More

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಮಂಡ್ಯ: ನಾನೊಬ್ಬ ಸಾಮಾನ್ಯ ಹಳ್ಳಿ ರೈತನ ಮಗ. ನಾನೆಂದೂ ಪ್ರಧಾನಮಂತ್ರಿ ಆಗ್ತೀನಿ ಅಂತ ಅಂದುಕೊಂಡಿರಲಿಲ್ಲ. ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರು ಹೇಳಿದರು.

    ಬಿಜೆಪಿಯ ವಾಜಪೇಯಿ ನೇತೃತ್ವದ ಸರ್ಕಾರ ಬಿದ್ದುಹೋದ ನಂತರ ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರ್ಕಾರ ರಚನೆಗಾಗಿ ನನ್ನನ್ನು ದೆಹಲಿಗೆ ಕರೆಸಿಕೊಂಡರು. ಅಂದು ಒತ್ತಾಯ ಮಾಡಿ ನನ್ನನ್ನು ಆ ಸ್ಥಾನದಲ್ಲಿ ಕೂರಿಸಿದರು. ಬಳಿಕ ನಾನೇನು ಕೆಲಸ ಮಾಡಿದ್ದೆ ಎಂದು ಹೇಳಲು ಹೋಗಲ್ಲ. ನಾನು ಹೋದ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ನಮ್ಮ ಪಕ್ಷ 16ರಿಂದ ಕೇವಲ 2 ಸ್ಥಾನಕ್ಕೆ ಕುಸಿಯಿತು. ನನ್ನ ರಾಜಕೀಯ ಜೀವನದಲ್ಲಿ ರಾಜಕೀಯವಾಗಿ ಶಕ್ತಿ ತುಂಬಿದ್ದು ಹಾಸನ. ಅದನ್ನು ಹೊರತು ಪಡಿಸಿದ್ರೆ ಮಂಡ್ಯ ಜಿಲ್ಲೆ. ಹಾಗಾಗಿ ನಾನಿಂದ ಮಂಡ್ಯಗೆ ಬಂದಿದ್ದೀನಿ… ರೈತನ ಮಗ ಪ್ರಧಾನಿಯಾಗಿ ಮಾಡಿರೋ ಕೆಲಸದ ಬಗ್ಗೆ ಪುಸ್ತಕ ಬಿಡುಗಡೆಗೆ ಸಿದ್ಧವಾಗ್ತಿದೆ. ಅಂದು ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ ಎಂದರು.

    ವಿಧಾನ ಪರಿಷತ್​ ಚುನಾವಣೆ ಹೊಸ್ತಿಲಲ್ಲಿ ಮಂಡ್ಯ ಜಿಲ್ಲಾ ಜೆಡಿಎಸ್​ ನಾಯಕರು ದೇವೇಗೌಡರ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಶ್ರೀರಂಗಪಟ್ಟಣದ ಖಾಸಗಿ ಹೊಟೇಲ್​ನಲ್ಲಿ ಭಾನುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಆ ವೇಳೆ ಮಾತನಾಡಿದ ದೇವೇಗೌಡ, ಕಳೆದ ಬಾರಿ ಎಂಎಲ್​ಸಿ ಚುನಾವಣೆಗೆ ಸ್ಪರ್ಧಿಸಿ ಗೆದ್ದಿರುವವರನ್ನೇ ಒಮ್ಮತದಿಂದ ಈ ಭಾರಿಯೂ ಆಯ್ಕೆ ಮಾಡಿದ್ದೀವಿ. ಶಾಸಕರೆಲ್ಲರೂ ಸೇರಿ ಒಟ್ಟಾಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೂರ್ನಾಲ್ಕು ಬಾರಿ ಇಲ್ಲಿಗೆ ಬಂದಿದ್ದಾರೆ. ನಾನಾಗಲಿ, ಕುಮಾರಸ್ವಾಮಿಯಾಗಲಿ ಜಿಲ್ಲೆಗೆ ಬಂದಿಲ್ಲ. ಮಂಡ್ಯ ಜಿಲ್ಲೆಯ ಎಲ್ಲ ಶಾಸಕರು ಒಟ್ಟಿಗೆ ಚುನಾವಣೆ ಮಾಡ್ತಿರೋದ್ರಿಂದ ನಾನು ಜಿಲ್ಲೆಗೆ ಬಂದಿರಲಿಲ್ಲ. ಅಭ್ಯರ್ಥಿ ಹಾಗೂ ಅವರ ಮನೆಯವರೆಲ್ಲಾ ಮತದಾರರನ್ನ ಭೇಟಿ ಮಾಡಿದ್ದಾರೆ. ಉಳಿದಂತೆ ಆಯಾ ತಾಲೂಕಿನಲ್ಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ ಎಂದರು.

    ನಾನು ಇರೋವರೆಗೂ ರಂಗನಾಥ್​ ಅವರೇ ಕುಣಿಗಲ್​ನ ಕಾಂಗ್ರೆಸ್​ ಅಭ್ಯರ್ಥಿ ಎಂದ ಡಿಕೆಸು​ ವಿರುದ್ಧ ಎಸ್​ಪಿಎಂ ಗರಂ

    ಪ್ರೇಯಸಿಯ ಅಂತ್ಯಕ್ರಿಯೆ ನಡೆದ ಸ್ಥಳದಲ್ಲೇ ಪ್ರಿಯಕರ ಆತ್ಮಹತ್ಯೆ! ತಡರಾತ್ರಿ ರುದ್ರಭೂಮಿಯಲ್ಲಿ ನಡೀತು ಹೃದಯವಿದ್ರಾವಕ ಘಟನೆ

    ಗರ್ಭಿಣಿ ಪತ್ನಿಯ ಹತ್ಯೆಗೆ ಯತ್ನಿಸಿ ಎದುರು ಮನೆ ದಂಪತಿಯನ್ನೂ ಕೊಂದ! ಇವನ ಮಾತು ಕೇಳಿದ್ರೆ ಅಹಸ್ಯ ಅನ್ನಿಸುತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts