More

    ನದಿಯಿಂದ ಡಾಲ್ಫಿನ್ ಹಿಡಿದು ತಿಂದ ಮೀನುಗಾರರು: ಪ್ರಕರಣ ದಾಖಲಿಸಿ ಓರ್ವನನ್ನು ಬಂಧಿಸಿದ ಪೊಲೀಸರು

    ಕೌಶಂಬಿ: ಯಮುನಾ ನದಿಯಿಂದ ಅಕ್ರಮವಾಗಿ ಡಾಲ್ಫಿನ್​​ನ್ನು ಹಿಡಿದು ತಿಂದ ಆರೋಪದಡಿ ಓರ್ವನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಇದನ್ನೂ ಓದಿ: ಸಾಂಪ್ರದಾಯಿಕವಾಗಿ ಸಾಕ್ಷಾತ್​​ ಶಿವನನ್ನೇ ಮದುವೆಯಾದ ಯುವತಿ: ಕುಟುಂಬಸ್ಥರಿಂದ ಸಾಥ್​​..!

    ಈ ಕುರಿತಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಸೋಮವಾರದಂದು ಚೈಲ್ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಈ ಕುರಿತು ದೂರನ್ನು ನೀಡಿದ್ದರು. ಇದರ ಆಧಾರದ ಮೇಲೆ ರಂಜೀತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ರಂಜೀತ್ ಕುಮಾರ್​​ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಉಳಿದ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ನಸೀರ್‌ಪುರ ಗ್ರಾಮದ ನಾಲ್ವರು ಮೀನುಗಾರರು ಜುಲೈ 22ರಂದು ಬೆಳಿಗ್ಗೆ ಯಮುನಾದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಬಲೆಯಲ್ಲಿ ಡಾಲ್ಫಿನ್ ಸಿಕ್ಕಿಬಿದ್ದಿದ್ದು, ಕೂಡಲೇ ಅವರು ನದಿಯಿಂದ ಡಾಲ್ಫಿನ್​ನ್ನು ತಮ್ಮ ಭುಜದ ಮೇಲೆ ಮನೆಗೆ ಸಾಗಿಸಿ ಮನೆಯಲ್ಲಿ ಅದನ್ನು ಬೇಯಿಸಿ ತಿಂದಿದ್ದಾರೆ ಪಿಪ್ರಿ ಪೊಲೀಸ್​​​ ಠಾಣೆಯ ಅಧಿಕಾರಿ ಹೇಳಿದ್ಧಾರೆ.

    ಕೆಲವು ದಾರಿಹೋಕರು ಮೀನುಗಾರರು ಡಾಲ್ಫಿನ್​​ನ್ನು ಸಾಗಿಸುತ್ತಿರುವಾಗ ವೇಳೆ ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts