More

    video/ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಮುಖ್ಯಪೇದೆಯ ಕಾರಿನ ಚಕ್ರದ ಗಾಳಿ ತೆಗೆದ ತಹಸೀಲ್ದಾರ್​!

    ಹಾಸನ: ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್​ ಮುಖ್ಯಪೇದೆಯೊಬ್ಬರು ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳ ಗಾಳಿಯನ್ನು ಸ್ವತಃ ತಹಸೀಲ್ದಾರ್ ಅವರೇ ತೆಗೆಸಿದ್ದಾರೆ. ತಹಸೀಲ್ದಾರ್​ರ ಕ್ರಮ ಖಂಡಿಸಿ ರಸ್ತೆಯಲ್ಲೇ ಕುಳಿತು ಮುಖ್ಯಪೇದೆ ಪ್ರತಿಭಟನೆ ನಡೆಸಿದ ಘಟನೆ ಸಕಲೇಶಪುರ ಪಟ್ಟಣದಲ್ಲಿ ಸಂಭವಿಸಿದೆ.

    ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವ ಸಕಲೇಶಪುರ ಗ್ರಾಮಾಂತರ ಠಾಣೆಯ ಮುಖ್ಯಪೇದೆ ದಯಾನಂದ ಅಗತ್ಯ ಔಷಧ ಖರೀದಿಗಾಗಿ ಪಟ್ಟಣದ ಮೇಡಿಕಲ್ ಶಾಪ್​ವೊಂದರ ಮುಂದೆ ತನ್ನ ಕಾರನ್ನು ನಿಲುಗಡೆ ಮಾಡಿ ತೆರಳಿದ್ದರು. ಆ ವೇಳೆಗೆ ಸ್ಥಳಕ್ಕೆ ಬಂದ ತಹಸೀಲ್ದಾರ್ ಮಂಜುನಾಥ್, ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ ಎಂಬ ಕಾರಣ ನೀಡಿ ಕಾರಿನ ನಾಲ್ಕು ಚಕ್ರಗಳ ಗಾಳಿ ತೆಗೆಸಿದರು. ಇದರಿಂದಾಗಿ ಮತ್ತಷ್ಟು ರಕ್ತದೊತ್ತಡಕ್ಕೆ ಒಳಗಾದ ದಯಾನಂದ ಸ್ಥಳದಲ್ಲೇ ಗಾಂಧೀಜಿ ಅವರ ಭಾವಚಿತ್ರ ಧರಣಿಗೆ ಕುಳಿತರು.

    ಇದನ್ನೂ ಓದಿರಿ ಮಾಗಡಿ ಪುರಸಭೆಗೆ ವಾಮಾಚಾರ!

    ತಹಸೀಲ್ದಾರ್​ರ ನಡೆ ಪ್ರಶ್ನಿಸಿದ ಮುಖ್ಯಪೇದೆ ದಯಾನಂದ, ನ್ಯಾಯಕ್ಕಾಗಿ ಆಗ್ರಹಿಸಿ ಸುಮಾರು ಅರ್ಧಗಂಟೆ ಕಾಲ ಮುಖ್ಯರಸ್ತೆಯಲ್ಲೇ ಧರಣಿ ನಡೆಸಿದರು. ಇದರಿಂದಾಗಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಪಟ್ಟಣ ಠಾಣೆ ಪೊಲೀಸರು ಮುಖ್ಯಪೇದೆಯನ್ನು ಮನವೊಲಿಸುವ ಮೂಲಕ ಠಾಣೆಗೆ ಕರೆದೊಯ್ದ ಘಟನೆ ಮಂಗಳವಾರ ಸಂಭವಿಸಿದೆ. ಕಾನೂನು ಎಲ್ಲರಿಗೂ ಒಂದೇ ಎಂದು ತಹಸೀಲ್ದಾರ್​ ತಿಳಿಹೇಳಿದ್ದಾರೆ.

    ನೋ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಪೊಲೀಸ್ ಪೇದೆಯೊಬ್ಬರ ಕಾರಿನ ಚಕ್ರದ ಗಾಳಿ ತೆಗೆದ ತಹಸೀಲ್ದಾರ್

    ನೋ ಪಾರ್ಕಿಂಗ್’ನಲ್ಲಿ ಕಾರು ನಿಲ್ಲಿಸಿ ಪೊಲೀಸ್ ಹೆಡ್’ಕಾನ್ಸ್’ಸ್ಟೇಬಲ್ ಒಬ್ಬರು ಮೆಡಿಕಲ್’ಗೆ ಹೋಗಿದ್ದ ವೇಳೆ ಸಕಲೇಶಪುರದ ತಹಸೀಲ್ದಾರ್ ಮಂಜುನಾಥ್ ಚಕ್ರದ ಗಾಳಿ ತೆಗೆದ ಘಟನೆ ನಡೆದಿದೆ. ಇದರಿಂದ ಸಿಟ್ಟಾದ ಪೊಲೀಸ್ ಹೆಡ್’ಕಾನ್ಸ್’ಸ್ಟೇಬಲ್ ದಯಾನಂದ್ ರಸ್ತೆಯಲ್ಲೆ ಪ್ರತಿಭಟಿಸಿ, ರಂಪಾಟ ಮಾಡಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ದಯಾನಂದ್’ರನ್ನು ಬೇರೆಡೆ ಕರೆದೊಯ್ದಿದ್ದಾರೆ. ಈವೇಳೆ ತಹಸೀಲ್ದಾರ್ ಅವರು ಕಾನೂನು ಎಲ್ಲರಿಗೂ ಒಂದೆ ಎಂದು ತಿಳಿಸಿದ್ದಾರೆ.ಪವರ್ ನ್ಯೂಜ್–Power To You: ನೀವು ವರದಿಗಾರರಾಗಬೇಕಾ? ನಿಮ್ಮ ಊರಿನ ಸುದ್ದಿಗಳನ್ನ ಎಲ್ಲರಿಗೂ ತಿಳಿಸಬೇಕಾ? ನಿಮ್ಮ ಸುದ್ದಿಗಳಿಂದ ಹಣ ಸಂಪಾದಿಸಬೇಕಾ? ಹಾಗಾದರೆ ಈಕೂಡಲೇ https://web.powernewz.com/posts.php?id=157345 ಗೆ ಲಾಗಿನ್ ಆಗಿ, ನಿಮ್ಮ ಸುದ್ದಿಗಳನ್ನು ಅಪ್ಲೋಡ್ ಮಾಡಿ ಹಾಗೂ ಎಲ್ಲರಿಗೂ ಶೇರ್ ಮಾಡಿ.ಸುದ್ದಿ: ಕುಶ್ವಂತ್, ಹಾಸನ

    Posted by Vijayavani on Tuesday, August 18, 2020

    ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts