ತನಗಿಂತ 46 ವರ್ಷ ಚಿಕ್ಕವನ ಜತೆ ಮದುವೆ! 2 ವರ್ಷದ ಬಳಿಕ 83ರ ವೃದ್ಧೆಯ ಪಶ್ಚಾತಾಪದ ಮಾತುಗಳು

Iris Jones, Mohamad Ibriham,
Published on

ನವದೆಹಲಿ: ಸಾಮಾನ್ಯವಾಗಿ ಮದುವೆ ಆಗುವಾಗ ಜೀವನ ಸಂಗಾತಿಗಳ ನಡುವಿನ ವಯಸ್ಸು ತುಂಬಾ ಅಂತರ ಇರಬಾರದು ಎಂದು ಬಯಸುತ್ತಾರೆ. ಆದರೆ, ಇಲ್ಲೊಂದು ಜೋಡಿಯ ವಯಸ್ಸಿನ ಅಂತರದ ಬಗ್ಗೆ ತಿಳಿದರೆ ನೀವು ನಿಜಕ್ಕೂ ಶಾಕ್​ ಆಗ್ತೀರಾ! ಏಕೆಂದರೆ, ಇಬ್ಬರ ನಡುವೆ ಬರೋಬ್ಬರಿ 46 ವರ್ಷ ವಯಸ್ಸಿನ ಅಂತರವಿದೆ. ಗಮನಾರ್ಹ ಸಂಗತಿ ಏನೆಂದರೆ ಇಲ್ಲಿ ಪುರುಷನಿಗಿಂತ ಮಹಿಳೆಯೇ ದೊಡ್ಡವಳು. ಮಹಿಳೆಗೆ 83 ವರ್ಷ ಮತ್ತು ಪುರುಷನಿಗೆ 37 ವರ್ಷ. ಆದರೆ, ಇದೀಗ ಇಬ್ಬರ ಸಂಬಂಧ ಮತ್ತೊಂದು ತಿರುವು ಪಡೆದುಕೊಂಡಿದ್ದು, ಮದುವೆಯಾದ ಎರಡೇ ವರ್ಷಗಳಲ್ಲಿ ಇಬ್ಬರು ಡಿವೋರ್ಸ್​ ಆಗಿದ್ದಾರೆ.

Iris Jones, Mohamad Ibriham, 1

ಪರಿಚಯವಾಗಿದ್ದು ಹೇಗೆ?

ಬ್ರಿಟಿಷ್​ ಮೂಲದ ಹಿರಿಯ ಮಹಿಳೆ ಐರಿಷ್​ ಜೋನ್ಸ್​ಗೆ 83 ವರ್ಷ. ಆಕೆಯ ಮಾಜಿ ಪ್ರಿಯಕರ ಈಜಿಪ್ಟ್​ ಮೂಲದ ಮೊಹಮ್ಮದ್​ ಇಬ್ರಾಹಿಂಗೆ 37ರ ಪ್ರಾಯ. ಇಬ್ಬರು 2019ರಲ್ಲಿ ಫೇಸ್​ಬುಕ್​ ಮೂಲಕ ಪರಿಚಿತರಾದರು. ಈ ಪರಿಚಯ ನಂತರದ ದಿನಗಳಲ್ಲಿ ಪ್ರೇಮಕ್ಕೆ ತಿರುಗಿತು. ಬಳಿಕ ತನ್ನ ಪ್ರಿಯಕರನಿಗಾಗಿ ಐರಿಷ್​, 2019ರ ನವೆಂಬರ್​ನಲ್ಲಿ ಈಜಿಪ್ಟ್​ ರಾಜಧಾನಿ ಕೈರೋಗೆ ತೆರಳಿದಳು. ಇಬ್ಬರು ಮುಖಾಮುಖಿ ಭೇಟಿಯಾದ ಬಳಿಕ ಇಬ್ಬರು ಮದುವೆಯಾಗಲು ನಿರ್ಧಾರ ಮಾಡಿದರು.

ನೆಟ್ಟಿಗರಿಂದಲೂ ಬೆಂಬಲ

ಐರಿಷ್​ ಮತ್ತು ಇಬ್ರಾಹಿಂ 2020ರಲ್ಲಿ ಮದುವೆ ಆದರು. ಬಳಿಕ ಈಜಿಪ್ಟ್​ನಲ್ಲಿರುವ ಶರ್ಮ್​ ಇಲ್​ ಶೇಖ್​ ನಗರದಲ್ಲಿ ಇಬ್ಬರು ಹನಿಮೂನ್​ ಕೂಡ ಆಚರಿಸಿದರು. ನಂತರದ ದಿನಗಳಲ್ಲಿ ಇಬ್ಬರು ತಮ್ಮ ಮದುವೆ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಬಳಿಕ ಇಬ್ಬರಿಗೂ ಭಾರೀ ಬೆಂಬಲವೂ ವ್ಯಕ್ತವಾಯಿತು ಮತ್ತು ಇಬ್ಬರು ಸಂಬಂಧವನ್ನು ಹಲವರು ಗೌರವಿಸಿದರು. ತಮ್ಮ ಮದುವೆಯ ನಂತರ, ಐರಿಷ್​ ಜೋನ್ಸ್ ಮತ್ತು ಮೊಹಮ್ಮದ್ ಇಬ್ರಾಹಿಂ ತಮ್ಮ ಫೋಟೋಗಳು ಮತ್ತು ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಅಲ್ಲದೆ, ಈ ಹಿಂದೆ ಮಾಧ್ಯಮಗಳಲ್ಲಿ ಐರಿಷ್,​ ತಮ್ಮ 85ನೇ ವಯಸ್ಸಿನಲ್ಲಿ ಸೆಕ್ಸ್​ ಲೈಫ್​ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.

Iris Jones, Mohamad Ibriham, 2

ಆಗಾಗ ಜಗಳ 

ಇಬ್ಬರ ನಡುವಿನ ಸಂಬಂಧ ಮೃದುವಾಗಿಯೇ ಸಾಗಿತ್ತು. ಆದರೆ, ಎರಡು ವರ್ಷಗಳ ನಂತರ ಇಬ್ಬರು ನಡುವೆ ಭಿನ್ನಾಭಿಪ್ರಾಯಗಳು ಮೂಡಿದೆ. ಹೀಗಾಗಿ ಇಬ್ಬರು ಪ್ರತ್ಯೇಕವಾಗಿ ನಿರ್ಧರಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲೂ ಇಬ್ಬರು ಸಕ್ರಿಯರಾಗಿಲ್ಲ. ಇದನ್ನು ನೋಡಿ ಇಬ್ಬರು ಎಲ್ಲಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಐರಿಷ್​, ತನಗೆ ಇಬ್ರಾಹಿಂ ಎಂದರೆ ತುಂಬಾ ಇಷ್ಟ. ಆದರೆ ಕೆಲವು ದಿನಗಳಿಂದ ನಮ್ಮ ದಾಂಪತ್ಯ ಜೀವನ ಸರಿಯಾಗಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇನ್ನೂ ಪ್ರೀತಿಸುತ್ತಿದ್ದರೂ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದಿದ್ದಾರೆ. ಈ ರೀತಿ ಜಗಳವಾಡುವ ಬದಲು ಬೇರೆ ಬೇರೆಯಾಗಿ ಸಂತೋಷವಾಗಿರಲು ನಿರ್ಧರಿಸಿದ್ದೇವೆ ಎನ್ನುವ ಮೂಲಕ ವಿಚ್ಛೇದನ ಪಡೆಯುತ್ತಿರುವುದಾಗಿ ಐರಿಷ್​ ಸ್ಪಷ್ಟಪಡಿಸಿದ್ದಾರೆ.

ಸೆಕ್ಸ್​ ಲೈಫ್​ ಚೆನ್ನಾಗಿಯೇ ಇತ್ತು

ಆರಂಭದಲ್ಲಿ ಇಬ್ಬರ ನಡುವಿನ ಸೆಕ್ಸ್​ ಲೈಫ್​ ಚೆನ್ನಾಗಿಯೇ ಇತ್ತು. ಆದರೆ, ನಂತರದ ದಿನಗಳಲ್ಲಿ ಆತನನ್ನು ನೋಡಿಕೊಳ್ಳುವುದರಲ್ಲೇ ಕಾಲ ಕಳೆಯಿತು. ಆತನಿಗೆ ಅಡುಗೆ ಮಾಡುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಆತನನ್ನು ನೋಡಿಕೊಳ್ಳುವುದಲ್ಲೇ ದಣಿಯುತ್ತಿದ್ದೆ. ಅವನಿಲ್ಲದೆ ನಾನೀಗ ಉತ್ತಮವಾಗಿದ್ದೇನೆ. ನಾನು ಅವನನ್ನು ಭೇಟಿಯಾಗಿದ್ದಕ್ಕೆ ವಿಷಾದಿಸುತ್ತೇನೆ ಮತ್ತು ನನ್ನ ಉತ್ತಮ ಪತಿ ನನ್ನ ಮೊದಲ ಪತಿ ಗ್ವಿನ್ ಎಂದು ನನಗೆ ಈಗ ತಿಳಿದಿದೆ ಎಂದು ಐರಿಷ್​ ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ.

Iris Jones, Mohamad Ibriham, 3

ನೋವು ಮರೆಯಲು ಬೆಕ್ಕಿನ ಮೊರೆ

ಇದೀಗ ಇಬ್ರಾಹಿಂ ನೋವಿನಿಂದ ಚೇತರಿಸಿಕೊಳ್ಳಲು ನಾನೊಂದು ಬೆಕ್ಕನ್ನು ಸಾಕುತ್ತಿದ್ದೇನೆ ಎಂದಿದ್ದಾರೆ. ಆದರೆ ಐರಿಸ್ ಜೋನ್ಸ್ ಅವರು 1993ರಲ್ಲಿ ತನ್ನ ಮೊದಲ ಪತಿಗೆ ವಿಚ್ಛೇದನ ನೀಡಿದ್ದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net