ಬಿಆರ್​ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು

neelakuranji
Published on

ಚಾಮರಾಜನಗರ: ಇತ್ತೀಚಿಗೆ ಸುರಿದ ಸತತ ಮಳೆಯಿಂದಾಗಿ ಹಚ್ಚ ಹರಿಸಿನಿಂದ ಕಂಗೊಳಿಸುತ್ತಿರುವ ಬಿಆರ್​ಟಿ ಅರಣ್ಯ ಪ್ರದೇಶದ ಬೆಟ್ಟಗಳು ಈಗ ನೀಲಿಮಯವಾಗಿವೆ! ಬೆಟ್ಟ-ಗುಡ್ಡಗಳ ತುಂಬೆಲ್ಲಾ ನೀಲಕುರಂಜಿ ಹೂಗಳು ನಳನಳಿಸುತ್ತಿದ್ದು, ನೋಡುಗರ ಮನಸೆಳೆಯುತ್ತಿವೆ.

ಪುಣಜನೂರು, ಬೈಲೂರು ವಲಯದ ಗಿರಿಗಳಲ್ಲಿ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ನೀಲಕುರಂಜಿ ಸುಂದರ ಸೊಬಗನ್ನು ಸೃಷ್ಟಿಸಿದೆ.

ಈ ಬೆಟ್ಟಗಳು ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಪ್ರವಾಸಿಗರಿಗೆ ತೆರಳಲು ಅನುಮತಿ ಇಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ತೆಗೆದಿದ್ದಾರೆ. ಅರಣ್ಯದ ಸೊಬಗನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ ಎಂದು ಡಿಸಿಎಫ್​​ಒ ಸಂತೋಷ್​ಕುಮಾರ್​ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಮಂದಾಲಪಟ್ಟಿ ಮತ್ತು ಸೋಮವಾರಪೇಟೆ ತಾಲೂಕಿನ ಕೋಟೆ ಬೆಟ್ಟದಲ್ಲಿ ಕೆಲ ತಿಂಗಳ ಹಿಂದೆ ನೀಲಕುರಂಜಿ ಹೂ ಅರಳಿತ್ತು. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net