More

    ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು ದೇವರಾಜೇಗೌಡ ಆರೋಪ; ಬೆದರಿಕೆಗಳಿಗೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದ ಡಿಕೆಶಿ

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದೀಗ ಈ ವಿಡಿಯೋಗಳನ್ನು ಯಾರು ಬಿಡುಗಡೆ ಮಾಡಿದ್ದ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ.

    ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದು, ಈ ಪ್ರಕರಣದ ಸೂತ್ರಧಾರಿ ಡಿಕೆ ಶಿವಕುಮಾರ್ ಎಂದಿದ್ದಾರೆ. ಗಂಭೀರ ಆರೋಪಗಳನ್ನು ಮಾಡಿರುವ ದೇವರಾಜೇಗೌಡ, ಈ ಬಗ್ಗೆ ಸಿಬಿಐ ದೂರು ನೀಡಲು ಮುಂದಾಗಿದ್ದಾರೆ.

    ವಿಡಿಯೋ ರಿಲೀಸ್​ ಸಂಬಂಧ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಅವರು, ಡಿಕೆ ಶಿವಕುಮಾರ್ ಅವರು ಮಾತನಾಡಿರುವ ಆಡಿಯೋವೊಂದು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

    ದೇವರಾಜೇಗೌಡ ಮಾತನಾಡಿ, ಪ್ರಜ್ವಲ್ ರೇವಣ್ಣ ಕೇಸಲ್ಲಿ ಯಾರನ್ನ ಆರೋಪಿಗಳಾಗಿ ಮಾಡಬೇಕು, ಬಿಡಬೇಕು ಅಂತ ಚರ್ಚೆಯಾಗಿದೆ. ನನ್ನ ಜೀವನದ ಹೋರಾಟ ಇದ್ದದ್ದು ಎಚ್.ಡಿ ರೇವಣ್ಣ ವಿರುದ್ಧ ಆಗಿತ್ತು. ನನ್ನ ಹೋರಾಟದ ಪ್ರತಿಫಲ ನಿಜವಾದ ನ್ಯಾಯ ಸಿಕ್ಕಿದೆ ಅನ್ಕೊಂಡಿದ್ದೆ. ಇದನ್ನೇ ಅಸ್ತ್ರವಾಗಿ ಇಟ್ಕೊಂಡು ಕೆಲ ಕಿಡಿಗೇಡಿ ರಾಜಕಾರಣಿಗಳು ಅಸ್ತ್ರವಾಗಿ ಇಟ್ಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕಾರ್ತಿಕ್ ನನ್ನ ಕಚೇರಿಗೆ ಬಂದು ನನ್ನ ಕೈಗೆ ಈ ಕಾಪಿ ಕೊಡುತ್ತಾನೆ. ಇದರ ಜೊತೆಗೆ ಒಂದು ಪೆನ್ ಡ್ರೈವ್ ಕೊಡ್ತಾನೆ. ನಾನು ವಿಚಾರಣೆಗೆ ಹೋದಾಗ ನನ್ನ ಹೇಳಿಕೆ ಪಡೆದಿದ್ದಾರೆ, ದಾಖಲೆ ಕೊಟ್ಟಿದ್ದೇನೆ. ನಾನು ಹೇಳಿಕೆಯಲ್ಲಿ ಬಹಳ ಪ್ರಮುಖ ಅಂಶವನ್ನ ಉಲ್ಲೇಖ ಮಾಡಿದ್ದೇನೆ. ಕಾರ್ತಿಕ್ ನನ್ನ ಮನೆಗೆ ಬಂದಿರುವ ವೀಡಿಯೋ ಇದು ಎಂದು ಹೇಳುತ್ತಾ ದೇವರಾಜೇಗೌಡ ಅವರು ತಮ್ಮ ಲ್ಯಾಪ್ ಟಾಪ್ ನಲ್ಲಿ ಕಾರ್ತಿಕ್ ಮನೆಗೆ ಬಂದಿರುವ ವೀಡಿಯೊ ಪ್ರದರ್ಶಿಸಿದರು.

    ಇದಕ್ಕೆಲ್ಲಾ ಕಾರಣ ಸರ್ಕಾರದ ಮಹಾನ್ ನಾಯಕ ಎಂದು ಕಾರ್ತಿಕ್ ವೀಡಿಯೋದಲ್ಲಿ ಹೇಳಿದ್ದಾನೆ. ಪುಟ್ಟರಾಜು @ ಪುಟ್ಟಿ ಅನ್ನೋರ ಮೂಲಕ ಪೆನ್ ಡ್ರೈವ್ ಬೆಂಗಳೂರಿಗೆ ಬಂತು. ಮುಖ್ಯಮಂತ್ರಿಗಳು ರಹಸ್ಯ ಸ್ಥಳದಲ್ಲಿ ಸೀನಿಯರ್ ಅಧಿಕಾರಿಗಳ ಭೇಟಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದರ ಕಥಾನಾಯಕರೇ ಕಾಂಗ್ರೆಸ್ ಪಕ್ಷ, ಡಿಸಿಎಂ ಡಿಕೆಶಿ , ಸಿಎಂ ಸಿದ್ದರಾಮಯ್ಯ ಹಾಗೂ ಮತ್ತೋರ್ವ ಮಧ್ಯವರ್ತಿ.

     ಡ್ರೈವರ್ ನ ನಾವೇ ಕಳುಹಿಸಿದ್ದೀವಿ ಅಂತಾ ಎಲ್ ಆರ್ ಶಿವರಾಮೇಗೌಡ ಮಾತಾಡಿರುವ ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ ಮಧ್ಯವರ್ತಿಯಾಗಿ 10ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿದ್ದಾರೆ. ಪೆನ್ ಡ್ರೈವ್ ಹಂಚಿರುವ ವ್ಯಕ್ತಿಗಳನ್ನ ಪತ್ತೆ ಮಾಡಲೇ ಇಲ್ಲ ಇವರು. ಅವರ ಲೊಕೇಷನ್, ಫೋನ್ ನಂಬರ್ ಕೊಟ್ಟರೂ ಪತ್ತೆ ಮಾಡಲೇ ಇಲ್ಲ. ಹಾಸನದಲ್ಲಿ ದಾಖಲಾಗಿರುವ ಎಫ್ ಐ ಆರ್ ಕೈ ಬಿಟ್ರು. ಇದೆಲ್ಲದರ ಸೂತ್ರಧಾರ ರಾಜ್ಯ ಸರ್ಕಾರ ಎಂದು ದೇವರಾಜೇಗೌಡ ನೇರವಾಗಿ ಆರೋಪ ಮಾಡಿದರು.

    ಆಡಿಯೋ ಬಿಡುಗಡೆ ಮಾಡಿದ ದೇವರಾಜೇಗೌಡ, ಎಲ್ ಆರ್ ಶಿವರಾಮೇಗೌಡ (LR Shivarame Gowda) ಮೊದಲು ದೇವರಾಜೇಗೌಡ ಜೊತೆ ಮಾತನಾಡಿ ಆ ಬಳಿಕ ಡಿಕೆಶಿಗೆ ಫೋನ್ ಕೊಟ್ಟರು. ಡಿಕೆ ಸಾಹೇಬ್ರಿಗೆ ಕೊಡ್ತೀನಿ ಏನ್ ನಡೀತು ಅಂತಾ ಹೇಳು. ಡಿಕೆಶಿ ಫೋನ್ ನಲ್ಲಿ ನಮಸ್ಕಾರ ದೇವರಾಜ್ ಎಂದು ಹೇಳುವುದು ಕೇಳಿಸುತ್ತದೆ. ಪಾತ್ರಧಾರಿ ಯಾರು ಅಂತಾ ಗೊತ್ತಾಗುತ್ತದೆ, ಎಸ್‍ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಎಸ್‍ಐಟಿ ಸರ್ಕಾರದ ಪರವಾಗಿ ಕೆಲಸ ಮಾಡ್ತಿದೆ. ಅಧಿಕಾರಿಗಳ ಮೊಬೈಲ್‍ಗೆ ನಿತ್ಯ ಹತ್ತಾರು ಕರೆಗಳು ಬರ್ತಿವೆ. ಸಿಎಂ ಡಿಸಿಎಂ ಮಿನಿಸ್ಟರ್ ಗಳು ಫೋನ್ ಮಾಡ್ತಿದ್ದಾರೆ. ಇವರಿಂದ ನ್ಯಾಯ ಸಿಗುವ ವಿಶ್ವಾಸವಿಲ್ಲ. ಮುಖ್ಯಮಂತ್ರಿಗಳೇ ಕೇಸನ್ನ ಸಿಬಿಐಗೆ ಕೊಡಿ. ಇಲ್ಲವಾದಲ್ಲಿ ನಾವೇ ವಕೀಲರು ಹೋರಾಟ ಮಾಡಿ ಸಿಬಿಐ ಗೆ ಕೊಡಿಸ್ತೀವಿ. ಮೋದಿ-ಕುಮಾರಸ್ವಾಮಿ ಕೈ ಜೋಡಿಸಿರುವುದೇ ಇವರ ಟಾರ್ಗೆಟ್ ಎಂದು ಕಿಡಿಕಾರಿದರು

    ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇ ಗೌಡ ಅವರು ಡಿಕೆಶಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪಕ್ಕೆ ಇದೀಗ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

    ಪಾಪ ಬಿಜೆಪಿ-ಜೆಡಿಎಸ್ ಅವರು ಅವನನ್ನು ಬಳಸಿಕೊಂಡು ಏನ್ ಏನ್ ಬೇಕು ಮಾಡಿಸಿಕೊಳ್ತಾ ಇದ್ದಾರೆ. ಇದು ಹಾಸನ ಜಿಲ್ಲೆಗೆ ರಾಜ್ಯಕ್ಕೆ ಗೊತ್ತಿರೋ ವಿಚಾರವಾಗಿದೆ. ಅವರಿಗೆ ಅವಮಾನ ಆಗಿದೆ ಹಿಟ್ & ರನ್ ಮಾಡಿಕೊಂಡಿದ್ದಾರೆ. ಏನಾದ್ರು ಮಾಡಿ ಡೈವರ್ಟ್ ಮಾಡಬೇಕು ಮಾಡ್ತಾವ್ರೆ. ಅವನು ಮಾಡಲಿ ಅವನಿಗೆ ಹೇಳಿ ಕಳಿಸುತ್ತಿದ್ದವನು ಮಾಡಲಿ. ಹೇಳಿದ ಕೂಡಲೇ ಟಿವಿ ಚಾನಲ್ ಅವರಿಗೆ ಯಾರು ಕಾಲ್ ಮಾಡಿ ಮಾತನಾಡಿದ್ದಾರೆ ಎಲ್ಲ ನನಗೆ ಗೊತ್ತು. ಈ ಬ್ಲಾಕ್ ಮೇಲ್ ಗೆ ಎಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ.  ನನ್ನ ಹಾಗೂ ಸಿಎಂ ಹೆಸರು ಹೇಳಲಿ ಬಿಡಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts