

ಭಾಮ್ರಗಡ: ಕ್ಷಯರೋಗದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯನ್ನು ಗಾಡಿಗೆ ಕಟ್ಟಿಕೊಂಡು ಗ್ರಾಮಕ್ಕೆ ತಂದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಭಾಮ್ರಗಡದ ಗಚ್ಚಿರೋಲಿ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಸರ್ಕಾರದಲ್ಲಿ ಭುಗಿಲೆದ್ದ ಅಸಮಾಧಾನ: ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರಿಂದಲೇ ಸಿಎಂಗೆ ದೂರು
ಕ್ಷಯರೋಗದಿಂದ ಬಳಲುತ್ತಿದ್ದ ಗಣೇಶ್ನನ್ನು ಎಂಬಾತನನ್ನು ಜುಲೈ 17ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ವೇಳೆ ಜುಲೈ 20ರಂದು ಮೃತಪಟ್ಟಿದ್ದನು. ಈ ವೇಳೆ ಸಕಾಲಕ್ಕೆ ಆಂಬ್ಯುಲೆನ್ಸ್ ಸಿಗದ ಕಾರಣ ಆತನ ಮೃತದೇಹವನ್ನು ದ್ವಿಚಕ್ರ ಕಟ್ಟಿಗೆ ಮಂಚದ ಮೇಲೆ ಮಲಗಿಸಿ ವಾಹನಕ್ಕೆ ಕಟ್ಟಿ ಗ್ರಾಮಕ್ಕೆ ಕೊಂಡೊಯ್ಯಲಾಗಿದೆ.