ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆದ ದೇಶಪ್ರೇಮ ಸಾರುವ “ಆ್ಯಕ್ಟ್ 370′ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕೆ. ಶಂಕರ್ ಹೊಸ ಸಿನಿಮಾದೊಂದಿಗೆ ವಾಪಸ್ಸಾಗಿದ್ದಾರೆ. ಈ ಬಾರಿ ಅವರು “ನನಗೂ ಹೆಂಡ್ತಿ ಬೇಕು’ ಎಂಬ ಕಾಮಿಡಿ ಜಾನರ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಇದನ್ನೂ ಓದಿ: ನಿರೀಕ್ಷೆ ಮೂಡಿಸಿದ ಡಾರ್ಲಿಂಗ್ ಕೃಷ್ಣ ಅಭಿನಯದ ‘ಕೌಸಲ್ಯ ಸುಪ್ರಜಾ ರಾಮ’
ವಿಶೇಷ ಚೇತನ ವ್ಯಕ್ತಿಯೊಬ್ಬ ಮದುವೆಯಾಗಲು ಹೊರಟಾಗ ನಡೆಯುವ ಪ್ರಸಂಗಗಳನ್ನು ಹಾಸ್ಯಮಯವಾಗಿ ಹೇಳುವ ಕಥೆಯಿದೆ. ಸದ್ಯ ಚಿತ್ರದುರ್ಗದಲ್ಲಿ ಕ್ಲೆಮ್ಯಾಕ್ಸ್ ಭಾಗದ ಚಿತ್ರೀಕರಣ ಭರದಿಂದ ಸಾಗಿದೆ. ಈ ಹಿಂದೆ “ಎದ್ದೇಳು ಮಂಜುನಾಥ’ ಚಿತ್ರದಲ್ಲಿ ವಿಶೇಷ ಚೇತನನ ಪಾತ್ರದಲ್ಲಿ ಮಿಂಚಿದ್ದ ಹಾಸ್ಯನಟ ತಬಲಾ ನಾಣಿ ಈ ಚಿತ್ರದ ನಾಯಕ. ಅವರಿಗೆ ಬಿಗ್ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ನಾಯಕಿಯಾಗಿದ್ದು, ಮಾತು ಬಾರದ ಯುವತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಮಾಸ್ ಪೋಸ್ಟರ್ ರಿಲೀಸ್; ಟೀಸರ್ ಡೇಟ್ ಬಹಿರಂಗಪಡಿಸಿದ ಚಿತ್ರತಂಡ
ವಿಲನ್ಗಳಾಗಿ ಬ್ಯಾಂಕ್ ಜನಾರ್ಧನ್ ಮತ್ತು ಬಾಲು ನಟಿಸುತ್ತಿದ್ದು, ಶೃತಿ, ರಮೇಶ್ ಭಟ್, ಕಿಲ್ಲರ್ ವೆಂಕಟೇಶ್, ಗಣೇಶ್ ರಾವ್, ದೊಡ್ಡರಂಗೇಗೌಡ, ಧರ್ಮ, ಕೆಜಿಎ್ ಕೃಷ್ಣ, ಪ್ರಿಯಾಂಕಾ, ಗಾನವಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ತಲಾ ಎರಡು ೈಟ್ಸ್ ಮತ್ತು ಹಾಡುಗಳಿವೆ. ಕೆ.ಎಂ. ಇಂದ್ರ ಸಂಗೀತ ನೀಡಿದ್ದಾರೆ.