More

    ಆ್ಯಪ್​ ಮೂಲಕ ಇನ್​ಸ್ಟಂಟ್ ಲೋನ್ ಪಡೆದ ಯುವಕರ ಮಾನ ಜಾಲತಾಣದಲ್ಲಿ ಹರಾಜು: ಆತ್ಮಹತ್ಯೆಗೂ ಯತ್ನ

    ಹೊಸಪೇಟೆ: ಮನಿ ಬಾಕ್ಸ್​ ಪರ್ಸನಲ್ ಲೋನ್ ಆ್ಯಪ್​ನಲ್ಲಿ ಇನ್​ಸ್ಟಂಟ್ ಲೋನ್ ಪಡೆದ ಯುವಕರು ಇದೀಗ ತಮ್ಮ ಮರ್ಯಾದೆ ಕಳೆದುಕೊಂಡು ಮುಖಭಂಗ ಅನುಭವಿಸುವಂತಾಗಿದೆ. ಅಲ್ಲದೆ, ಯುವಕನೊಬ್ಬ ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ನಡೆದಿದೆ.

    ಸಾಲ ಕಟ್ಟುವುದು ತಡವಾಗಿದ್ದಕ್ಕೆ ಫ್ರಾಡ್​ (ವಂಚಕ) ಎಂದು ಫೋಟೋ ಎಡಿಟ್ ಮಾಡಿ ಕಾಂಟೆಕ್ಟ್​ ಲೀಸ್ಟ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹರಿಬಿಟ್ಟಿದ್ದಾರೆ. ಇದರಿಂದ ಮರ್ಯಾದೆ ಹೋಯಿತೆಂದು ಗಣಿನಾಡಿನ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಇದನ್ನೂ ಓದಿ: VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

    ಲೋನ್​ ಪಡೆದು ಒಂದು ವೇಳೆ ಸರಿಯಾದ ಸಮಯಕ್ಕೆ ಸಾಲದ ಹಣ ಕಟ್ಟದಿದ್ದರೆ, ಸಾಲ ಪಡೆದವರ ಫೋಟೋವನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ, ಇವರು ವಂಚಕರು ನಮ್ಮಿಂದ ಸಾಲ ತೆಗೆದುಕೊಂಡಿದ್ದಾರೆ. ಹಣ ಕಟ್ಟಿಲ್ಲ. ಆದರೆ, ಸಾಲಕ್ಕೆ ಜಾಮೀನಾಗಿ ನಿಮ್ಮ ನಂಬರ್​ ಹಾಕಿದ್ದಾರೆ. ನೀವು ಇವರಿಂದ ಹಣ ಕಟ್ಡಿಸದಿದ್ದರೇ, ನಿಮ್ಮ ಮನೆಗೆ ಪೊಲೀಸರು ಬರ್ತಾರೆ ಅಂತ ಹೆದರಿಸುತ್ತಾರೆ.

    ಆ್ಯಪ್​ವೊಂದರಲ್ಲಿ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಯುವಕರು ಇನ್ ಸ್ಟಂಟ್ ಲೋನ್ ತಗೊಂಡಿದ್ದರು. ಹಣ ಪಾವತಿಗೆ ಕೊಟ್ಟಿದ್ದ ಒಂದು ವಾರದ ಕಾಲಾವಧಿಯಲ್ಲಿ ಹಣ ಪಾವತಿ ಮಾಡದ್ದಕ್ಕೆ 5 ಸಾವಿರಕ್ಕೆ 5 ಸಾವಿರ ಬಡ್ಡಿ ಹಾಕಿದ್ದಾರೆ. 7 ದಿನದಲ್ಲಿ ಸಾಲ ತೀರಿಸದಿದ್ದರೆ ಡಬಲ್ ಬಡ್ಡಿ ಹಾಕ್ತಾರೆ, ಅಲ್ಲದೆ ಬಾಯಿಗೆ ಬಂದಂತೆ ಬೈತಾರೆ. ಇದರಿಂದ ಹಗರಿಬೊಮ್ಮನಹಳ್ಳಿ ಪಟ್ಟಣದ ಇಬ್ಬರು ಯುವಕರ ಮರ್ಯಾದೆ ಮಣ್ಣು ಪಾಲಾಗಿದೆ.

    ಇದನ್ನೂ ಓದಿ: ಸಾಲ ತೀರಿಸಿದರೂ ತಗ್ಗಲಿಲ್ಲ ಹೊರೆ: ಸಾಫ್ಟ್​ವೇರ್ ತಂದ ಫಜೀತಿ, ಭೋಜಾ ತೆರವಿಗಾಗಿ ಪರದಾಟ

    ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಬಟ್ಟೆ ಅಂಗಡಿ ಇಟ್ಟಿರುವ ರಾಜಸ್ತಾನ ಮೂಲದ ಸಂಜು ಹಾಗೂ ಆಸೀಫ್ ಈಗ ತೊಂದರೆ ಎದುರಿಸುತ್ತಿದ್ದಾರೆ. ಮನನೊಂದು ಸಂಜು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಸ್ನೇಹಿತರು ಧೈರ್ಯ ತುಂಬಿ ಆತ್ಮಹತ್ಯೆಯಿಂದ ಪಾರು ಮಾಡಿದ್ದಾರೆ. ಸಾಲ ತುಂಬಲು ಹೋದ್ರು ಡಬಲ್ ಬಡ್ಡಿ ಹಾಕಿದ್ದಾರೆ. ಯುವಕರಿಗೆ ಅಸಲಿನೊಂದಿಗೆ ಬಡ್ಡಿ ಕಟ್ಟೋದೆ ಚಿಂತೆಯಾಗಿದೆ. ಅಲ್ಲದೆ ಈ ಯುವಕರ ಕುಟುಂಬಸ್ಥರ ಫೋಟೋಗಳ ಮೇಲೆ ಕೂಡ ಫ್ರಾಡ್ ಅಂತ ಬರೆದು ಅಪ್ ಲೋಡ್ ಮಾಡ್ತಿದ್ದಾರೆ.

    ಪ್ರೇಮ ವಿವಾಹ, ಒಳ್ಳೆಯ ಹುದ್ದೆಯಲ್ಲಿದ್ರೂ ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಶರಣಾಗಿದ್ದೇಕೆ: ಇಲ್ಲಿದೆ ಸ್ಫೋಟಕ ಮಾಹಿತಿ!

    ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು..!

    ಅಂಕಲ್​-ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಬಾಲಕಿ ಬಲಿಪಶುವಾದಳಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts