More

    ನಿರಂತರ ಕಾನೂನು ಪುಸ್ತಕಗಳ ಅಧ್ಯಯನ ಮಾಡಿರಿ

    ಮಳವಳ್ಳಿ: ಯುವ ವಕೀಲರು ಸಮಯವನ್ನು ಬೇರೆಡೆ ವ್ಯರ್ಥ ಮಾಡದೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿಯಲ್ಲಿ ಕೌಶಲ್ಯತೆ ಹೊಂದಬೇಕು ಎಂದು ಪಟ್ಟಣದ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ ಹಿರಿಯ ಶ್ರೇಣಿ ನ್ಯಾಯಾಧೀಶ ವಿ.ಮಾದೇಶ ಕಿವಿ ಮಾತು ಹೇಳಿದರು.

    ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವೇಶ್ವರ ಹಾಗೂ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯ ನಿರ್ವಹಿಸುವ ಸಂದರ್ಭ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

    ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಮಂಜೂರಾತಿಯಾಗಿದ್ದು, ನಮ್ಮ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಳ್ಳುತ್ತದೆಂಬ ಎಂಬ ಭರವಸೆ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಸಂಬಂಧಪಟ್ಟವರು ತ್ವರಿತವಾಗಿ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸುವ ಮೂಲಕ ಸುಗಮ ಕಲಾಪಗಳು ನಡೆಯಲು ಅವಕಾಶ ಕಲ್ಪಿಸುವಂತಾಗಲಿ ಎಂದರು.

    ಶಿಕ್ಷಣ ಮುಗಿಸಿ ಬಾರ್ ಕೌನ್ಸಿಲ್ ನೋಂದಣಿ ಪಡೆದು ಬರುವ ಯುವ ವಕೀಲರು ವೃತ್ತಿಗೌರವವನ್ನು ಹೆಚ್ಚಿಸಿಕೊಳ್ಳಲು ನಿರಂತರ ಕಾನೂನು ಪುಸ್ತಕಗಳ ಅಧ್ಯಯನದ ಜತೆಗೆ ಕಲಾಪಗಳಲ್ಲಿ ಭಾಗಿಯಾಗಿ ಹಿರಿಯ ವಕೀಲರು ಮಂಡಿಸುವ ವಾದಗಳನ್ನು ಆಲಿಸಿಸುವಂತೆ ಸಲಹೆ ನೀಡಿದರು.

    ಪ್ರಧಾನ ಸಿವಿಲ್ ನ್ಯಾಯಾಧೀಶ ಸಚಿನ್ ಶಿವ ಪೂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯ ಶ್ರೇಣಿ ನ್ಯಾಯಾಧೀಶರಾದ ವಿ. ಮಾದೇಶ ಅವರು ಕರ್ತವ್ಯ ನಿರ್ವಹಿಸಿದಷ್ಟು ದಿನ ತಾಳ್ಮೆ, ಸರಳತೆ ಸ್ನೇಹಪರ ಗುಣದ ಪ್ರತಿರೂಪವಾಗಿ ಇತರರಿಗೆ ಮಾದರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
    ಸಂಘದ ಅಧ್ಯಕ್ಷ ಡಿ.ಎಂ. ಸುಂದರ್ ಮಾತನಾಡಿದರು. ವರ್ಗಾವಣೆಗೊಂಡಿರುವ ನ್ಯಾಯಾಧೀಶ ವಿ. ಮಾದೇಶ್ ಹಾಗೂ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಕು. ರಂಜಿತಾ ಅವರನ್ನು ಸನ್ಮಾನಿಸಲಾಯಿತು.

    ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ, ವಕೀಲರ ಸಂಘದ ಕಾರ್ಯದರ್ಶಿ ನಟೇಶ್, ಎಪಿಪಿ ರವಿ ಸೇಂದಿಲ್, ಮಾಜಿ ಅಧ್ಯಕ್ಷ ಹೇಮಚಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts