ನಿರೀಕ್ಷೆ ಮೂಡಿಸಿದ ಡಾರ್ಲಿಂಗ್​ ಕೃಷ್ಣ ಅಭಿನಯದ 'ಕೌಸಲ್ಯ ಸುಪ್ರಜಾ ರಾಮ'

Untitled design - 2023-07-25T161456.244
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಳೆದ ವಾರ 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಚಿತ್ರ ಬಿಡುಗಡೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಸಾಲಿಗೆ ಮತ್ತೊಂದು ಕನ್ನಡ ಸಿನಿಮಾ ಸೇರ್ಪಡೆಯಾಗಲಿದೆ ಎಂಬ ನಿರೀಕ್ಷೆಗಳು ಇದೀಗ ಕನ್ನಡ ಸಿನಿರಸಿಕರಲ್ಲಿ ಹೆಚ್ಚಿದೆ.

ಲವ್​ ಮಾಕ್ಟೈಲ್​ ಖ್ಯಾತಿಯ ಡಾರ್ಲಿಂಗ್​ ಕೃಷ್ಣ ನಟನೆಯ 'ಕೌಸಲ್ಯ ಸುಪ್ರಜಾ ರಾಮ' ಚಿತ್ರ ಇದೀಗ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಇತ್ತೀಚೆಗಷ್ಟೇ ಟ್ರೇಲರ್​ ಬಿಡುಗಡೆಗೊಳಿಸಿದ ಚಿತ್ರತಂಡಕ್ಕೆ ಪ್ರೇಕ್ಷಕರಿಂದ ಮತ್ತು ಚಿತ್ರರಂಗದಿಂದ ಉತ್ತಮ ಅಭಿಪ್ರಾಯ ದೊರಕಿದೆ.

'ಲವ್​ 360' ಚಿತ್ರದ ನಿರ್ದೇಶಕ ಶಶಾಂಕ್​ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದು, ಬಿ.ಸಿ. ಪಾಟೀಲ್​ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಮ್ಯಾಜಿಕಲ್ ಕಂಪೋಸರ್​ ಅರ್ಜುನ್​ ಜನ್ಯ ಸಂಗೀತ ಸಂಯೋಜಿಸಿದ್ದು, ಇದೇ ಜುಲೈ 28, 2023 ರಂದು ಚಿತ್ರ ತೆರೆಯ ಮೇಲೆ ಬರಲು ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net