More

    ಪ್ರಜ್ವಲ್ ರೇವಣ್ಣ ಮಾತ್ರವಲ್ಲ! ಈ ಹೆಸರಾಂತ ನಾಯಕರು ಕೂಡ ಹಿಂದೊಮ್ಮೆ ಇದೇ ಪ್ರಕರಣದಡಿ ಸಿಲುಕಿದ್ರು

    ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿರುವ ಹಾಸನದ ಹಾಲಿ ಸಂಸದ, ಪ್ರಜ್ವಲ್​ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ಪ್ರಕರಣ ಇದೀಗ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮೊನ್ನೆಯಷ್ಟೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಅಪಹರಿಸಿದ್ದ ಪ್ರಕರಣದಡಿ ಮಾಜಿ ಶಾಸಕ ಎಚ್​.ಡಿ. ರೇವಣ್ಣರನ್ನು ಬಂಧಿಸಿದ್ದ ಎಸ್​ಐಟಿ ಅಧಿಕಾರಿಗಳು, ಭಾನುವಾರ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸದ್ಯ ರೇವಣ್ಣರನ್ನು ನಾಲ್ಕು ದಿನಗಳ ಕಾಲ ಎಸ್​ಐಟಿ ವಶದಲ್ಲಿರುವಂತೆ ಆದೇಶಿಸಿದ್ದಾರೆ. ಇನ್ನೂ ಈ ಬೆನ್ನಲ್ಲೇ ಪ್ರಜ್ವಲ್ ಆಗಮನಕ್ಕಾಗಿ ಏರ್​​ಪೋರ್ಟ್​ಗಳಲ್ಲಿ ಠಿಕಾಣಿ ಹೂಡಿರುವ ಎಸ್​ಐಟಿ, ಅವರನ್ನು ಬಂಧಿಸಲು ತುದಿಗಾಲಿನಲ್ಲಿ ನಿಂತಿದೆ.

    ಇದನ್ನೂ ಓದಿ: ಆಸ್ಪತ್ರೆ ಬೆಡ್ ಮೇಲೆ ಸ್ಟಾರ್ ಹೀರೋಯಿನ್; ಚೇತರಿಸಿಕೊಳ್ಳೋದು ತುಂಬಾ ಕಷ್ಟವಾಗ್ತಿದೆ ಎಂದು ನಟಿ ಭಾವುಕ

    ಇನ್ನು ಇದಿಷ್ಟು ಸದ್ಯದ ವರದಿಯಾದರೆ, ದೇಶವ್ಯಾಪಿ ಈ ಪ್ರಕರಣಕ್ಕೆ ತೀವ್ರ ಟೀಕೆ, ಖಂಡನೆ ವ್ಯಕ್ತವಾಗುತ್ತಿದೆ. ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಜನಸಾಮಾನ್ಯರು ಪ್ರಜ್ವಲ್ ರೇವಣ್ಣ ವಿರುದ್ಧ ವ್ಯಾಪಕ ಕಿಡಿಕಾರಿದ್ದು, ಇಂಥವರನ್ನು ಬಂಧಿಸಿ, ಶಿಕ್ಷೆ ವಿಧಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ. ಇದೆಲ್ಲವೂ ಮಾಧ್ಯಮಗಳಲ್ಲಿ ಸಹ ಪ್ರಸಾರವಾಗುತ್ತಿದೆ. ಆದರೆ, ಪ್ರಜ್ವಲ್ ವಿರುದ್ಧ ಕೇಳಿಬಂದಿರುವ ಲೈಂಗಿಕ ಪ್ರಕರಣ ಇದೇ ಮೊದಲಲ್ಲ. ಇಂತಹ ಪ್ರಕರಣದಡಿ ಈ ಹಿಂದೆ ಹಲವು ರಾಜಕಾರಣಿಗಳು ಸಹ ದೇಶದ ಜನರ ಮುಂದೆ ಇದೇ ರೀತಿ ಬಟಾಬಯಲಾಗಿದ್ದರು.

    ಎನ್​ಡಿ ತಿವಾರಿ: 2009ರಲ್ಲಿ ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಎನ್​ಡಿ. ತಿವಾರಿ, ರಾಜಭವನದಲ್ಲಿ ಮಹಿಳೆಯರೊಂದಿಗೆ ರಾಜಿ ಮಾಡಿಕೊಳ್ಳುವ ಸಂದರ್ಭಗಳು ಬಹಿರಂಗವಾದ ಬೆನ್ನಲ್ಲೇ ವ್ಯಾಪಕ ಆಕ್ರೋಶಕ್ಕೆ ಗುರಿಯಾದರು. ಈ ವಿಷಯ ಹೊರಬರುತ್ತಿದ್ದಂತೆ ಆಂಧ್ರ ಪ್ರದೇಶದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ, ಆರೋಪಗಳಿಂದ ದೂರ ಉಳಿಯಲು ಪ್ರಯತ್ನಿಸಿದರು.

    ಇದನ್ನೂ ಓದಿ: Exclusive Face 2 Face With ರಾಜಗುರು ದ್ವಾರಕಾನಾಥ್​ ಗುರೂಜಿ! ಇಂದು ಸಂಜೆ 7.35 ಕ್ಕೆ. ವಿಜಯವಾಣಿ ಡಿಜಿಟಲ್​​ನಲ್ಲಿ ಮಾತ್ರ..,

    ರಮೇಶ್ ಜಾರಕಿಹೊಳಿ:
    2021ರಲ್ಲಿ, ಬಿಜೆಪಿ ಅಧಿಕಾರದ ಅವಧಿಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸಿಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿ, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿತ್ತು. ಯಾವುದೋ ಒಂದು ಪ್ರಾಜೆಕ್ಟ್ ವಿಚಾರವಾಗಿ ತಮ್ಮನ್ನು ಭೇಟಿ ಮಾಡಲು ಬಂದಿದ್ದ ಯುವತಿಯೊಡನೆ ಲೈಂಗಿಕ ಸಂಪರ್ಕ ಹೊಂದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ವಿಷಯ ಕೂಡ ಅಂದು ದೊಡ್ಡ ಮಟ್ಟದ ವಿರೋಧಕ್ಕೆ ಕಾರಣವಾಗಿತ್ತು.

    ರಾಘವ್​ಜಿ:
    2013ರಲ್ಲಿ ಮಧ್ಯಪ್ರದೇಶದ ಮಾಜಿ ಸಚಿವ ರಾಘವ್‌ಜಿ ಕೂಡ ಇದೇ ಪ್ರಕರಣದಡಿ ಸಿಲುಕಿ, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು. ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು.

    ಇದನ್ನೂ ಓದಿ: ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು ದೇವರಾಜೇಗೌಡ ಆರೋಪ; ಬೆದರಿಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದ ಡಿಕೆಶಿ

    ಎಚ್​.ವೈ. ಮೇಟಿ:

    ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಅಬಕಾರಿ ಸಚಿವರಾಗಿದ್ದ ಎಚ್‌.ವೈ. ಮೇಟಿ, ಉದ್ಯೋಗದ ಆಮಿಷ ಒಡ್ಡಿ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ವಿಡಿಯೋ ವೈರಲ್ ಆಗಿತ್ತು. ಈ ವಿಷಯ ಹೊರಬೀಳುತ್ತಿದ್ದಂತೆ ಅವರ ವಿರುದ್ಧ ಭಾರೀ ವಿರೋಧಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮೇಟಿಯನ್ನು ಅಬಕಾರಿ ಸಚಿವ ಸ್ಥಾನದಿಂದ ಕೆಳಗಿಳಿಸಲಾಯಿತು. ಈ ಪ್ರಕರಣದ ತನಿಖೆ ನಡೆಸಿದ್ದ CID ತಂಡ, ಸಂತ್ರಸ್ತೆ ಕೇಸ್ ವಾಪಸ್ ಪಡೆದ ಹಿನ್ನೆಲೆ ಎಚ್​.ವೈ. ಮೇಟಿ ಅವರನ್ನು ಪ್ರಕರಣದಿಂದ ಕೈಬಿಡುವಂತಾಯಿತು,(ಏಜೆನ್ಸೀಸ್).

    ಆತನಿಗೆ ಯಾವಾಗ, ಹೇಗೆ ಆಡಬೇಕು ಅನ್ನೋದೆ ಗೊತ್ತಿಲ್ಲ! ಸ್ಟಾರ್​ ಬ್ಯಾಟ್ಸ್​ಮನ್​ ವಿರುದ್ಧ ಬಜ್ಜಿ ಗರಂ

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts