ಊಟಕ್ಕೆಂದು ಪರಿಚಯಸ್ಥರ ಮನೆಗೆ ಹೋದ ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಶರಣು..!

CID DYSP
Published on

ಬೆಂಗಳೂರು: ಸಿಐಡಿ ಮಹಿಳಾ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ.

ಲಕ್ಷ್ಮೀ ವಿ.(33) ನೇಣಿಗೆ ಶರಣಾದ 2014ರ ಬ್ಯಾಚ್​ನ ಕೆಪಿಎಸ್​ಸಿ ಅಧಿಕಾರಿ. 2017ರಲ್ಲಿ ನೇಮಕವಾಗಿದ್ದ ಲಕ್ಷ್ಮೀ ಅವರು ಸದ್ಯ ಸಿಐಡಿ ಡಿಎಸ್​ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ನಿನ್ನೆ ರಾತ್ರಿ ಪರಿಚಯಸ್ಥರ ಮನೆಗೆ ಊಟಕ್ಕೆಂದು ಹೋಗಿದ್ದರು. ಈ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಲಕ್ಷ್ಮೀ ಅವರ ಆತ್ಮಹತ್ಯೆ ಕುರಿತು ಇದೀಗ ಸಾಕಷ್ಟು ಅನುಮಾನ ಮೂಡಿದೆ.

ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net