More

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ಬೆಂಗಳೂರು: ನೆರೆಮನೆಯವರ ಜತೆಗಿನ ಜಗಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ್ನು ಠಾಣೆಗೆ ಕರೆತಂದು ದೌರ್ಜನ್ಯವೆಸಗಿದ ಆರೋಪ ಹೊತ್ತ ಬ್ಯಾಟರಾಯನಪುರ ಠಾಣೆ ಸಬ್​ ಇನ್​ಸ್ಪೆಕ್ಟರ್​ ಹರೀಶ್​ ವಿರುದ್ಧ ಮತ್ತೊಂದು ಸ್ಫೋಟಕ ವಿಷಯ ವೈರಲ್​ ಆಗಿದೆ. ಮುಖ್ಯಪೇದೆಯೊಬ್ಬರ ಕೈಯಲ್ಲಿ ಎಸ್​ಐ ಹರೀಶ್​, ಪದೇಪದೆ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರಂತೆ!

    ಇತ್ತೀಚಿಗೆ ನೆರೆಮನೆಯವರ ಜತೆಗಿನ ಜಗಳ ಪ್ರಕರಣ ಸಂಬಂಧ ತೌಸೀಫ್​ ಪಾಷಾ ಎಂಬಾತನ್ನು ವಶಕ್ಕೆ ಪಡೆದಿದ್ದ ಎಸ್​ಐ ಹರೀಶ್​, ಠಾಣೆಗೆ ಕರೆತಂದು ಎಫ್​ಐಆರ್​ ದಾಖಲಿಸದೆ ಮನಸೋ ಇಚ್ಛೆ ಥಳಿಸಿದ್ದರು. ಕುಡಿಯಲು ನೀರು ಕೇಳಿದರೆ ಬಾಟಲ್​ಗೆ ಮೂತ್ರ ತುಂಬಿ ಕೊಟ್ಟಿದ್ದರು. ಆತನ ಗಡ್ಡ ಬೋಳಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಟ್ವಿಟರ್​ನಲ್ಲಿ ಪಶ್ಚಿಮ ವಿಭಾಗದ ಡಿಸಿಪಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಸಂಜೀವ ಪಾಟೀಲ್​, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಉಪ ವಿಭಾಗದ ಎಸಿಪಿ ಕೋದಂಡರಾಮಯ್ಯಗೆ ಸೂಚಿಸಿದ್ದರು. ತೌಸೀಫ್​ ಹಾಗೂ ಎಸ್​ಐ ಹರೀಶ್​ ಅವರನ್ನು ವಿಚಾರಣೆ ನಡೆಸಿರುವ ಎಸಿಪಿ, ತನಿಖೆ ಮುಕ್ತಾಯಗೊಳಿಸಿದ್ದು, ಇಂದು(ಸೋಮವಾರ) ಡಿಸಿಪಿಗೆ ವರದಿ ಸಲ್ಲಿಸುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಪಿಎಸೈ ಹರೀಶ್​, ಹೆಡ್​ಕಾನ್ಸ್ಟೇಬಲ್ ಬಳಿ ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದರು ಎಂಬ ಆಡಿಯೋ ವೈರಲ್​ ಆಗಿದೆ.

    ಬ್ಯಾಟರಾಯನಪುರ ಹೊಯ್ಸಳ ಬೀಟ್​ನಲ್ಲಿದ್ದ ಮುಖ್ಯಪೇದೆ ಮಂಜು ಕರ್ತವ್ಯದ ವೇಳೆ ಕುಡಿದಿದ್ದರು ಎಂಬ ಕಾರಣಕ್ಕೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಅವರನ್ನು ಎಸ್​ಐ ಹರೀಶ್ ಸಸ್ಪೆಂಡ್ ಮಾಡಿಸಿದ್ದರು. ಸಸ್ಪೆಂಡ್ ರಿವೋಕ್ ಆಗದೆ ನೊಂದಿರುವ ಮಂಜು, ಮತ್ತಷ್ಟು ಕುಡಿತ ಚಟ ಅಂಟಿಸಿಕೊಂಡಿದ್ದು, ಖಿನ್ನತೆಗೆ ಜಾರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎಸ್​ಐ ಹರೀಶ್​ ಕುರಿತು ಮಂಜು ಮಾತನಾಡಿರುವ ಆಡಿಯೋ ‘ದಿಗ್ವಿಜಯ ನ್ಯೂಸ್’ ಗೆ ಲಭ್ಯವಾಗಿದೆ. ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ಅನ್ನು ಹರೀಶ್​ ಪದೇಪದೆ ತರಿಸಿಕೊಳ್ಳುತ್ತಿದ್ದರು ಎಂದು ಆಡಿಯೋದಲ್ಲಿ ಇದೆ. (ದಿಗ್ವಿಜಯ ನ್ಯೂಸ್​)

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಪ್ರೇಯಸಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಪ್ರಿಯಕರ ಆತ್ಮಹತ್ಯೆ! ತಡರಾತ್ರಿ ರುದ್ರಭೂಮಿಯಲ್ಲಿ ನಡೀತು ಹೃದಯವಿದ್ರಾವಕ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts