More

    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ

    | ಹರ್ಷವರ್ಧನ್​ ಬ್ಯಾಡನೂರು

    ರಂಗಭೂಮಿ, ಕಿರುತೆರೆ, ಸಿನಿಮಾ, ಡಬ್ಬಿಂಗ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೆಗ್ಗಳಿಕೆ ಶ್ರೇಯಸ್​ ತಲ್ಪಾಡೆಗೆ ಸಲ್ಲುತ್ತದೆ. 40ಕ್ಕೂ ಅಧಿಕ ಹಿಂದಿ, ಮರಾಠಿ ಚಿತ್ರಗಳಲ್ಲಿ ನಟಿಸಿರುವ ಅವರಿಗೆ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ, ಫಿಲಂೇರ್​ ಸೇರಿ ಹಲವು ಪ್ರಶಸ್ತಿಗಳು ದೊರೆತಿವೆ. ಇಂತಹ ಶ್ರೇಯಸ್​ ಇದೀಗ “ಅಜಾಗ್ರತ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೇ ಖುಷಿಯಲ್ಲಿ ಮೊದಲ ಬಾರಿಗೆ “ವಿಜಯವಾಣಿ’ ಜತೆ ಮಾತನಾಡಿದ್ದಾರೆ.

    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ
    • ಅಜಾಗ್ರತ ಚಿತ್ರತಂಡ ಸೇರಿದ್ದು ಹೇಗೆ?
      – ನಿರ್ದೇಶಕ ಶಶಿಧರ್​ ಸಂಪರ್ಕಿಸಿದ್ದರು. ಕಥೆ, ಪಾತ್ರ ಇಷ್ಟವಾದ ಕಾರಣ ಒಪ್ಪಿಕೊಂಡೆ. ಇದೊಂದು ಅದ್ಭುತ ಮಸಾಲಾ ಎಂಟರ್​ಟೇನರ್​ ಆಗಲಿದೆ. ಥ್ರಿಲ್ಲರ್​, ಎಮೋಷನ್​, ಡ್ರಾಮಾ, ಆ್ಯಕ್ಷನ್​ ಎಲ್ಲವೂ ಚಿತ್ರದಲ್ಲಿದೆ.
    • ಚಿತ್ರವಿಗ ಯಾವ ಹಂತದಲ್ಲಿದೆ?
      – ಇತ್ತೀಚೆಗಷ್ಟೆ ಎರಡು ಮುಖ್ಯ ಆ್ಯಕ್ಷನ್​ ಸನ್ನಿವೇಶಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಪ್ಯಾನ್​ ಇಂಡಿಯಾ ಸಿನಿಮಾ. ಕನ್ನಡ, ತಮಿಳು, ತೆಲುಗು ಹೀಗೆ ಹಲವು ಚಿತ್ರರಂಗಗಳ ಕಲಾವಿದರು, ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಮೊದಲ ಬಾರಿಗೆ ನಾನು ದೊಡ್ಡ ಮಟ್ಟದಲ್ಲಿ ಆ್ಯಕ್ಷನ್​ ಸನ್ನಿವೇಶಗಳಲ್ಲಿ ನಟಿಸಿದ್ದೇನೆ. ಹಲವು ವಿಷಯಗಳಲ್ಲಿ ನನಗೆ ಈ ಸಿನಿಮಾ ವಿಶೇಷವಾದುದು.

    ಇದನ್ನೂ ಓದಿ : ನನಗೂ ಹೆಂಡ್ತಿ ಬೇಕು : ತಬಲಾ ನಾಣಿ, ಚೈತ್ರಾ ಕೋಟೂರ್​ ನಟಿಸಿರುವ ಕಾಮಿಡಿ ಚಿತ್ರ

    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ
    • ನಿಮ್ಮ ಪಾತ್ರ ಹೇಗಿರಲಿದೆ?
      – ನಾನೊಬ್ಬ ಆಗರ್ಭ ಶ್ರೀಮಂತನ ಪಾತ್ರದಲ್ಲಿ ನಟಿಸಿದ್ದೇನೆ. ಆತ ತನಗೆ ಗೊತ್ತಿಲ್ಲದೆಯೇ ತಪು$್ಪ ದಾರಿ ಹಿಡಿದಿರುತ್ತಾನೆ. ನಾಯಕಿ ಆತನಿಗೆ ತಪ್ಪಿನ ಅರಿವು ಮೂಡಿಸುತ್ತಾಳೆ. ಆತ ತಪು$್ಪಗಳನ್ನು ಹೇಗೆ ತಿದ್ದಿಕೊಳ್ಳುತ್ತೇನೆ ಎಂಬುದು ಕಥೆ.
    • ರಾಧಿಕಾ ಕುಮಾರಸ್ವಾಮಿ ಜತೆ ನಟಿಸಿದ ಅನುಭವ?
      – ತುಂಬ ಚೆನ್ನಾಗಿತ್ತು. ಮಾಜಿ ಸಿಎಂ ಪತ್ನಿಯಾಗಿದ್ದರೂ ಸರಳ ವ್ಯಕ್ತಿತ್ವ ಅವರದು. ಅವರು ಕನ್ನಡದಲ್ಲಿ ತುಂಬ ಹೆಸರು ಮಾಡಿರುವ ನಟಿ. ಎಲ್ಲರ ಜತೆ ಉತ್ತಮ ಒಡನಾಟ ಹೊಂದಿದ್ದಾರೆ. ಶೂಟಿಂಗ್​ ಸಮಯದಲ್ಲಿ ಎಲ್ಲರನ್ನೂ ಕೇರ್​ ಮಾಡುತ್ತಿದ್ದರು. ಆರಾಮಾಗಿ, ಯಾವುದೇ ಒತ್ತಡವಿಲ್ಲದೇ ನಟಿಸುತ್ತಾರೆ.

    ಇದನ್ನೂ ಓದಿ : ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಮಾಸ್ ಪೋಸ್ಟರ್​ ರಿಲೀಸ್​; ಟೀಸರ್​ ಡೇಟ್​​ ಬಹಿರಂಗಪಡಿಸಿದ ಚಿತ್ರತಂಡ

    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ
    • “ಪುಷ್ಪ’ ಚಿತ್ರದಲ್ಲಿ ನಿಮ್ಮ ಹಿಂದಿ ಡಬ್ಬಿಂಗ್​ಗೆ ಅದ್ಭುತ ಪ್ರತಿಕ್ರಿಯೆ ದೊರೆತಿತ್ತು.
      – ಹೌದು, ಅಲ್ಲು ಅರ್ಜುನ್​ ಪಾತ್ರಕ್ಕೆ ಹಿಂದಿಯಲ್ಲಿ ಡಬ್​ ಮಾಡಿದ್ದೆ. ಚಿತ್ರಕ್ಕೆ ತೆಲುಗಿನಲ್ಲಿ ಸಿಕ್ಕಷ್ಟೇ ಅತ್ಯುತ್ತಮ ಪ್ರತಿಕ್ರಿಯೆ ಹಿಂದಿಯಲ್ಲೂ ದೊರೆಯಿತು. ತುಂಬ ಜನ ನೀವೇ ಆ ಪಾತ್ರದಲ್ಲಿ ನಟಿಸಿದ್ದೀರೇನೋ ಎಂಬಷ್ಟು ಉತ್ತಮವಾಗಿ ಡಬ್​ ಮಾಡಿದ್ದೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    • ಕನ್ನಡ ಚಿತ್ರರಂಗದಲ್ಲಿ ಗೆಳೆಯರಿದ್ದಾರಾ?
      – 2006ರಲ್ಲಿ “ದೋರ್​’ ಚಿತ್ರದಲ್ಲಿ ನಟಿಸುವಾಗ ಅನಿರುದ್ಧ್​ ಜಾತ್ಕರ್​ ಪರಿಚಯವಾಗಿದ್ದರು. ಈಗ “ಅಜಾಗ್ರತ’ ಮೂಲಕ ಶಶಿಧರ್​, ರವಿರಾಜ್​, ರಾಧಿಕಾ ಕುಮಾರಸ್ವಾಮಿ, ರವಿವರ್ಮ ಸೇರಿ ಹಲವಾರು ಕನ್ನಡದ ಕಲಾವಿದರು, ತಂತ್ರಜ್ಞರು ಪರಿಚಯವಾಗಿದ್ದಾರೆ. ಜತೆಗೆ ತೆಲುಗು, ತಮಿಳು ಚಿತ್ರರಂಗದವರೂ ಪರಿಚಯವಾಗಿದ್ದಾರೆ.
    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ
    • ರಂಗಭೂಮಿಗಾಗಿಯೇ ಓಟಿಟಿ ವೇದಿಕೆ ಮಾಡಿದ್ದೀರಿ…
      – ನಾನು ರಂಗಭೂಮಿಯ ಹುಡುಗ. 1991ರಿಂದ 2005ರವರೆಗೆ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯನಾಗಿದ್ದೆ. ಮರಾಠಿ, ಹಿಂದಿ, ಇಂಗ್ಲೀಷ್​ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಕರೊನಾ ಸಮಯದಲ್ಲಿ ರಂಗಭೂಮಿ ಕಲಾವಿದರು, ತಂತ್ರಜ್ಞರು ಸಮಸ್ಯೆಗೆ ಸಿಲುಕಿದ್ದರು. ಹೀಗಾಗಿ ಭಾರತದ ಮೊದಲ ಓಟಿಟಿ ವೇದಿಕೆ 9ರಸ ಪ್ರಾರಂಭಿಸಿದೆ. ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಗೆ ಅದರಿಂದ ಸಹಾಯವಾಗಿದೆ.
    ಕನ್ನಡದಲ್ಲಿ ಬಾಲಿವುಡ್​ ನಟನ ಶ್ರೇಯಸ್ಸು : ರಾಧಿಕಾ ಕುಮಾರಸ್ವಾಮಿಗೆ ನಾಯಕನಾಗಿ ಶ್ರೇಯಸ್​ ತಲ್ಪಾಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts