More

    VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

    ನವದೆಹಲಿ: ಯಾವುದೇ ಜೀವಿಯ ದೇಹದಲ್ಲಿ ರುಂಡವೇ ಪ್ರಧಾನ ಅಂಶ. ತಲೆಯಿಲ್ಲದ ಜೀವಿ ಸತ್ತಂತೆಯೇ. ಹೀಗಿರುವಾಗ ತಲೆಯಿಲ್ಲದ ಹಾವು ದಾಳಿ ಮಾಡಲು ಯತ್ನಿಸುವುದೇ? ಈ ಪ್ರಶ್ನೆಗೆ ಉತ್ತರಿಸುವವರು ಸಾಧ್ಯವೇ ಇಲ್ಲ ಎನ್ನುವುದು ಗ್ಯಾರೆಂಟಿ. ಆದರೆ, ಇದೀಗ ವೈರಲ್​ ಆಗಿರುವ ವಿಡಿಯೋ ನೋಡಿದರೆ ಅಚ್ಚರಿಯಾಗದೇ ಇರದು.

    ಇದನ್ನೂ ಓದಿ: ವಿವಾಹಿತ ಪುತ್ರಿಗೂ ಅನುಕಂಪದ ನೌಕ್ರಿ; ಸರ್ಕಾರಿ ಉದ್ಯೋಗಕ್ಕೆ ಅರ್ಹ ಎಂದು ಹೈಕೋರ್ಟ್ ಮಹತ್ವದ ಆದೇಶ

    ಹೌದು, ದೇಹದಿಂದ ತಲೆ ಇಬ್ಭಾಗವಾದ ಹಾವೊಂದು ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಲು ಮುಂದಾದ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಆಸ್ಟ್ರೇಲಿಯಾದ ತೀರ ಪ್ರದೇಶವೊಂದರಲ್ಲಿ ಸೆರೆಹಿಡಿಯಲಾಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ವಿಡಿಯೋದಲ್ಲಿ ಏನಿದೆ?: ತಲೆಯಿಲದ್ದೇ ಕೇವಲ ಮುಂಡವಿರುವು ಹಾವೊಂದು ನೆಲದ ಮೇಲೆ ಬಿದ್ದಿದೆ. ಹಾವಿನ ತಲೆ ಕತ್ತರಿಸಿದವರು ಯಾರು? ಅಥವಾ ಹೇಗೆ ತಲೆ ತುಂಡಾಯಿತು ಎಂಬುದು ತಿಳಿದಿಲ್ಲ. ಆದರೆ, ವ್ಯಕ್ತಿಯೊಬ್ಬ ಟೆನ್ನಿಸ್​ ರಾಕೆಟ್​ನಿಂದ ಹಾವಿನ ಮುಂಡವನ್ನು ತಿವಿದಾಗ ರುಂಡವಿಲ್ಲದ ಹಾವು ದಾಳಿ ಮಾಡಲು ಯತ್ನಿಸಿ ನೆಲದ ಮೇಲೆ ತೆವಳಾಡುತ್ತದೆ.

    ಇದನ್ನೂ ಓದಿ: ಸುಪಾರಿ ಬದಲು ಅವರೇ ವಿಷ ಕೊಟ್ಟಿದ್ದರೆ ಕುಡಿಯುತ್ತಿದ್ದೆ ಎಂದ ಮುತ್ತಗಿ; ವಿನಯ ವಿರುದ್ಧ ಆಪ್ತನ ಆಕ್ರೋಶ

    ಇಡೀ ದೇಹದ ನಿಯಂತ್ರಣವೇ ತಲೆಯಲ್ಲಿರುತ್ತದೆ. ಹೀಗಿರುವಾಗ ರುಂಡವೇ ಇಲ್ಲದ ಹಾವು ಹೇಗೆ ದಾಳಿಗೆ ಯತ್ನಿಸಲು ಸಾಧ್ಯ? ಅಂದಹಾಗೆ ಹಾವಿನ ದೇಹದಲ್ಲಿನ ಅಯಾನುಗಳು ಮತ್ತು ವಿದ್ಯುತ್ ಕೋಶಗಳು ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಇದು ಹಾವಿನ ದೇಹದಲ್ಲಿನ ಸ್ನಾಯುಗಳನ್ನು ವಿಸ್ತರಿಸಲು ಕಾರಣವಾಗುತ್ತದೆ. ಹೀಗಾಗಿ ಹಾವುಗಳು ಸತ್ತಾಗಲು ಹಿಂದೆ-ಮುಂದೆ ಚಲಿಸಬಹುದು. ಹಾವು ತಲೆಯ ಭಾಗವನ್ನು ಕಳೆದುಕೊಂಡಿದ್ದರೂ ಸಾಮಾನ್ಯ ದೇಹದ ಮೇಲೆ ಸ್ವಲ್ಪಮಟ್ಟಿಗೆ ಪ್ರತಿಫಲಿತ ಕ್ರಿಯೆಯನ್ನು ಹೊಂದಿರುತ್ತದೆ ಎಂಬುದು ತಜ್ಞರ ಮಾತು. (ಏಜೆನ್ಸೀಸ್​)

    ಇದನ್ನೂ ಓದಿ: ಮಾರ್ಜಕಗಳ ಮಾಯಾಜಾಲದಲ್ಲಿ ಸಿಲುಕದಿರೋಣ; ತೇಜಸ್ವಿನಿ ಅನಂತಕುಮಾರ್ ಅವರ ಅಂಕಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts