More

    ವಿಶ್ವದಲ್ಲೇ ಗರಿಷ್ಠ ದ್ವಿಚಕ್ರ ವಾಹನ ಹೊಂದಿರುವ ದೇಶ ಭಾರತ: ಈ ರಾಷ್ಟ್ರವನ್ನು ಹಿಂದಿಕ್ಕಿ ಅಗ್ರಸ್ಥಾನ..

    ದೆಹಲಿ: ವಿಶ್ವದಲ್ಲೇ ಗರಿಷ್ಠ ನೋಂದಾಯಿತ ದ್ವಿಚಕ್ರ ವಾಹನಗಳನ್ನು ಹೊಂದಿರುವ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದ್ದು, ಈ ಮೂಲಕ ಗರಿಷ್ಠ ದ್ವಿಚಕ್ರ ವಾಹನ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಚೀನಾ ದೇಶವನ್ನು ಭಾರತ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

    ಇದನ್ನೂ ಓದಿ: ಮತ್ತೊಂದು ಅಮಾನವೀಯ ಘಟನೆ: ಬೈಕ್​​ನ​ ಹಿಂಬದಿಗೆ ಮಂಚ ಕಟ್ಟಿ ಯುವಕನ ಮೃತದೇಹ ಹೊತ್ತೊಯ್ದ ಕುಟುಂಬಸ್ಥರು

    ರೋಡ್ ಟ್ರಾನ್ಸ್ ಪೋರ್ಟ್ ಈಯರ್ ಬುಕ್​ನ ಇತ್ತೀಚಿನ ವರದಿಯ ಪ್ರಕಾರ, ಭಾರತವು ಗರಿಷ್ಠ ಸಂಖ್ಯೆಯ ನೋಂದಾಯಿತ ದ್ವಿಚಕ್ರ ವಾಹನಗಳನ್ನು ಹೊಂದಿದೆ ಮತ್ತು ಇಂಡೋನೇಷ್ಯಾ ನಂತರದ ಸ್ಥಾನದಲ್ಲಿದೆ. ಆದರೆ ಪ್ರಯಾಣಿಕ ಕಾರುಗಳ ಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ ಎಂಟನೇ ಸ್ಥಾನದಲ್ಲಿದ್ದರೆ, ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜಪಾನ್ ಮೊದಲ ಮೂರು ಸ್ಥಾನದಲ್ಲಿವೆ. 2020ರ ಅಂತಾರಾಷ್ಟ್ರೀಯ ರಸ್ತೆ ಒಕ್ಕೂಟದ ಅಂಕಿ ಅಂಶಗಳ ಆಧಾರದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

    ಭಾರತದ ನೋಂದಾಯಿತ ವಾಹನಗಳ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವರದಿಯ ಪ್ರಕಾರ, 2020ರಲ್ಲಿ ಭಾರತವು 32.63 ಕೋಟಿ ವಾಹನಗಳನ್ನು ಹೊಂದಿದ್ದು, ಇವುಗಳಲ್ಲಿ ಸುಮಾರು 75% ದ್ವಿಚಕ್ರ ವಾಹನಗಳಾಗಿವೆ.

    ಇದನ್ನೂ ಓದಿ: ಅವಳಿ ಹೆಣ್ಣು ಮಕ್ಕಳ ಪ್ರಾಣ ತೆಗೆದ ಹೆತ್ತ ತಾಯಿ; 13 ದಿನಗಳ ಬಳಿಕ ಬೆಳಕಿಗೆ ಬಂದ ಘಟನೆ

    ಮಹಾರಾಷ್ಟ್ರವು ಗರಿಷ್ಠ ಸಂಖ್ಯೆಯ ನೋಂದಾಯಿತ ವಾಹನಗಳನ್ನು (3.78 ಕೋಟಿ) ಹೊಂದಿದ್ದು, ಉತ್ತರ ಪ್ರದೇಶ (3.49 ಕೋಟಿ) ಮತ್ತು ತಮಿಳುನಾಡು (3.21 ಕೋಟಿ) ನಂತರದ ಸ್ಥಾನದಲ್ಲಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸುತ್ತವೆ. ಆದರೆ ನಗರಗಳನ್ನು ಮಾತ್ರ ಪರಿಗಣಿಸಿದಾಗ, ದೆಹಲಿಯು ಸುಮಾರು 1.18 ಕೋಟಿ ನೋಂದಾಯಿತ ವಾಹನಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಬೆಂಗಳೂರು 96.4 ಲಕ್ಷ ವಾಹನಗಳನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ.

    ಏತನ್ಮಧ್ಯೆ, ಕಳೆದ ಮೂರು ವರ್ಷಗಳಲ್ಲಿ, ಎರಡು ಕೋಟಿಗಿಂತ ಸ್ವಲ್ಪ ಹೆಚ್ಚು ವಾಹನಗಳು ನೋಂದಾಯಿಸಲ್ಪಟ್ಟಿದ್ದು ಪ್ರಸಕ್ತ ಸಾಲಿನ ಜುಲೈ ಮಧ್ಯದವರೆಗೆ ಸರ್ಕಾರದ ವಾಹನ್ ಪೋರ್ಟಲ್​​ನಲ್ಲಿ ಒಟ್ಟು ಸಂಖ್ಯೆಯನ್ನು ಸುಮಾರು 34.8 ಕೋಟಿ ತಲುಪಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts