More

    ಡಬಲ್ ಬ್ಯಾರೆಲ್ ಬಂದುಕಿಗೆ ಯುವಕ ಬಲಿ

    ಚಿಕ್ಕಮಗಳೂರು: ಶಿಕಾರಿಗೆ ಹೋಗಿದ್ದ ಮೂವರು ಯುವಕರಲ್ಲಿ ಓರ್ವ ಯುವಕ ಗುಂಡೇಟಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕು ಮಲಂದೂರು ಸಮೀಪದ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ.

    ಕೆರೆಮಕ್ಕಿ ಗ್ರಾಮದ ಸಂಜಯ್ (35) ಗುಂಡೇಟಿಗೆ ಬಲಿಯಾದ ಯುವಕ. ಈತ ತನ್ನ ಸ್ನೇಹಿತರಾದ ಸುಮನ್ ಹಾಗೂ ನಿಸರ್ಗ ಎಂಬುವರೊಂದಿಗೆ ಗುರುವಾರ ರಾತ್ರಿ ಶಿಕಾರಿಗೆ ಎಂದು ಉಳುವಾಗಿಲು ಗ್ರಾಮಕ್ಕೆ ತೆರಳಿದ್ದ. ಆದರೆ ಉಳುವಾಗಿಲು ಗ್ರಾಮದ ರಸ್ತೆಯ ಮಧ್ಯೆ ಸಂಜಯ್ ಗುಂಡೇಟು ತಗುಲಿ ದಾರುಣವಾಗಿ ಮೃತಪಟ್ಟಿದ್ದಾನೆ.
    ಗುರುವಾರ ಶಿಕಾರಿಗೆ ಹೋಗುವುದಾಗಿ ಹೇಳಿ ರಮೇಶ್ ಎನ್ನುವರ ಡಬ್ಬಲ್ ಬ್ಯಾರೆಲ್ ಬಂದೂಕು ಪಡೆದ ಸಂಜಯ್, ನಿಸರ್ಗ ಹಾಗೂ ಸುಮನ್ ಶಿಕಾರಿಗೆ ಹೋಗಿದ್ದರು. ಈ ವೇಳೆ ಸಂಜಯ್ ಬಳಿ ಇದ್ದ ಬಂದೂಕಿನಿಂದ ಮಿಸ್ ಫೈರ್ ಆಗಿ ಗುಂಡು ಎದೆಯ ಕೆಳಭಾಗಕ್ಕೆ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ ಆದರೆ ಮೃತ ಸಂಜಯ್ ಜಯಮ್ಮ ಸಂಜಯ್ ಜೊತೆಗೆ ನಿಸರ್ಗ ಹಾಗೂ ಸುಮನ್ ತನ್ನ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಮಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
    ಸಂಜಯ್ ಗುಂಡು ತಗುಲಿ ಸಾವನ್ನಪ್ಪುತ್ತಿದ್ದಂತೆ ನಿಸರ್ಗ ಹಾಗೂ ಸುಮನ್ ಬೈಕಿನಲ್ಲಿ ಎಸ್ಕೇಪ್ ಆಗಲು ಮುಂದಾಗಿದ್ದಾರೆ. ಈ ವೇಳೆ ಬೈಕ್ ನಿಂದ ಬಿದ್ದ ಸುಮನ್ ಬೈಕಿನಿಂದ ಕೆಳಗೆ ಬಿದ್ದ ಪರಿಣಾಮ ಕೈ ಮೂಳೆ ಮುರಿದುಹೋಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ ನಿಸರ್ಗ ನಾಪತ್ತೆಯಾಗಿದ್ದಾನೆ.
    ಸ್ನೇಹಿತನಿಗೆ ಗುಂಡೇಟು ತಗುಲಿದಾಗ ಆತನನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡದೆ ಇಬ್ಬರು ಎಸ್ಕೇಪ್ ಆಗಲು ಎತ್ತಿಸಿದ್ದು ಏಕೆ ಎಂಬ ಅನುಮಾನ ಇದೀಗ ಮೂಡಿದೆ. ಈ ಸಂಬಂಧ ನಿಸರ್ಗ, ಸುಮನ್ ಹಾಗೂ ಒಂದೂಕಿನ ಮಾಲೀಕ ರಮೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮಲಂದೂರು ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts