

ನವದೆಹಲಿ: ಮಾಸ್ಕ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಮ್ ಆದ್ಮಿ ಪಕ್ಷ (ಎಎಪಿ) ಟ್ರೋಲ್ ಮಾಡಿದೆ. ಸ್ವಯಂ ಸೇವಕರೊಬ್ಬರು ಮಾಸ್ಕ್ ನೀಡುವುದನ್ನು ಪ್ರಧಾನಿ ಮೋದಿ ನಿರಾಕರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದನ್ನೇ ಎಎಪಿ ಟ್ರೋಲ್ ದಾಳವಾಗಿ ಬಳಸಿಕೊಂಡಿದೆ.
ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಎಎಪಿ, ಮೋದಿಜೀ ರೀತಿ ಇರಬೇಡಿ, ಮಾಸ್ಕ್ ಧರಿಸಿ ಎಂದು ಹೇಳುವ ಮೂಲಕ ಪ್ರಧಾನಿಯ ಕಾಲೆಳೆದಿದೆ.
ವಿಡಿಯೋದಲ್ಲಿ ಏನಿದೆ?: ಕರಕುಶಲ ವಸ್ತುಗಳು ಮತ್ತು ಮಾಸ್ಕ್ಗಳನ್ನು ಮಾಡುವ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಸ್ವಯಂ ಸೇವಕರೊಬ್ಬರು ಮಾಸ್ಕ್ ಕೊಡುತ್ತಾರೆ. ಆದರೆ, ಪ್ರಧಾನಿ ತೆಗೆದುಕೊಳ್ಳಲು ನಿರಾಕರಿಸುತ್ತಾರೆ.
ಇದೇ ವಿಡಿಯೋವನ್ನು ಎಎಪಿ ಶೇರ್ ಮಾಡಿಕೊಂಡಿದೆ. ಪ್ರಧಾನಿ ಮೋದಿ ಭಾಷಣ ಮಾಡಿದಾಗಲೆಲ್ಲ ಮಾಸ್ಕ್ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಳ್ಳಿ ಎಂದು ಜನರಿಗೆ ಕಿವಿಮಾತು ಹೇಳುತ್ತಾರೆ. ಹೀಗಾಗಿ ಸಲಹೆ ನೀಡುವ ಪ್ರಧಾನಿಯವರೇ ಮಾಸ್ಕ್ ಧರಿಸಲು ನಿರಾಕರಿಸಿದ್ದಾರೆಂದು ಎಎಪಿ ಗೇಲಿ ಮಾಡಿದೆ. ಸದ್ಯ ವಿಡಿಯೋ ವೈರಲ್ ಆಗಿದೆ. (ಏಜೆನ್ಸೀಸ್)