More

    ಹೃದಯದ ಬಗ್ಗೆ ಕಾಳಜಿ ಇದ್ದರೆ ಈ ಆರು ಆರೋಗ್ಯಕರ ತಿಂಡಿಗಳನ್ನು ಸೇವಿಸಿ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಜನರನ್ನು ಹೆಚ್ಚಾಗಿ ಪೀಡಿಸುತ್ತಿದ್ದು, ಯುವಕರೇ ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಿದ್ದಾರೆ. ವೈದ್ಯರು ಹೇಳುವ ಪ್ರಕಾರ ನಾವು ಅಳವಡಿಸಿಕೊಂಡಿರುವ ಆಹಾರ ಕ್ರಮ ಹೇಗಿರುತ್ತದರೋ ಹೃದಯದ ಆರೋಗ್ಯವು ಅಷ್ಟೇ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ.

    ಹಲವಾರು ಆಹಾರಗಳು ಸ್ಯಾಚುರೇಟೆಡ್ ಕೊಬ್ಬುಗಳು, ಅತಿಯಾದ ಸೋಡಿಯಂ ಮತ್ತು ಸಂಸ್ಕರಿಸಿದ ಸಕ್ಕರೆಗಳಿಂದ ತುಂಬಿರುತ್ತವೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕರವಾಗಿರಲು ಸೇವಿಸಬಾರದ ಕೆಲವೊಂದು ಆಹಾರಗಳು ಹೃದ್ರೋಗ ತಜ್ಞರ ಪಟ್ಟಿಯಲ್ಲಿವೆ. ಇದು ಹೃದ್ರೋಗಿಗಳಿಗೆ, ಹೃದಯದ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ ಎಂದು ಹೇಳಲಾಗಿದ್ದು, ಈ ರೀತಿಯ ಆರೋಗ್ಯಕರ ತಿಂಡಿಗಳನ್ನು ಸೇವಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

    ಬೆರ್ರಿ ಹಣ್ಣುಗಳು: ಪೌಷ್ಟಿಕಾಂಶ-ದಟ್ಟವಾದ ರಾಸ್​ಬೆರ್ರಿ, ಬ್ಲ್ಯಾಕ್ಬೆರಿಗಳು, ಬ್ಲೂಬೆರ್ರಿಗಳು ಮತ್ತು ಸ್ಟ್ರಾಬೆರಿಗಳು ಹೃದಯದ ಆರೋಗ್ಯಕ್ಕೆ ಅತ್ಯಗತ್ಯ. ಆಂಥೋಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕಗಳು, ವಿಶೇಷವಾಗಿ ಬೆರ್ರಿಗಳಲ್ಲಿ ಇರುತ್ತದೆ ಎಂದು ಹೇಳಲಾಗಿದೆ.

    ವಾಲ್ನಟ್ಸ್​: ವಾಲ್‌ನಟ್ಸ್‌ನಲ್ಲಿ ಮ್ಯಾಂಗನೀಸ್ ಮತ್ತು ಮ್ಯಾಗ್ನೇಶಿಯಮ್​ನಂತಹ ಫೈಬರ್ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಹೇರಳವಾಗಿ ಕಾಣಬಹುದಾಗಿದೆ. ಸಂಶೋಧನೆಯ ಪ್ರಕಾರ, ಪ್ರತಿದಿನ ಒಂದೆರಡು ಬಾರಿ ವಾಲ್‌ನಟ್‌ಗಳನ್ನು ತಿನ್ನುವುದು ನಿಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಪೀನಟ್​ ಬಟರ್​ ಮತ್ತು ಆ್ಯಪಲ್​: ಕಡಲೆಕಾಯಿಯಲ್ಲಿ ಕಂಡುಬರುವ ಕೊಬ್ಬಿನಾಮ್ಲಗಳ ಮಿಶ್ರಣವು ಹೃದಯರಕ್ತನಾಳದ ಆರೋಗ್ಯಕ್ಕೆ ಒಳ್ಳೆಯದು. ಸಮತೋಲಿತ ಆಹಾರದ ಭಾಗವಾಗಿ, ಕಡಲೆಕಾಯಿಗಳು ಸಸ್ಯ ಸ್ಟೆರಾಲ್​ಗಳನ್ನು ಸಹ ಒಳಗೊಂಡಿರುತ್ತವೆ. ಪೀನಟ್​ ಬಟರ್​ ಸೇವನೆಯು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    Pop Corn

    ಇದನ್ನೂ ಓದಿ: ನೀವು ಈ ಆರೋಪಿಯನ್ನು ಹಿಡಿದುಕೊಟ್ಟರೆ ಪೊಲೀಸರು ಕೊಡುವ ಬಹುಮಾನ ಕೇಳಿದರೆ ಶಾಕ್​ ಆಗ್ತೀರಾ

    ಅಧಿಕ LDL ಕೊಲೆಸ್ಟ್ರಾಲ್ ಮತ್ತು ಹೃದ್ರೋಗದ ನಡುವೆ ಪರಸ್ಪರ ಸಂಬಂಧವಿದೆ. ಸೇಬುಗಳು ಸಸ್ಯ ಸ್ಟೆರಾಲ್ಗಳು, ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಆದರಿಂದ ಸೇಬು ಸೇವನೆಯು ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಅತ್ಯವಶ್ಯಕ ಎಂದು ವೈದ್ಯರು ಸಲಹೆ ನೀಡಿದ್ದಾರೆ.

    ಕಡಲೆ: ಕಡಲೆಯಲ್ಲಿ ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ಮ್ಯಾಗ್ನೇಶಿಯಮ್, ಸೆಲೆನಿಯಮ್ ಮತ್ತು ಜೀವಸತ್ವಗಳು ಹೇರಳವಾಗಿವೆ. ಇದಲ್ಲದೆ, 100 ಗ್ರಾಂಗೆ 24 ಮಿಲಿಗ್ರಾಂ ಉಪ್ಪನ್ನು ಮಾತ್ರ ಹೊಂದಿರುತ್ತವೆ ಇದರ ಸೇವನೆಯೂ ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.

    ಡಾರ್ಕ್ ಚಾಕೊಲೇಟ್: ಡಾರ್ಕ್ ಚಾಕೊಲೇಟ್‌ನಲ್ಲಿ ಹೇರಳವಾಗಿರುವ ಫ್ಲೇವನಾಯ್ಡ್‌ಗಳಂತಹ ಆಂಟಿಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಚಾಕೊಲೇಟ್ ಅನ್ನು ಮಿತವಾಗಿ ತಿನ್ನುವ ಮೂಲಕ ನಿಮ್ಮ ಮಧುಮೇಹ, ಪಾರ್ಶ್ವವಾಯುಯಂತಹ ಖಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡಾರ್ಕ್ ಚಾಕೊಲೇಟ್​ನಲ್ಲಿ​ ಗಮನಾರ್ಹ ಮಟ್ಟದ ಕ್ಯಾಲೋರಿಗಳು ಮತ್ತು ಸಕ್ಕರೆಯನ್ನು ಒಳಗೊಂಡಿರುತ್ತವೆ ಇದರ ಸೇವನೆಯು ಹೃದಯದ ಆರೋಗ್ಯಕ್ಕೆ ಅತ್ಯವಶ್ಯಕ ಎಂದು ಹೇಳಲಾಗಿದೆ.

    ಪಾಪ್​ಕಾರ್ನ್​: ಕಾರ್ನ್ ಒಂದು ಆರೋಗ್ಯಕರ ಧಾನ್ಯವಾಗಿದ್ದು ಹೆಚ್ಚಾಗಿ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಅತ್ಯಂತ ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುತ್ತದೆ. ಪಾಪ್​ಕಾರ್ನ್​ ಸೇವನೆಯಿಂದಲೂ ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts