More

  ಸರ್ಕಾರದಲ್ಲಿ ಭುಗಿಲೆದ್ದ ಅಸಮಾಧಾನ: ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರಿಂದಲೇ ಸಿಎಂಗೆ ದೂರು

  ಬೆಂಗಳೂರು: ಕಾಂಗ್ರೆಸ್​ ಸರ್ಕಾರವು ಆಡಳಿತಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದೆ. ಸರ್ಕಾರ ಬಂದು ಕೇವಲ 2-3 ತಿಂಗಳುಗಳಾಗಿದ್ದು, ಸಚಿವರ ವಿರುದ್ಧ 30 ಶಾಸಕರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆ ಸಿಎಂಗೆ ದೂರು ನೀಡಲಾಗಿದೆ.

  ಇದನ್ನೂ ಓದಿ: ಅವಳಿ ಹೆಣ್ಣು ಮಕ್ಕಳ ಪ್ರಾಣ ತೆಗೆದ ಹೆತ್ತ ತಾಯಿ: 13 ದಿನಗಳ ಬಳಿಕ ಬೆಳಕಿಗೆ ಬಂದ ಘಟನೆ

  ಸ್ವಪಕ್ಷೀಯ ಸಚಿವರ ವಿರುದ್ಧವೇ ಆಳಂದ ಶಾಸಕ ಬಿ.ಆರ್​​.ಪಾಟೀಲ್ ಲೆಟರ್​​ಹೆಡ್​​ನಲ್ಲಿ ಸಿಎಂ ಸಿದ್ದರಾಮಯ್ಯಗೆ ಪತ್ರಮುಖೇನ ದೂರು ನೀಡಲಾಗಿದೆ. ಬಿ.ಆರ್ ಪಾಟೀಲ್, ಬಸವರಾಜ್ ರಾಯರೆಡ್ಡಿ, ಯಶವಂತ ರಾಯಗೌಡ ಪಾಟೀಲ್, ಅಪ್ಪಾಜಿ ನಾಡಗೌಡ, ಶಿವಲಿಂಗೇಗೌಡ, ನರೇಂದ್ರಸ್ವಾಮಿ, ಎಂ. ಕೃಷ್ಣಪ್ಪ, ಪ್ರಿಯಕೃಷ್ಣ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಎ.ಆರ್. ಕೃಷ್ಣಮೂರ್ತಿ ಮತ್ತು ಅಲ್ಲಮ ಪ್ರಭು ಪಾಟೀಲ್ ಸೇರಿದಂತೆ ಸುಮಾರು 30 ಶಾಸಕರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

  ಶಾಸಕರ ದೂರು ನೀಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಗುರುವಾರ ಸಂಜೆ 4 ಗಂಟೆಗೆ ಶಾಸಕಾಂಗ ಸಭೆ ಕರೆದಿದ್ದು, ಈ ವಿಷಯದ ಕುರಿತಾಗಿ ಚರ್ಚಿಸಲಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts