ ವೇದಿಕೆ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.

    ಇದಲ್ಲದೆ ನೋಟಿಸ್ ಕಳುಹಿಸಿದ್ದರೂ ಕಂಪನಿಯ ಪ್ರತಿನಿಧಿಗಳು ಹಾಜರಾಗಲು ವಿಫಲರಾಗಿರುವುದನ್ನು ಗಮನಿಸಿದ ಕೋರ್ಟ್, ಗ್ರಾಹಕರಿಗೆ ಸರಿಯಾದ ದರಪಟ್ಟಿಯನ್ನೂ ನೀಡಿಲ್ಲ ಎಂದು ಹೇಳಿದೆ. ಅದರಂತೆ ದೂರುದಾರರಿಗೆ ಜೀನ್ಸ್ ಮೊತ್ತ 4,499ರೂ. ಮತ್ತು ಹೆಚ್ಚುವರಿ 1,000 ರೂ.ಗಳ ಮರುಪಾವತಿಸಲು ಆದೇಶಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts