More

    ನೀವು ಆಗಾಗ ಮಲಬದ್ಧತೆಯಿಂದ ಬಳಲುತ್ತಿರಾ? ತಕ್ಷಣ ಪರಿಹಾರಕ್ಕಾಗಿ ಇಲ್ಲಿವೆ ಮಹತ್ವದ ಸಲಹೆಗಳು

    ಇಂದಿನ ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯವಾಗಿದೆ. ಅನೇಕ ಮಂದಿ ಮಲಬದ್ಧತೆಯಿಂದಾಗಿ ತೀವ್ರ ಉದರ ನೋವಿನಿಂದ ಬಳಲುತ್ತಾರೆ. ಇದಲ್ಲದೆ, ಅನೇಕ ಮಂದಿ ಗಂಭೀರ ಹೊಟ್ಟೆ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದರ ಜೊತೆಗೆ ಆರೋಗ್ಯ ತಜ್ಞರ ಸಲಹೆಯಂತೆ ಹೆಚ್ಚು ನಾರಿನಂಶವಿರುವ ಆಹಾರಗಳನ್ನು ಸೇವಿಸಬೇಕು.

    ಹಸಿ ಕಡಲೆ: ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಹಸಿಕಡಲೆಯನ್ನು ನಿಯಮಿತವಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್​ ಅಂಶ ಗಂಭೀರ ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಬೀನ್ಸ್​ಗಳಲ್ಲಿ ಫೈಬರ್ ಮತ್ತು ಪ್ರೋಟೀನ್​ ಸಮೃದ್ಧವಾಗಿದೆ. ಹೀಗಾಗಿ ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ.

    ಇದನ್ನೂ ಓದಿ: ಸಹೋದರನ ಆರೈಕೆಗೆ ನೇಮಿಸಿದ ಮಹಿಳೆಯಿಂದ ಯುವಿ ತಾಯಿಗೆ ಬೆದರಿಕೆ: ವಂಚಕಿ ಸಿಕ್ಕಿಬಿದ್ದಿದ್ದೇ ರೋಚಕ!

    ಕಿಚಡಿ: ಎಲ್ಲ ಕಾಳುಗಳಿಂದ ತಯಾರಿಸಿದ ಕಿಚಡಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೇಹಕ್ಕೆ ಅತ್ಯಧಿಕ ಪೋಷಕಾಂಶಗಳನ್ನು ನೀಡುತ್ತದೆ. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುವ ಜತೆ ಮಲಬದ್ಧತೆಯ ಸಮಸ್ಯಗಳನ್ನು ನಿವಾರಿಸುತ್ತದೆ. ಆದ್ದರಿಂದ ಪದೇ ಪದೇ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಪ್ರತಿದಿನ ಸೇವಿಸಬೇಕು.

    ಪರಂಗಿ ಹಣ್ಣು: ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಇದಲ್ಲದೆ, ಈ ಹಣ್ಣಿನಲ್ಲಿ ಪಪೈನ್ ಕಿಣ್ವವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಆಗಾಗ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಈ ಹಣ್ಣನ್ನು ಸೇವನೆ ಮಾಡುವುದರಿಂದ ಸುಲಭವಾಗಿ ಪರಿಹಾರ ಪಡೆಯಬಹುದು.

    ಚಿಯಾ ಬೀಜಗಳು: ಈ ಚಿಯಾ ಬೀಜಗಳಲ್ಲಿ ಹಲವು ಔಷಧೀಯ ಅಂಶಗಳಿವೆ. ನಿತ್ಯದ ಆಹಾರ ಕ್ರಮದಲ್ಲಿ ಇದನ್ನು ಸೇವನೆ ಮಾಡುವುದರಿಂದ ಅನೇಕ ಬಗೆಯ ಉದರ ಸಮಸ್ಯೆಗಳಿಗೆ ಇದು ಪರಿಹಾರವನ್ನು ನೀಡುತ್ತದೆ. ದೇಹವನ್ನು ಆರೋಗ್ಯವಾಗಿ ಇಡುವಲ್ಲಿಯೂ ಈ ಚಿಯಾ ಬೀಜಗಳು ಬಹುಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆಗಾಗ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಈ ಬೀಜಗಳನ್ನು ತಮ್ಮ ಆಹಾರದಲ್ಲಿ ಖಂಡಿತವಾಗಿ ತೆಗೆದುಕೊಳ್ಳಬೇಕು.

    ಇದನ್ನೂ ಓದಿ: ಬಿಪಿಎಲ್ ಹೆಲ್ತ್ ಕಾರ್ಡ್| ಹೊಸ ಅರ್ಜಿದಾರರಿಗೆ ಸಿಹಿ ಸುದ್ದಿ; ಚಿಕಿತ್ಸಾ ಸೌಲಭ್ಯಕ್ಕೆ ಬಳಕೆ

    ಓಟ್ಸ್​: ಈ ಓಟ್ಸ್​ನಲ್ಲಿ ಫೈಬರ್​ ಅಂಶ ಹೇರಳವಾಗಿದೆ. ಇದರಿಂದ ಮಾಡಿದ ಆಹಾರವನ್ನು ಪ್ರತಿದಿನ ಸೇವನೆ ಮಾಡುವುದರಿಂದ ಕೇವಲ ನಿಮ್ಮ ತೂಕ ಮಾತ್ರ ಕಡಿಮೆಯಾಗುವುದಿಲ್ಲ, ಜತೆಗೆ ಗಂಭೀರ ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲಿದೆ. ಇಷ್ಟೇ ಅಲ್ಲದೆ, ಇದು ಗಂಭೀರ ಕ್ರೋನಿಕ್​ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ. (ಏಜೆನ್ಸೀಸ್​)

    ಕ್ಲಿಯರ್ ಆಗಿರುವ ಹೊಳೆಯುವ ಚರ್ಮ ಬೇಕೇ? ಬೆಳಗ್ಗೆ ಎದ್ದ ತಕ್ಷಣ ಈ ಪಾನೀಯಗಳನ್ನು ಕುಡಿಯಿರಿ

    ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನಿ..ಅನಾರೋಗ್ಯದಿಂದ ದೂರ ಇರಿ….

    ಈ ಪ್ರಯೋಜನಗಳನ್ನು ತಿಳಿದ ನಂತರ, ನೀವು ದಾಳಿಂಬೆ ಸಿಪ್ಪೆಗಳನ್ನು ಎಂದಿಗೂ ಎಸೆಯುವುದಿಲ್ಲ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts