More

    ಬೇರೆಯವರಿಗೆ ಹಣ ಕೊಡಿ, ಆದರೆ ನಮ್ಮನ್ನು ಉಪವಾಸ ಇರಿಸಬೇಡಿ: ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಆಯವ್ಯಯವನ್ನು ಮಂಡಿಸಿದದ್ದು, 15ನೇ ಬಾರಿಗೆ ಬಜೆಟ್​ ಮಂಡಿಸಿದ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನು ಬಜೆಟ್​ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ  ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿರುವ ಕಾರಣದಿಂದಲೇ ಕನ್ನಡಿಗರಿಗೆ ದ್ರೋಹವಾಗಿದೆ ಎಂಧು ಆರೋಪಿಸಿದ್ದಾರೆ.

    ವಿಧಾನಸೌಧದಲ್ಲಿ ಬಜೆಟ್​ ಮಂಡನೆ ಬಳಿಕ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದೆ ಸಿಎಂ ಕಳೆದ ಬಜೆಟ್​​ಗಿಂತ 46,630 ಕೋಟಿ ರೂ. ಬಜೆಟ್​ ಗಾತ್ರ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.

    ಗ್ಯಾರಂಟಿಗಳಿಂದ ಸರ್ಕಾರ ಆರ್ಥಿವಾಗಿಕ ದಿವಾಳಿಯಾಗಿದೆ ಎಂದು ಹೇಳುತ್ತಿದ್ದಾರೆ. ಬಿಟ್ಟಿ ಗ್ಯಾರಂಟಿ ಕೊಟ್ಟಿದ್ದರಿಂದ ಆರ್ಥಿಕ ದಿವಾಳಿ ಅಂತಿದ್ದಾರೆ. ಅಭಿವೃದ್ಧಿ ಕೆಲಸಗಳಿಗೂ ನಾವು ಅನುದಾವನ್ನು ಕೊಟ್ಟಿದ್ದೇವೆ. ಬರ ಹಿನ್ನೆಲೆ ಕೇಂದ್ರದ ಬಳಿ 18,171 ಕೋಟಿ ರೂ. ಕೇಳಿದ್ದೇವೆ. ಇದುವರೆಗೂ ಕೇಂದ್ರದಿಂದ ಒಂದು ರೂಪಾಯಿ ಸಹ ಬಂದಿಲ್ಲ. ಇದುವರೆಗೂ ಒಂದು ಮೀಟಿಂಗ್​ ಕೂಡ ಮಾಡಿಲ್ಲ, ರಾಜ್ಯದಲ್ಲಿ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ಧಾರೆ.

    Siddaramaiah

    ಇದನ್ನೂ ಓದಿ: ನಮ್ಮ ಸರ್ಕಾರ ರೈತರ ಏಳಿಗೆಗಾಗಿ ಯೋಜನೆಗಳನ್ನು ರೂಪಿಸುತ್ತಿದೆ: ಪ್ರಧಾನಿ ನರೇಂದ್ರ ಮೋದಿ

    ಕೇಂದ್ರ ಸರ್ಕಾರದಿಂದ ಇಲ್ಲಿವರೆಗೆ 1 ರೂಪಾಯಿ ಕೊಟ್ಟಿಲ್ಲ. ನಾವು ಸುಳ್ಳು ಹೇಳಿದ್ರೆ ರಾಜ್ಯಪಾಲರು ಓದುತ್ತಿದ್ದರಾ ಬಜೆಟ್​ ಕೇಳುವುದಕ್ಕೆ ಆಗದೇ ವಿಲವಿಲ ಒದ್ದಾಡಿ ಎದ್ದೋದ್ರು. ಕೋಲೆ ಬಸವನ ತರ ಅಲ್ಲಾಡಿಸುತ್ತಾರೆ. ಆದ್ರೆ, ಅಲ್ಲಿ ಕೇಳಲ್ಲ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರಕ್ಕೆ ಕೇಳಲ್ಲ. ಪಾರ್ಲಿಮೆಂಟ್​ನಲ್ಲಿ ಬಿಜೆಪಿ ಸಂಸದರು ಯಾವತ್ತಾದರೂ ಮಾತನಾಡಿದ್ದಾರಾ ಇವರು ಎಂಪಿಗಳಾವುದಕ್ಕೇ ನಾಲಾಯಕ್ ಎಂದು ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿರುವ ಕಾರಣದಿಂದಲೇ ಕನ್ನಡಿಗರಿಗೆ ದ್ರೋಹವಾಗಿದೆ. ಕೇಂದ್ರದ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿದದರೆ  ಇವರಿಗೆ ಊರಿ ಹೊತ್ತಿಕೊಳ್ಳುತ್ತದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಬಾರದು ಎನ್ನುವುದಷ್ಟೇ ನನ್ನ ಉದ್ದೇಶ ಎಂದರು. ಕಳೆದ 6 ವರ್ಷಗಳಲ್ಲಿ 62 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರದಿಂದ ಎಲ್ಲಾ ಹಣ ಬಂದಿದ್ದರೆ, ಇಂದು ಯುರೋಪ್‌ ರೀತಿ ಇರುತ್ತಿತ್ತು. ನಾವು ದಿವಾಳಿಯಾಗಿಲ್ಲ. ಆರ್ಥಿಕ ದಿವಾಳಿಯೂ ಆಗಿಲ್ಲ. ಗ್ಯಾರಂಟಿ ಯೋಜನೆಯಿಂದ 4-5 ಸಾವಿರ ಹಣ ತಿಂಗಳಿಗೆ ಸಿಗುತ್ತಿದೆ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಇನ್ನೂ ಹೆಚ್ಚು ಬಿಡುಗಡೆ ಮಾಡುತ್ತೇವೆ.

    ಈ ಬಜೆಟ್ ನಲ್ಲಿ ರಾಜ್ಯದ ಬಡ ಜನರು ಮಹಿಳೆಯರು ರೈತರು ಯುವಕರು ಪರಿಶಿಷ್ಟ ಪರಿಶಿಷ್ಟ ಪಂಗಡದ ವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಕೊಂಡು ಕೊಳ್ಳುವ ಶಕ್ತಿ ಕೊಟ್ಟಿದ್ದೇನೆ ಎಂದು ಸಿಎಂ ಹೇಳಿದರು. ಸರ್ವಾಂಗಣ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಬಡವರ ಏಳಿಗೆಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ. ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗಿಲ್ಲ. ಆದರೆ ನಾವು ವಾಗ್ದಾನ ಕೊಟ್ಟ ಎಲ್ಲಾ ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡಿದ್ದೇವೆ‌. ಕೃಷಿ ಬರ  ನೀರಾವರಿ ಸಮರ್ಥವಾಗಿ ನಿಭಾಯಿಸಿದ್ದೇವೆ‌.

    ಬೇರೆಯವರಿಗೆ ಹಣ ಕೊಡಿ, ಆದರೆ ನಮ್ಮನ್ನು ಉಪವಾಸ ಇರಿಸಬೇಡಿ: ಕೇಂದ್ರದ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

    ಇದನ್ನೂ ಓದಿ: ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಿದ್ದರಾಮಯ್ಯ ಸುಳ್ಳಿನ ಕಂತೆಯ ರಾಜಕೀಯ ಬಜೆಟ್ ಮಂಡಿಸಿದ್ದಾರೆ: ಬಸವರಾಜ ಬೊಮ್ಮಾಯಿ‌

    ಈ ಬಾರಿ 3,71,383 ಕೋಟಿ ರೂಪಾಯಿ  ಗಾತ್ರದ ಬಜೆಟ್ ಮಂಡಿಸಿದ್ದೇನೆ. ಜುಲೈ ನಲ್ಲಿ ನಾನು ಮಂಡಿಸಿದ್ದ ಬಜೆಟ್‌ ಗಾತ್ರ 3,27,747 ಕೋಟಿ. ಕಳೆದ ಬಜೆಟ್‌ಗಿಂತ 46,636 ಹೆಚ್ಚಳವಾಗಿದೆ. ಕಳೆದ ಬಜೆಟ್ ಗಿಂತ 13% ಬೆಳವಣಿಗೆ ಆಗಿದೆ. ಆರ್ಥಿಕವಾಗಿ ದಿವಾಳಿಯಾಗಿದೆ ಗ್ಯಾರಂಟಿ ಆಗಿದೆ ಎಂದೆಲ್ಲ ವಿಪಕ್ಷಗಳು ಹೇಳುತ್ತಿದ್ದವು. ಬಿಟ್ಟಿ ಗ್ಯಾರಂಟಿ ಎಂದೆಲ್ಲ ಕರೆದರು. ಗ್ಯಾರಂಟಿ ಯೋಜನೆಗೆ ಹಣ ಮೀಸಲಿಟ್ಟರು ಅಭಿವೃದ್ಧಿಗೂ ಹಣ ಕೊಟ್ಟಿದ್ದೇವೆ. ಈ ವರ್ಷ ಬರಗಾಲ ಬೇರೆ ಇದೆ. 35 ಸಾವಿರ ಕೋಟಿ ನಷ್ಟವಾಗಿದೆ.

    ಬಡವರಿಗಾಗಿ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಾವು ಅಧಿಕಾರಕ್ಕೆ ಬಂದು ಇನ್ನೂ 9 ತಿಂಗಳು ಕೂಡ ಆಗಿಲ್ಲ. ನಾವು ಜನರಿಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ಕೃಷಿ, ಗ್ರಾಮೀಣಾಭಿವೃದ್ಧಿ, ಇಂಧನ ಕ್ಷೇತ್ರಕ್ಕೆ ಹಣ ಒದಗಿಸಿದ್ದೇವೆ. ಬಜೆಟ್​​ನಲ್ಲಿ ಎಲ್ಲಾ ಸಮುದಾಯಗಳಿಗೂ ಶಕ್ತಿ ತುಂಬಲಾಗಿದೆ .ಬಜೆಟ್​ನಲ್ಲಿ ಏನಿಲ್ಲ ಏನಿಲ್ಲ ಎಂದು ಬಿಜೆಪಿಗರು ಹೇಳುತ್ತಾರೆ. ಅವರ ತಲೆಯಲ್ಲಿ ಏನಿಲ್ಲ. ಅವರ ತಲೆಯಲ್ಲಿ ಮಂಜು ತುಂಬಿದೆ ಕಾಮಾಲೆ ರೋಗದವರಿಗೆ ಕಾಣುವುದೆಲ್ಲ ಹಳದಿ ಎಂಬಂತೆ. ರಾಜಕೀಯ ಮಾಡಲಿ ಬೇಡ ಅನ್ನಲ್ಲ. ಟೀಕೆ, ಆರೋಪಗಳು ಆರೋಗ್ಯಕರವಾಗಿರಬೇಕು. ಬಿಜೆಪಿ ನಾಯಕರು ಏನಿಲ್ಲ ಏನಿಲ್ಲ ಎಂದು ಶುರುಮಾಡಿದ್ರು. ಬಜೆಟ್​ ಕೇಳಬಾರದೆಂದು ಪ್ಲ್ಯಾನ್​ ಮಾಡಿಕೊಂಡು ಬಂದಿದ್ರು ಎಂದು ಆರೋಪಿಸಿದ್ದಾರೆ.

    ನಾವು ಬೇರೆಯವರಿಗೆ ಹಣ ಕೊಡಬೇಡಿ ಎಂದು ಹೇಳುವುದಿಲ್ಲ. ನಮ್ಮನ್ನು ಉಪವಾಸ ಇರಿಸಬೇಡಿ ಎಂದು ಕೇಂದ್ರಕ್ಕೆ ಕೇಳುತ್ತಿದ್ದೇವೆ. ಈ ಅನ್ಯಾಯವನ್ನು ಪ್ರಶ್ನಿಸಿದರೆ ಬಿಜೆಪಿಯವರು ವಿರೋಧಿಸುತ್ತಾರೆ. ಬಿಜೆಪಿ ನಾಯಕರು 1 ದಿನವಾದರೂ ರಾಜ್ಯದ ಪಾಲು ಕೇಳಿದ್ದಾರಾ ರಾಜ್ಯದ ಬಿಜೆಪಿ ಸಂಸದರು, ಶಾಸಕರು ಕೇಂದ್ರವನ್ನು ಕೇಳಿದ್ದಾರಾ?  ನಮ್ಮ ಗ್ಯಾರಂಟಿಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ರಿಂದ 55 ‌ಸಾವಿರ ರೂಪಾಯಿ ಸಿಗುತ್ತೆ. ಉಚಿತ ಬಸ್ ನಿಂದ 155 ಕೋಟಿ‌ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕೊಟ್ರೆ ಇದು ಬಿಟ್ಟಿ ಭಾಗ್ಯನಾ? 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಫ್ರೀ ಕೊಟ್ರೆ ಅದು ಬಿಟ್ಟಿನಾ? 1 ಕೋಟಿ 17 ಲಕ್ಷ ಯಜಮಾನಿಯರಿಗೆ ತಿಂಗಳಿಗೆ 2 ಸಾವಿರ ಕೊಟ್ರೆ ಅದು ಬಿಟ್ಟಿ ಭಾಗ್ಯನಾ ಬಡವರಿಗೆಲ್ಲ ಬಿಜೆಪಿ ಅವಮಾನ ಮಾಡುತ್ತಿದೆ. ಗ್ಯಾರಂಟಿ ಅನ್ನೋ ಪದವನ್ನೇ ಬಿಜೆಪಿ‌ ಕದ್ದಿದೆ. ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಅಂತಾರೆ. ನಮ್ಮನ್ನ ನಕಲು ಮಾಡಿದ್ದಾರೆ. ಈಗ ನಮ್ಮನ್ನೇ ಬಿಟ್ಟಿ ಗ್ಯಾರಂಟಿ ಅಂತ ಕರೆಯುತ್ತಿದ್ದಾರೆ. ಇವರ ಮೋದಿ‌ ಗ್ಯಾರೆಂಟಿಗೆ ಏನು ಹೇಳ್ಬೇಕು ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಕಿಡಿಕಾರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts